ಆದ್ಯೋತ್ ಸುದ್ದಿನೀಧಿ:
ಉತ್ತರಕನ್ನಡ ಸಿದ್ದಾಪುರದಲ್ಲಿ ಹೆರಿಗೆಯ ನಂತರ ಆರೋಗ್ಯದಲ್ಲಿ ಏರು-ಪೇರುಗೊಂಡು ಮಹಿಳೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದ್ದು ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದು ಪರಿಹಾರ ನೀಡಬೇಕು ಹಾಗೂ ವೈದ್ಯರನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಆಸ್ಪತ್ರೆ ಎದುರುಗಡೆ ಶವವನ್ನಿಟ್ಟು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಜ್ಯೋತಿರವಿ ನಾಯ್ಕ (36) ಮೃತಪಟ್ಟ ಮಹಿಳೆಯಾಗಿದ್ದಾಳೆ. ನ.6ರಂದು ತಾಲ್ಲೂಕು ಆಸ್ಪತ್ರೆಯ ವೈದ್ಯರು ಜ್ಯೋತಿಯವರಿಗೆ ಸಿಜೆರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾರೆ.ನಂತರ ರಕ್ತ ಸ್ರಾವ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.ಆದರೆಚಿಕಿತ್ಸೆ ಫಲಕಾರಿಯಾಗದೇ ನ.8
ಶುಕ್ರವಾರ ಬೆಳಿಗ್ಗೆ ಜ್ಯೋತಿ ಮೃತಪಟ್ಟಿದ್ದಾಳೆ.
ತಾಲ್ಲೂಕು ಆಸ್ಪತ್ರೆಯಲ್ಲಿ ಕಳೆದ 8 ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ತಾಲ್ಲೂಕುಆಸ್ಪತ್ರೆಯ ಎದುರು ಶವವನ್ನಿಟ್ಟು 6೦೦ ಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಿದರು. ಎರಡು ದಿನದ ಹಿಂದೆ ಸಾರ್ವಜನಿಕರು ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪ್ರತಿಭಟನೆ ನಡೆಸಿದ್ದರು.
ವೈದ್ಯರು ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ. ಹಲವಾರು ಬಾರಿ ನಾವು ಪ್ರತಿಭಟನೆ ನಡೆಸಿ ಆಸ್ಪತ್ರೆಯ ವ್ಯವಸ್ಥೆಯನ್ನು ಸುಧಾರಣೆಗೊಳಿಸಲು ಮನವಿ ಮಾಡಿದ್ದೆವು. ಮೃತ ಪಟ್ಟ ಮಹಿಳೆಯರ ಕುಟುಂಬಗಳಿಗೆ ತಲಾ ೫೦ ಲಕ್ಷದಂತೆ ವೈದ್ಯರು ಪರಿಹಾರ ನೀಡಬೇಕು .ಅವರ ಮಕ್ಕಳ ಮುಂದಿನ ಜೀವನಕ್ಕೆ ನೆರವು ಮಾಡಿಕೊಡಬೇಕುಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಂ ಕೆ ತಿಮ್ಮಪ್ಪ ಹೇಳಿದರು.
ವೈದ್ಯರು ಹೆರಿಗೆಗೆ ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ.ವೈದ್ಯರಿಗೆ ಹಲವಾರು ಬಾರಿಎಚ್ಚರಿಕೆಯನ್ನು ನೀಡಲಾಗಿದೆ.ಎಚ್ಚರಿಕೆ ನೀಡಿದಾಗ ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತಮಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದರು.ಆದರೆ ಈ ದುರ್ಘಟನೆ ಸಂಭವಿಸಿರುವುದು ನಮಗೆಲ್ಲದುಃಖತಂದಿದೆ.ಆದ್ದರಿಂದ ಪಕ್ಷಾತೀತವಾಗಿಇಂದುತಾಲ್ಲೂಕಿನಾದ್ಯಂತ ಸಾರ್ವಜನಿಕರು ಸೇರಿಒತಾಯಿಸುತ್ತಿರುವುದೇನೆಂದರೆ ಮೃತ ಮಹಿಳೆಯರ ಕುಟುಂಬಕ್ಕೆ ಪರಿಹಾರ ನೀಡಿ ಕುಟುಂಬಕ್ಕೆ ನೆರವಾಗಬೇಕು. ಈ ಕೂಡಲೇ ವೈದ್ಯರನ್ನುಅಮಾನತ್ತು ಮಾಡಿ ಆದೇಶ ಜಾರಿಗೊಳಿಸಬೇಕು. ಅವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ವಿಧಿಸಿ ಜೈಲಿಗೆ ಕಳಿಸಬೇಕು.ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪಕ್ಷಾತೀತವಾಗಿ ತಾಲ್ಲೂಕಿನಾದ್ಯಂತ ಉಗ್ರ ಪ್ರತಿಭಟನೆಗೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷ ವಸಂತ ನಾಯ್ಕ ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಶಿರಸಿಯ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು ಫಲಕಾಣಲಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಗಳು ಆಗಮಿಸಿ ಭರವಸೆ ನೀಡಲು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸಂಜೆ 8 ಗಂಟೆಯ ಸುಮಾರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಜ್ ಬಿ.ವಿ.ಆಗಮಿಸಿ ಪರಿಹಾರ ನೀಡುವ ಹಾಗೂ ವೈದ್ಯರ ಅಮಾನತ್ತಿಗೆ ಶಿಪಾರಸ್ಸು ಮಾಡುವ ಭರವಸೆ ನೀಡಿದರು ನಂತರ ಪ್ರತಿಭಟನೆ ಹಿಂಪಡೆಯಲಾಯಿತು
#####
30ವರ್ಷದ ನಂತರ ಮಹಿಳೆಯರು ಗರ್ಭಧರಿಸಿದರೆ ಅಪಾಯವಾಗುವ ಸಾಧ್ಯತೆ ಇದೆ.ವೈದ್ಯರ ನಿರ್ಲಕ್ಷದ ಆರೋಪ ಇದೆ. ಅವರ ಅಮಾನತಿಗೆ ಶಿಫಾರಸ್ಸು ಮಾಡಲಾಗುವುದು.ಮೃತಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಜ ಬಿ.ವಿ. ಆದ್ಯೋತ್ ನ್ಯೂಸ್ ಗೆ ತಿಳಿಸಿದರು.