ಸಿದ್ದಾಪುರದಲ್ಲಿ ಸಂಸದ-ಶಾಸಕರಿಂದ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ವಾಜಗೋಡ ಗ್ರಾಪಂ ವ್ಯಾಪ್ತಿಯ ಲಂಬಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮ ಶನಿವಾರ ನಡೆಯಿತು.

ಸಭಾಭವನ ಉದ್ಟಾಟಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಸಧೃಢವಾಗಿದ್ದು ರೈತರಿಗೆ ಸಹಕಾರಿ ಸಂಘ ಕೇವಲ ವ್ಯವಹಾರ ನಡೆಸುವ ಸಂಘವಲ್ಲ ಅದು ನಮ್ಮ ಕುಟುಂಬದ ಒಂದು ಭಾಗವಿದ್ದಂತೆ. ನಾವು ಈ ಸಂಘವನ್ನು ಭಾವನಾತ್ಮಕವಾಗಿ ನೋಡುತ್ತೆವೆ ಇಂತಹ ಸಂಘಗಳ ವಾತಾವರಣ ಕಲುಷಿತವಾಗಬಾರದು ಸರಕಾರ ನಾಮನಿರ್ದೇಶಿತ ಸದಸ್ಯರಿಗೂ ಅಧ್ಯಕ್ಷರಾಗಲು ಅವಕಾಶ ಕಲ್ಪಿಸುತ್ತಿರುವುದು ಸರಿಯಲ್ಲ ಇದರಿಂದ ರಾಜಕೀಯ ಪ್ರವೇಶವಾಗುವ ಎಲ್ಲಾ ಸಾಧ್ಯತೆಗಳಿರುತ್ತವೆ.ಇದು ಪಕ್ಷಾತೀತವಾಗಿರಬೇಕಾದಂತಹ ಸಂಸ್ಥೆ ಎಂದು ಹೇಳಿದರು.


ಜಿಲ್ಲೆಯ ಜನರನ್ನು ಕಾಡುತ್ತಿರುವ ಕಸ್ತೂರಿ ರಂಗನ್ ವರದಿ,ಅತಿಕ್ರಮಣದಂತಹ ಸಮಸ್ಯೆಗಳ ಬಗ್ಗೆ ಯಾರೂ ಗೊಂದಲಪಡುವ ಅವಶ್ಯಕತೆಯಿಲ್ಲ ಜನರು ಈಗ ಹೇಗೆ ಇದ್ದಾರೋ ಅದೇ ರೀತಿ ಮುಂದುವರಿಯಲು ಯಾರೂ ಅಡ್ಡಿಪಡಿಸುವುದಿಲ್ಲ ಸರಕಾರಗಳು ಜನರ ಪರವಾಗಿರುತ್ತದೆ ಆದರೆ ಅಧಿಕಾರಿ ವರ್ಗ,ನ್ಯಾಯಾಂಗ ವ್ಯವಸ್ಥೆ ನಮ್ಮ ಪರವಾಗಿಲ್ಲ ಹೀಗಾಗಿ ಕೆಲವು ಸಮಸ್ಯೆಗಳು ಆಗುತ್ತಿವೆ ಇವೆಲ್ಲವನ್ನು ಸರಿಪಡಿಸಲಾಗುವುದು.ಕಳೆದ ಹತ್ತುವರ್ಷದಿಂದ ಅಡಿಕೆಯ ಬೆಲೆ ಸ್ಥಿರವಾಗಿದೆ.ವಿದೇಶದಿಂದ ಆಮದಾಗುತ್ತಿರುವ ಅಡಿಕೆಯಿಂದ ಬೆಲೆಯ ಮೇಲೆ ಪರಿಣಾಮವಾಗುತ್ತಿಲ್ಲ ಆದರೆ ಕದ್ದ ಅಡಿಕೆ ಬರುತ್ತಿದ್ದು ಇದನ್ನು ತಡೆಗಟ್ಟುವ ಕೆಲಸವಾಗಬೇಕು. ಅಡಿಕೆ ಕ್ಯಾನ್ಸರಕಾರಕ ಎಂಬ ವರದಿ ಅವೈಜ್ಞಾನಿಕವಾದುದು ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ರಾಜ್ಯಸರಕಾರದ ಮೇಲೆ ಒತ್ತಡ ಹೇರಿ ರಾಜ್ಯದಿಂದ ಒಂದು ವೈಜ್ಞಾನಿಕ ವರದಿ ಬರುವಂತೆ ಮಾಡಬೇಕು ಎಂದು ಹೇಳಿದರು.

ಸೂಪರ್ ಮಾರ್ಕೆಟ್ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರ ಬೆನ್ನೆಲುಬಾಗಿ ನಿಂತಿರುವ ಸಹಕಾರಿ ಸಂಘವನ್ನು ಸಶಕ್ತಗೊಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು.ಸಂಘಸAಸ್ಥೆಗಳಲ್ಲಿ ರಾಜಕಾರಣ ಬರಬಾರದು ರಾಜಕಾರಣದ ಕಳಂಕವಿಲ್ಲದೆ ಸಹಕಾರಿ ಸಂಘಗಳು ನಡೆಯುತ್ತಿವೆ.ಇತ್ತೀಚಿನ ದಿನಗಳಲ್ಲಿ ಅಡಿಕೆಯ ಬೆಲೆ ಸ್ಥಿರವಾಗಿಲ್ಲ,ಅಡಿಕೆಗೆ ಎಲೆ ಚುಕ್ಕಿರೋಗ ಸೇರಿದಂತೆ ಹಲವು ರೋಗಗಳು ಬಾಧಿಸುತ್ತಿವೆ.ಇದರಿಂದ ಅಡಿಕೆ ಬೆಳೆಗಾರ ಸಂಕಷ್ಟದಲ್ಲಿ ಸಿಲುಕಿದ್ದಾನೆ ನಮ್ಮ ಭಾಗದಲ್ಲಿ ಬೆಳೆಯುವ ಅಡಿಕೆ ಗುಣಮಟ್ಟದ್ದಾಗಿದ್ದು ಆಮದಾಗುತ್ತಿರುವ ಕಳಪೆ ಗುಣದ ಅಡಿಕೆಯನ್ನು ತಡೆಗಟ್ಟಬೇಕುಹಾಗೇ ಉಪಬೆಳೆಗಳಿಗೂ ಯೋಗ್ಯವಾದಂತಹ ದರ ಸಿಗುವಂತೆ ಮಾಡಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಟಿಎಸ್ ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ,ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ,
ವಾಜಗೋಡ ಗ್ರಾಪಂ ಅಧ್ಯಕ್ಷೆ ಸರಸ್ವತಿ ಗೌಡ,ಉಪಾಧ್ಯಕ್ಷೆ ಎಸ್.ಎಮ್.ಭಟ್ಟ
ಸ್ಥಳೀಯ ದೇವಾಲಯಗಳ ಅಧ್ಯಕ್ಷರಾದ ಆರ್.ಎಸ್.ಹೆಗಡೆ,ಎನ್.ಡಿ.ನಾಯ್ಕ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಎಂ.ಐ.ನಾಯ್ಜ ಪ್ರಾಸ್ತಾವಿಕ ಮಾತನಾಡಿದರು.ನಿರ್ದೇಶಕ ಎಂ.ಎನ್.ಹೆಗಡೆ ತಲೆಕೇರೆ ಸ್ವಾಗತಿಸಿದರು. ವಿನೋದಾ ಭಟ್ಟ ನಿರೂಪಣೆ ಮಾಡಿದರು

About the author

Adyot

Leave a Comment