ವಿಕ್ರಮ್ ಕುಮಠ ರ ಕಿರುಚಿತ್ರಗಳ ಸರಣಿ ಆರಂಭ


ಆದ್ಯೋತ್ ಸಿನೇಮಾ ಸುದ್ದಿ:
ಕಿರುಚಿತ್ರಗಳ ಮೂಲಕ ಸದಾಕಾಲ ಹೊಸತನ್ನು ಕೊಡುವ ತುಡಿತವಿರುವ ಮೂಲತ: ಗದಗ-ಬೆಟಗೇರಿಯವರಾದ ವಿಕ್ರಮ್ ಕುಮಠಾ ಇದೀಗ ಕಿರುಚಿತ್ರಗಳ ಸರಣಿ ಆರಂಭಿಸಿದ್ದಾರೆ.
ಎಸ್ ಬಿಟ್ಜ್ ಹುಬ್ಳಿ ಚಾನೆಲ್ ಮೂಲಕ ಒಂದೊಂದು ಹೊಸ ವಿಷಯಗಳ ಮೂಲಕ ಜನರಲ್ಲಿ ಸಾಮಾಜಿಕ ಕಳಕಳಿಯ ಜೊತೆಗೆ , ಹಾಸ್ಯಪ್ರಜ್ಞೆಯನ್ನು ಬಿಂಬಿಸುವ, ಜನಜಾಗೃತಿಯನ್ನು ಒಳಗೊಂಡಂತೆ ಪ್ರಸ್ತುತ ವಿಷಯಗಳನ್ನು ವೀಕ್ಷಕರಿಗೆ ತಿಳಿಸಿಕೊಡುವಲ್ಲಿ ತಮ್ಮದೇ ತಂಡದ ಮೂಲಕ ಯಶಸ್ವಿಯಾಗಿದ್ದಾರೆ.

ಈ ಕಿರುಚಿತ್ರಗಳ ಸರಣಿಗಳಲ್ಲಿ ಪ್ರತಿಭಾನ್ವಿತ ಯುವ ಕಲಾವಿದರಿಗೆ ವೇದಿಕೆ ನೀಡಲಾಗಿದ್ದು ಹುಬ್ಬಳ್ಳಿ-ಧಾರವಾಡಗಳಲ್ಲಿ ಮತ್ತು ಸುತ್ತಮುತ್ತ ಗ್ರಾಮೀಣ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ . ಕಲಾವಿದರಾಗಿ ವಿಕ್ರಮ್ ಕುಮಠಾ, ಭಾವನಾ ಶಿಂಧೆ, ರೇಖಾ ಹೊನವಾಡ, ಟಿ.ಜೆ.ಭಾಂಡಗೆ, ಸಂತೋಷ ಜಾಧವ, ಕಿರಣ ಸಿದ್ದಾಪೂರ, ವೀರನಗೌಡ ಸಿದ್ದಾಪೂರ, ಪೂಜಾ ಪಾಟೀಲ, ವೀಣಾ ಮಠ, ಲಲಿತಾ ಬೆಟಗೇರಿ, ಕೆ.ಪಿ.ಶೇಖರ, ಮಹಾಂತೇಶ ಹಿರೇಮಠ, ರಮೇಶ ಕಲಾದಗಿ, ಪ್ರೀತಮ್ ಶಿಂಧೆ, ಶುಷ್ಮಾ ಕರಾಲೆ, ಅನ್ನಪೂರ್ಣ ಯಾದವಾಡ, ನಿಖಿಲ್ ಗೊಂಧಳೆ, ರಮೇಶ ಜಾಧವ ಮೊದಲಾದವರು ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಕಥೆ- ಚಿತ್ರಕಥೆ ವಿಕ್ರಮ್ ಕುಮಠಾ, ಭಾವನಾ ಶಿಂಧೆ, ರೇಖಾ ಹೊನವಾಡ , ಪಿಆರ್ ಓ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ, ಸಹ ನಿರ್ದೇಶನ ಭಾವನಾ ಶಿಂಧೆ, ಸಂಕಲನ ಮತ್ತು ಛಾಯಾಗ್ರಹಣ ನಿರ್ದೇಶನದ ಹೊಣೆಯನ್ನು ವಿಕ್ರಮ್ ಕುಮಠಾ ಹೊತ್ತಿದ್ದಾರೆ. ಕಿರುಚಿತ್ರಗಳನ್ನು ಎಸ್ ಬಿಟ್ಜ್ ಹುಬ್ಳಿ ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಿ ಪ್ರೋತ್ಸಾಹಿಸುವಂತೆ ನಿರ್ದೇಶಕ ವಿಕ್ರಮ್ ಕುಮಠಾ ಕೋರಿದ್ದಾರೆ

About the author

Adyot

Leave a Comment