ಸಿದ್ದಾಪುರ ಶಂಕರಮಠದಲ್ಲಿ ಹವ್ಯಕ ಪ್ರತಿಬಿಂಬ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಶಂಕರಮಠದಲ್ಲಿ ಅಖಿಲ ಹವ್ಯಕ ಮಹಾಸಭಾ ಸಿದ್ದಾಪುರ ಪ್ರಾಂತ್ಯದ ಹವ್ಯಕ ಪ್ರತಿಭೆಗಳಿಗಾಗಿ ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಹವ್ಯಕ ಮಹಾಸಾಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ,ಹವ್ಯಕರು ಲೋಕಕಲ್ಯಾಣಕ್ಕಾಗಿ ತಮ್ಮ ಜ್ಞಾನವನ್ನು ಎರಿದಿದ್ದಾರೆ. ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಾದ್ಯಂತ ೧೮ಸಾವಿರಕ್ಕೂ ಹೆಚ್ಚು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಹವ್ಯಕರು ತಮ್ಮನ್ನು ಇತ್ತೀಚಿನ ದಿನದಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡರು ಸಂಪ್ರದಾಯವಗಿ ನಡೆಸಿಕೊಂಡು ಬರುತ್ತಿರುವ ಕೃಷಿಯನ್ನು ಬಿಟ್ಟಿಲ್ಲ. ಹವ್ಯಕರು ತಾವು ಬೆಳೆಯುವುದರ ಜತೆಗೆ ಎಲ್ಲ ಸಮಾಜದವರನ್ನು ಬೆಳೆಸಿದ್ದಾರೆ. ಹವ್ಯಕ ಸಮಾಜದ ಪ್ರತಿಯೊಂದು ಮನೆಯಲ್ಲಿ ಪ್ರತಿಭೆಗಳಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿದ್ದಾರೆ. ದೇಶವಿದೇಶಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ದೇಶಕ್ಕಾಗಿ ದುಡಿದವರಿದ್ದಾರೆ ಹಾಗೂ ತ್ಯಾಗಮಾಡಿದವರಿದ್ದಾರೆ.ಪಾಲಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಮುಂದಾಗಬೇಕು . ಅವರಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಮುಂದಾಗಬೇಕೆAದು ಹೇಳಿದರು.


ಶಿಕ್ಷಣ ಪ್ರಸಾರಕ ಸಮಿತಿಯ ಕಾರ್ಯಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ ಹವ್ಯಕ ಮಹಾಸಭಾದ ಕಾರ್ಯಕ್ರಮಗಳು ಮೊದಲು ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ ಈಗ ಪ್ರತಿಯೊಂದು ಹಳ್ಳಿಯಲ್ಲಿಯೂ ನಡೆಯುತ್ತಿರುವುದರಿಂದ ಹವ್ಯಕರಲ್ಲಿರುವ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿದೆ ಹಾಗೂ ಹವ್ಯಕ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ಹಾಗೂ ನಿವೃತ್ತ ಶಿಕ್ಷಕ ವಯೋವೃದ್ಧ ಮಂಜುನಾಥ ಹೆಗಡೆ ದೊಡ್ಮನೆ ಅವರನ್ನು ಸನ್ಮಾನಿಸಲಾಯಿತು.

ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆವಹಿಸಿದ್ದರು. ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಜೆ.ಭಟ್ಟ ಕೆಕ್ಕಾರ, ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ್ವರ ಸಂಪ, ಪ್ರಶಾಂತ ಭಟ್ಟ ಮಲವಳ್ಳಿ, ಕೃಷ್ಣಮೂರ್ತಿ ಭಟ್ಟ,ಪತ್ರಕರ್ತ ನಾಗರಾಜ ಹೆಗಡೆ ಮತ್ತಿಗಾರ,ರವೀಂದ್ರ ಹೆಗಡೆ ಹಿರೇಕೈ, ರಮೇಶ ಹೆಗಡೆ ಕೊಡ್ತಗಣಿ, ಎಸ್.ಜಿ.ಭಟ್ಟ ಚಟ್ನಳ್ಳಿ, ಎಂ.ಜಿ.ಜೋಶಿ, ರಮಾನಂದ ಹೆಗಡೆ, ಶಶಾಂಕ ಹೆಗಡೆ ಶಿಗೇಹಳ್ಳಿ, ಎನ್.ಬಿ.ಹೆಗಡೆ ಮತ್ತಿಹಳ್ಳಿ, ರಾಘವೇಂದ್ರ ಶಾಸ್ತಿç ಇತರರಿದ್ದರು.
ನಂತರ ಸಿದ್ದಾಪುರ ಪ್ರಾಂತ್ಯದ ಹವ್ಯಕ ಮಕ್ಕಳಿಗಾಗಿ ಹಾಗೂ ಮಹಿಳೆಯರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಜಿ.ಜಿ.ಹೆಗಡೆ ಬಾಳಗೋಡ, ಗಣಪತಿ ಹೆಗಡೆ ಗುಂಜಗೋಡ ಕಾರ್ಯಕ್ರಮ ನಿರ್ವಹಿಸಿದರು.

