ಸಿದ್ದಾಪುರ: ಕೈಗಾರಿಕಾವಲಯಕ್ಕೆ ಮಂಜೂರಾದ ಭೂಮಿಯನ್ನು ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ


ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಮನಮನೆ ಗ್ರಾಪಂ ವ್ಯಾಪ್ತಿಯ ಮಳವಳ್ಳಿಯಲ್ಲಿ ಕೈಗಾರಿಕಾವಲಯವನ್ನು ಸ್ಥಾಪಿಸಲು ಗೋಮಾಳದ ಜಮೀನು ಮಂಜೂರು ಮಾಡಲಾಗಿದ್ದು ಕೂಡಲೇ ಈ ಮಂಜೂರಾತಿಯನ್ನು ರದ್ದುಪಡಿಸಿ ಜಾನುವಾರುಗಳ ಮೇವಿಗೆ ಅನುಕೂಲ ಕಲ್ಪಿಸಬೆಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಪ್ರಮುಖ ಹಿತೇಂದ್ರ ನಾಯ್ಕ ನೇತೃತ್ವದಲ್ಲಿ ಮಲವಳ್ಳಿ ಗ್ರಾಮಸ್ಥರು ಜಾನುವಾರು ಸಹಿತ ಹೊಸೂರು ಸಾಗರವೃತ್ತದಿಂದ ತಹಸೀಲ್ದಾರ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿ ತಹಸೀಲ್ದಾರ ಮಧುಸೂಧನ ಕುಲಕರ್ಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಿತೇಂದ್ರ ನಾಯ್ಕ ಮಾತನಾಡಿ,ನೂರಾರು ವರ್ಷಗಳಿಂದ ಮಲವಳ್ಳಿ ಗ್ರಾಮಸ್ಥರು ಸರ್ವೆನಂ.64-67ರಲ್ಲಿ ಗೊವುಗಳ ಮೇವಿಗಾಗಿ ಬಳಸಿಕೊಳ್ಳುತ್ತಾ ಬಂದಿದ್ದು ಈಗ ಇದನ್ನು ಕೈಗಾರಿಕಾವಲಯ ಎಂದು ಘೋಷಿಸಿ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ.1೦೦ ಜಾನುವಾರುಗಳಿಗೆ 3೦ಎಕರೆ ಮೇವಿನ ಪ್ರದೇಶ ಇರಬೇಕೆಂದು ನಿಯಮವಿದೆ.ಮಲವಳ್ಳಿ ಗ್ರಾಮದಲ್ಲಿ 900ಕ್ಕೂ ಹೆಚ್ಚು ಜಾನುವಾರುಗಳಿವೆ ನಿಯಮದ ಪ್ರಕಾರ 3೦೦ಎಕರೆ ಪ್ರದೇಶ ಬೇಕು ಆದರೆ ಇರುವ 47ಎಕರೆ ಪ್ರದೇಶವನ್ನು ವಶಪಡಿಸಿಕೊಂಡರೆ ಜಾನುವಾರುಗಳ ಗತಿ ಏನು? ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಮೇವು ಸಿಗುತ್ತದೆ ಎಂದು ತಹಸೀಲ್ದಾರ ಷರಾ ಬರೆಯುತ್ತಾರೆ. ಆದರೆ ಮೀಸಲು ಅರಣ್ಯದಲ್ಲಿ ಜಾನುವಾರುಗಳ ಮೇಯಿಸಲು ಅವಕಾಸ ಕೊಡುವುದಿಲ್ಲ ಎಂದು ಅರಣ್ಯ ಇಲಾಖೆಯವರು ಹೇಳುತ್ತಾರೆ ಹಾಗಾದರೆ ರೈತರು ಜಾನುವಾರುಗಳನ್ನು ಎಲ್ಲಿಗೆ ಒಯ್ಯಬೇಕು ಎಂದು ಪ್ರಶ್ನಿಸಿದರು.

ಇಲ್ಲಿ ಗುಡಿಕೈಗಾರಿಕೆ ಬರುತ್ತದೆ ನೂರಾರುಜನರಿಗೆ ಉದ್ಯೋಗ ದೊರಕುತ್ತದೆ,ಒಮ್ಮೆ ಮಂಜೂರಾದ ಜಮೀನು ರದ್ದುಪಡಿಸಲು ಬರುವುದಿಲ್ಲ ಎಂದು ಶಾಸಕರು ಹೇಳುತ್ತಾರೆ ಸರಿಯಾಗಿ ಆಸ್ಪತ್ರೆಯನ್ನು ನಿರ್ವಹಿಸಲಾರದವರು ಶವ ಇಟ್ಟು ಪ್ರತಿಭಟನೆ ನಡೆಸಿದಾಗಲೂ ಬಾರದವರು ಗುಡಿಕೈಗಾರಿಕೆಯನ್ನು ಸರಿಯಾಗಿ ನಡೆಸುತ್ತಾರೆಯೇ? ಮುಡಾದ ಸೈಟ್‌ಗಳನ್ನ ವಾಪಸ್ಸ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದಾದರೆ ಈ ಪ್ರದೇಶವನ್ನು ವಾಪಸ್ಸ ರೈತರಿಗೆ ನೀಡಬಹುದಲ್ಲ ನಾವು ಕೈಗಾರಿಕಾ ವಲಯ ಸ್ಥಾಪಿಸುವ ಬಗ್ಗೆ ವಿರೋಧಿಸುವುದಿಲ್ಲ ಈ ಜಾಗದಲ್ಲಿ ಬೇಡ ಪಕ್ಕದಲ್ಲಿ ಅರಣ್ಯಭೂಮಿ ಇದೆ ಮಂಜೂರು ಮಾಡಲಿ ಕೇವಲ ಕೈಗಾರಿಕಾವಲಯ ಮಾತ್ರವಲ್ಲ ಮೆಡಿಕಲ್ ಕಾಲೇಜ್ ಸುಸಜ್ಜಿತ ಆಸ್ಪತ್ರೆಯೂ ನಿರ್ಮಾಣವಾಗಲಿ ಎಂದು ಹೇಳಿದರು.

ಜಾನುವಾರುಗಳನ್ನು ತಹಸೀಲ್ದಾರ ಕಚೇರಿಯ ಆವರಣದೊಳಗೆ ತರಲು ಪೊಲೀಸ್‌ರು ಅವಕಾಶ ಕೊಡಲಿಲ್ಲ ಈ ಬಗ್ಗೆ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
.

About the author

Adyot

Leave a Comment