ಆದ್ಯೊತ್ ಸುದ್ದಿನಿಧಿ:;
ರಾಜ್ಯಾದ್ಯಂತ ವಕ್ಪ್ ಮಂಡಳಿಯ ಭೂಕಬಳಿಕೆಯ ಸದ್ದು ಹೆಚ್ಚಾಗುತ್ತಿದ್ದು ಇದರ ವಿರುದ್ದ ಬಿಜೆಪಿ ಹೋರಾಟ ಕೈಗೊಂಡಿದೆ ಗುರುವಾರ ಜಿಲ್ಲಾಕೇಂದ್ರದಲ್ಲಿ ವಕ್ಪ್ ಮಂಡಳಿಯ ವಿರುದ್ದ ಪ್ರತಿಭಟನೆ ನಡೆಸಬೇಕು ಎಂಬ ರಾಜ್ಯ ಬಿಜೆಪಿಯ ಸೂಚನೆಯಂತೆ ಕಾರವಾರದಲ್ಲಿ ಬಿಜೆಪಿ ಪ್ರಮುಖರು “ನಮ್ಮ ಭೂಮಿ ನಮ್ಮ ಹಕ್ಕು” ಘೋಷ ವಾಕ್ಯದೊಡನೆ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಭಾರತ ಮಾತೆಗೆ ಪುಷ್ಪರ್ಚನೆ ಸಲ್ಲಿಸಿ ಧರಣಿ ರಾಮಕೃಷ್ಣ ಆಶ್ರಮದ ಭಾವೇಶಾನಂದ ಸ್ವಾಮಿ ಪ್ರತಿಭಟನೆಗೆ ಚಾಲನೆ ನೀಡಿ,ಅನಾದಿ ಕಾಲದಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರನ್ನು ಒಕ್ಕಲೆಬ್ಬಿಸಿ ಅಲ್ಲಿ ವಕ್ಪ್ ಬೋರ್ಡ್ನ್ನು ಸ್ಥಾಪಿಸಲು ಹೊರಟಿರುವ ಕಾಂಗ್ರೆಸ್ ಸರಕಾರ ಬಡವರ,ರೈತರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರೈತರ ಜಮೀನು ಇಲ್ಲದಿದ್ದರೆ ಯಾವುದೇ ಬೆಳೆಯನ್ನು ಬೆಳೆಯಲು ಆಗುವುದಿಲ್ಲ ಆಗ ಜನರು ಜೀವನ ಹೇಗೆ ನಡೆಸಬೇಕು ಕಾರಣ ಸರ್ಕಾರ ತಕ್ಷಣ ಈ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದರು.
ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ,ವಕ್ಪ್ ಬೋರ್ಡ ಮೂಲಕ ಸಾರ್ವಜನಿಕರ ಆಸ್ತಿಯನ್ನು ನುಂಗಲು ಸರಕಾರ ಹುನ್ನಾರು ನಡೆಸುತ್ತಿದೆ. ರೈತರ,ಮಠ,ಮಂದಿರಗಳ ಜಮೀನು ಅನ್ಯರ ಪಾಲಾಗುವುದಕ್ಕೆ ಪರೋಕ್ಷ ಸಹಾಯ ಮಾಡುತ್ತಿದೆ. ಹಗಲು ದರೋಡೆ ನಡೆಸುತ್ತಿರುವ ಸರಕಾರ ಬ್ರಷ್ಟತೆಯನ್ನು ಮೈಗೂಡಿಸಿಕೊಂಡಿದೆ ಈಗ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಮುಂದಾಗಿದ್ದ ಬಡವರ ರಕ್ತ ಹೀರುತ್ತಿದೆ ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ ಸದಸ್ಯರಾದ ಗಣಪತಿ ಉಳ್ವೇಕರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹರಿಪ್ರಕಾಶ ಕೋಣನಮನೆ,ಮಾಜಿ ಬಿಜೆಪಿಯ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ವೆಂಕಟೇಶ ನಾಯಕ, ಗುರುಪ್ರಸಾದ ಹೆಗಡೆ ಸೇರಿದಂತೆ ಜಿಲ್ಲೆಯ ಬಿಜೆಪಿ ಪ್ರಮುಖ ಮುಖಂಡರು ಭಾಗವಹಿಸಿದ್ದರು.