ಆದ್ಯೋತ್ ಸುದ್ದಿನಿಧಿ;
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಕನ್ನಡಿಗರ ಮಾತೆ ಎನಿಸಿದ ಶ್ರೀ ಕ್ಷೇತ್ರ ಭುವನಗಿರಿಯ ಶ್ರೀ ಭುವನೇಶ್ವರೀ ದೇವಿಯ ಸನ್ನಿಧಿಯಲ್ಲಿ ಕನ್ನಡ ರಾಜ್ಯೋತ್ಸವದಂದು “ಮಾತೃವಂದನಾ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ ಮಧುಸೂಧನ ಕುಲಕರ್ಣಿ ಮಾತನಾಡಿ,ಭುವನಗಿರಿಯ ಶ್ರೀ ಭುವನೇಶ್ವರೀ ದೇವಿಯ ತಾಣವು ಜಾಗೃತ ಸ್ಥಳವಾಗಿ ಗುರುತಿಸಿಕೊಂಡಿದೆ. ನಮ್ಮಂತಹ ಅಧಿಕಾರಿಗಳು ಎಲ್ಲಿಂದಲೋ ಬಂದು ಇಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಸೌಭಾಗ್ಯ ಸಿದ್ದಾಪುರ ತಾಲೂಕು ವಿಶೇಷತೆಯಿಂದ ಕೂಡಿದ ತಾಲೂಕು. ಇಲ್ಲಿಯ ಸಾಂಸ್ಕೃತಿಕ, ಸಾಹಿತ್ಯಕ ಹಿನ್ನೆಲೆ ಗಣನೀಯವಾದುದು. ರಾಜ್ಯದ ಗಮನ ಸೆಳೆದಿರುವ ಶ್ರೀ ಕ್ಷೇತ್ರ ಭುವನಗಿರಿಯಲ್ಲಿ ಸನ್ಮಾನ ಹಾಗೂ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಮುಖ್ಯಾಧ್ಯಾಪಕ ಆರ್.ಎಸ್.ಹೆಗಡೆ ಶಿರಸಿ ಮಾತನಾಡಿ, ಉಳಿದ ಕೆಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಐಎಎಸ್ ಮಾಡುವವರ ಸಂಖ್ಯೆ ಕಡಿಮೆಯಿದೆ. ಕನ್ನಡ ನಾಡಿನ ಮಕ್ಕಳೂ ಕೆಎಎಸ್, ಐಎಎಸ್ ಮಾಡಿ ರಾಜ್ಯ ಹಾಗೂ ದೇಶದ ಸೇವೆಯಲ್ಲಿ ತೊಡಗಿಕೊಳ್ಳುವಂತಾಗಬೇಕೆAದರು.
ಮಾತೃವಂದನಾ ಸಮಿತಿಯ ಗೌರವ ಸಲಹೆಗಾರರಾದ ಎ.ಪಿ.ಭಟ್ಟ ಮುತ್ತಿಗೆ,ತಾ.ಪಂ.ಕಾರ್ಯನಿರ್ವಹಣಾ ಅಧಿಕಾರಿ ದೇವರಾಜ ಹಿತ್ತಲಕೊಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಕಮಲಾಕರ ಹೆಗಡೆ ಹುಕ್ಲಮಕ್ಕಿ, ಖ್ಯಾತ ಸ್ತಿçÃರೋಗ ತಜ್ಞ ಡಾ.ಕೆ.ಶ್ರೀಧರ ವೈದ್ಯ, ಖ್ಯಾತ ಅರಿವಳಿಕೆ ತಜ್ಞ ವೈದ್ಯೆ ಡಾ.ಸುಮಂಗಲಾ ವೈದ್ಯ, ರಾಜ್ಯ ಉತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಪುರಸ್ಕೃತ ತಹಶೀಲ್ದಾರ ಮಧುಸೂಧನ ಆರ್.ಕುಲಕರ್ಣಿ ಅವರುಗಳಿಗೆ “ಶ್ರೀ ಮಾತಾ ಅನುಗ್ರಹ” ಗೌರವ ಸಂಮಾನ ಪ್ರದಾನ ಮಾಡಲಾಯಿತು.
ಸನ್ಮಾನಿತರ ಪರವಾಗಿ ಡಾ.ಕೆ.ಶ್ರೀಧರ ವೈದ್ಯ ಮಾತನಾಡಿ ವೈದ್ಯರಾದವರು ತಮ್ಮಲ್ಲಿಗೆ ಬಂದ ರೋಗಿಗಳೆಲ್ಲ ನಮ್ಮವರು, ಅವರ ನೋವು ನಮ್ಮದು ಎಂಬ ಭಾವನೆಯಿಂದ ವಾತ್ಸಲ್ಯಪೂರಿತ ಸೇವೆ ಸಲ್ಲಿಸಬೇಕು. ರೋಗಿಗಳ ಕುರಿತು ಕರುಣೆ ವ್ಯಕ್ತಮಾಡುವುದಕ್ಕಿಂತ ಅವರಲ್ಲಿ ಮನೋಸ್ಥೆöÊರ್ಯ ತುಂಬಬೇಕು.ರಾಜ್ಯೋತ್ಸವದ ದಿನ ಕನ್ನಡ ಮಾತೆಯ ಮಡಿಲಲ್ಲಿ ನಮಗೆಲ್ಲಾ ಗೌರವ ಪ್ರಶಸ್ತಿ ನೀಡಿದ್ದು ಸಂತಸದಾಯಕ ಎಂದರು.
ಮಕ್ಕಳ ತಜ್ಞ ವೈದ್ಯ ಡಾ.ಶ್ರೇಯಸ್ ವೈದ್ಯ, ಶ್ರೀ ಸೇವಾ ಸಂಕಲ್ಪ ಟ್ರಸ್ಟಿನ ಅಧ್ಯಕ್ಷ ಪಿ.ಬಿ.ಹೊಸೂರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಶ್ರೀ ಕ್ಷೇತ್ರ ಭುವನಗಿರಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಭುವನೇಶ್ವರೀ ಮಾತೆಗೆ ಪೂಜೆ, ಕನ್ನಡ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಡೊಂಬೆಕೈ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಮುತ್ತಿಗೆಯ ನಾಗವೇಣಿ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಮಾತೃವಂದನಾ ಸಮಿತಿಯ ಕಾರ್ಯಾಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಪ್ರಶಾಂತ ಹೆಗಡೆ ಸ್ವಾಗತಿಸಿದರು. ಶ್ರೀಧರ ಹೆಗಡೆ ಬಲ್ಗಣಿ, ಸುದರ್ಶನ ಹೆಗಡೆ ಗುಂಜಗೋಡ, ರಾಜೇಶ್ವರಿ ವಿನಾಯಕ ಭಟ್ಟ ಡೊಂಬೆಕೈ, ಸಿಂಚನಾ ಪ್ರಶಾಂತ ಹೆಗಡೆ ಕಾಶಿಗದ್ದೆ ಸನ್ಮಾನಪತ್ರ ವಾಚಿಸಿದರು. ಸಮಿತಿಯ ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರೆ, ಜಯಪ್ರಕಾಶ ಭಟ್ಟ ಮುತ್ತಿಗೆ ವಂದಿಸಿದರು.