87ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ವಾಟಾಳ ನಾಗರಾಜರನ್ನು ಆಯ್ಕೆ ಮಾಡಲು ಆಗ್ರಹ


ಆದ್ಯೋತ್ ಸುದ್ದಿನಿಧಿ;
ಕನ್ನಡಕ್ಕಾಗಿ ಸತತವಾಗಿ ಹೋರಾಟ ನಡೆಸುತ್ತಿರುವ ವಾಟಾಳ್ ನಾಗರಾಜರನ್ನು ೮೭ನೇ ಸಆಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕದಂಬಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಆಗ್ರಹಿಸಿದರು.
ಕನ್ನಡ ನಾಡು ನುಡಿ ನೆಲ ಜಲ ಕನ್ನಡಿಗರ ಸಂರಕ್ಷಣೆ, ಉದ್ಯೋಗಕ್ಕಾಗಿ, ಹಿಂದಿ ಹೇರಿಕೆ, ಮಹಾಜನ್ ವರದಿ ಜಾರಿಗಾಗಿ, ಕಾವೇರಿ-ಮಹಾದಾಯಿ ನೀರಿನ ಸಮಸ್ಯೆ ಬಂದಾಗ,ಕನ್ನಡಕ್ಕೆ ಧಕ್ಕೆ ಆದಾಗ,ಉದು೯ಭಾಷೆಯನ್ನು ವಾರ್ತೆಗೆ ಸೇರಿಸಿದಾಗ,ಕನ್ನಡ ವಿರೋಧಿತನ ತೋರುವ ಇತರ ಭಾಷಿಕರ ವಿರುದ್ದ ಅದರಲ್ಲೂ ಗಡಿಭಾಗದ ಎಂಇಎಸ್ ಪುಂಡಾಟಿಕೆಯ ವಿರುದ್ದ ಬೆಂಗಳೂರುನಲ್ಲಿ ಕನ್ನಡ ಚಲನಚಿತ್ರಗಳ ಬಿಡುಗಡೆಗೆ ಅವಕಾಶ ಇಲ್ಲದೆ ಇದ್ದಾಗ ಹೀಗೆ ಕಳೆದ ೬೦ ದಶಕಗಳಿಂದ ನಿರಂತರವಾಗಿ ವಾಟಾಳರು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟದ್ದಾರೆ ಆಡು ಮುಟ್ಟದ ಸೊಪ್ಪು ಇಲ್ಲ ವಾಟಾಳ್ ನಾಗರಾಜ್ ಹೋರಾಟ ಮಾಡದೇ ಇರುವ ಒಂದೇ ಒಂದು ಪ್ರಸಂಗವಿಲ್ಲ.ಬೂಟಿನ ಏಟು, ಅವಮಾನ , ಲಾಠಿ ಏಟು ಜೈಲುವಾಸ, ನಾನಾ ಸಂಕಷ್ಟಗಳನ್ನು ಎದುರಿಸಿದ್ದಾರೆ ಶಾಸಕರಾಗಿದ್ದಾಗ ಸದನದ ಒಳಗೆ, ಹೊರಗೆ ಹೋರಾಟ ಗೋಕಾಕ್ ಚಳುವಳಿ ಡಾ ರಾಜಕುಮಾರ ಜೊತೆ ಹೋರಾಟ ಮಾಡಿದ್ದಾರೆ ಇಂತಹ ವ್ಯಕ್ತಿಯನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದರೆ ಈಡೀ ಕನ್ನಡನಾಡಿಗೆ ನಿಡಿದ ಗೌರವವಾಗುತ್ತದೆ ಎಂದು ಹೇಳಿದರು.

ಈಗೀನ ಬಹುತೇಕ ಸಾಹಿತಿಗಳು ಸರ್ಕಾರವನ್ನು ಪರೋಕ್ಷವಾಗಿ ಸ್ವಾರ್ಥಕಕ್ಕಾಗಿ ಬೆಂಬಲಿಸಿ, ನಾಡು ನುಡಿ ನೆಲ ಜಲ ಕನ್ನಡಿಗರ ಸಂರಕ್ಷಣೆ ಉದ್ಯೋಗಕ್ಕಾಗಿ ಹಿಂದಿ ಹೇರಿಕೆ ವಿರುದ್ಧ ಹೋರಾಟವನ್ನೆ ಮಾಡುತ್ತಿಲ್ಲ ಸಾಹಿತ್ಯಪರಿಷತ್ ಕೂಡಾ ಯಾವುದೇ ಧ್ವನಿ ಎತ್ತುತ್ತಿಲ್ಲ ಸಾಹಿತ್ಯಪರಿಷತ್‌ನ ರಾಜ್ಯಾಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಮಂಡ್ಯಜಿಲ್ಲೆಸಾಹಿತ್ಯಪರಿಷತ್ ಗೆ ಜಿಲ್ಲಾಧ್ಯಕ್ಷರನ್ನೆ ನೇಮಕ ಮಾಡಿಲ್ಲ ಜಿಲ್ಲಾಧ್ಯಕ್ಷರಿಲ್ಲದೆ ಸಮ್ಮೇಳನ ಮಾಡಲು ಹೊರಟಿದ್ದಾರೆ. ಕನ್ನಡಕ್ಕಾಗಿ ಯಾವುದೇ ರೀತಿಯ ಕಾರ್ಯಕ್ರಮವನ್ನು ಮಾಡುತ್ತಿಲ್ಲ.ಕನ್ನಡಿಗ ಬೇಡಿಕೆಗೆ ಸರಕಾರದ ಮೇಲೆ ಒತ್ತಡ ಹಾಕುತ್ತಿಲ್ಲ ಕದಂಬಸೈನ್ಯ ಎಲ್ಲವನ್ನೂ ಗಮನಿಸುತ್ತಿದ್ದು ಇಂತಹ ನಿರ್ಲಕ್ಷವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಸಮಿತಿ ಸದಸ್ಯ ಮಹಾದೇವಸ್ವಾಮಿ,ಶಿರಸಿ ತಾಲೂಕು ಸಂಚಾಲಕ ಗುತ್ಯಪ್ಪ ಮಾದರ್,ಶಿವಪ್ಪ ಕಬ್ಬೆರ‍್ಹೊನ್ನಪ್ಪ ಮಹದೇವ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment