ಆದ್ಯೋತ್ ಸುದ್ದಿನಿಧಿ:
ನೂರಾರು ಚಲನಚಿತ್ರಗಳಿಗೆ ಪೋಸ್ಟರ ಡಿಸೈನ್ ಮೂಲಕವೆ ಜೀವಕಳೆ ತುಂಬಿ ಪ್ರೇಕ್ಷಕರನ್ನು ಸೆಳೆದು ಚಿತ್ರಗಳ ಯಶಸ್ಸಿಗೆ ಕಾರಣರಾಗುತ್ತಿರುವ ತೆರೆಮರೆಯ ಚಲನಚಿತ್ರ ಪ್ರಚಾರ ಕಲಾವಿದರಾದ ‘ದೇವು’ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೂಲತಃ ಹಾಸನ ಜಿಲ್ಲೆಯವರಾದ ದೇವು ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ, ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು,
ಬೆಂಗಳೂರಿನ ಕಲಾಗ್ರಾಮ ಸಂಸ್ಕೃತಿಕ ಭವನದಲ್ಲಿ ನವಂಬರ್ ೨೯ರಂದು ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನ ತಿಳಿಸಿದೆ.ಇದಕ್ಕಾಗಿ ದೇವು ಆಪ್ತರು,ಹಿತೈಸಿಗಳು, ಚಲನಚಿತ್ರ ಪತ್ರಕರ್ತರಾದ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಮೊದಲಾದವರು ಅಭಿನಂದಿಸಿದ್ದಾರೆ.