########################################
ಬೆಂಗಳೂರಿನಲ್ಲಿ ಡಿ.೨೭,೨೮,೨೯ರಂದು ವಿಶ್ವಹವ್ಯಕ ಸಮ್ಮೇಳನ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.೨೭,೨೮,೨೯ರಂದು ತೃತೀಯ ವಿಶ್ವಹವ್ಯಕ ಸಮ್ಮೇಳನ ನಡೆಯಲಿದೆ ಎಂದು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.
ಅವರು ರವಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಶ್ವಹವ್ಯಕ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಈ ಸಮ್ಮೇಳನ ಕೇವಲ ಹವ್ಯಕ ಜಾತಿಯ ಸಮ್ಮೇಳನವಾಗದೆ ಸಮಾಜದ ಸಮ್ಮೇಳನವಾಗಿದೆ ಹವ್ಯಕರ, ಆಚಾರ, ಸಂಪ್ರದಾಯ, ವಿಚಾರಗಳು, ಗೋಷ್ಠಿ, ಸನ್ಮಾನಗಳು ನಡೆಯಲಿದೆ. ಹವ್ಯಕರ ಭಾಷೆ ಸಮೃದ್ದವಾದ ಸಾಹಿತ್ಯವನ್ನು ಒಳಗೊಂಡಿದೆ. ಸಮ್ಮೇಳನದಲ್ಲಿ ೬ಸಾವಿರ ಪುಸ್ತಕಗಳು,೧೦೦ಕ್ಕೂ ಹೆಚ್ಚು ಪಾರಂಪರಿಕ ವಸ್ತುಗಳ ಹಾಗೂ ೧೦೮ ಕರಕುಶಲ ವಸ್ತುಗಳು ಪ್ರದರ್ಶನಗೊಳ್ಳಲಿದೆ. ಹವ್ಯಕರ ಆಹಾರವನ್ನು ಎಲ್ಲರೂ ಇಷ್ಟಪಡುತ್ತಾರೆ. ಹವ್ಯಕರ ಆಹಾರ ವೈಜ್ಞಾನಿಕವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹವ್ಯಕರ ವಿಶಿಷ್ಟ ಸಂಸ್ಕೃತಿಯ ಅನವರಣಗೊಳ್ಳಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹವ್ಯಕ ಸಮಾಜದ ೫೬೭ ಜನರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮುಖ್ಯವಾಗಿ ಗಾಯತ್ರಿ ಮಂತ್ರದ ಮಹತ್ವದ ಕುರಿತು ಮಾಹಿತಿ ನೀಡಲಾಗುತ್ತಿದೆ.
ಮೂರನೇ ವಿಶ್ವಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಮಾಜದ ಮೂರು ಪೀಠಾಧಿಪತಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ. ಅಲ್ಲದೇ ವಿವಿಧ ಸಮಾಜದ ಸ್ವಾಮೀಜಿಗಳು, ಕೇಂದ್ರ ಹಾಗೂ ರಾಜ್ಯ ಸಚಿವರುಗಳು,ಪ್ರಮುಖರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ೧.೫ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷರಾದ ಶ್ರೀಧರ ಜೆ.ಭಟ್ಟ ಕೆಕ್ಕಾರು, ಆರ್.ಎಂ.ಹೆಗಡೆ ಬಾಳೇಸರ, ಪ್ರಮುಖರಾದ ಡಾ.ಶಶಿಭೂಷಣ ಹೆಗಡೆ, ಆರ್.ಎಸ್.ಹೆಗಡೆ ಹರಗಿ, ಸಿ.ಎ.ವೇಣುವಿಘ್ನೇಶ್ವರ ಸಂಪ, ಪ್ರಶಾಂತ ಮಲವಳ್ಳಿ, ಕೃಷ್ಣಮೂರ್ತಿ ಭಟ್ಟ ಇತರರಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಹಿರಿಯರು ಪೋನ್, ವಾಹನ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ಇಲ್ಲದ ಸಮಯದಲ್ಲಿ ಹವ್ಯಕ ಮಹಾಸಭಾ ಸಂಘಟನೆಯನ್ನು ಮಾಡಿದ್ದಾರೆ. ಸಂಘಟನೆ ನಿರಂತರವಾಗಿ ನಡೆಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ. ವಿಶ್ವ ಸಮ್ಮೇಳನದ ಮೂಲಕ ನಮ್ಮ ಸಂಪ್ರದಾಯ, ಆಚಾರ, ವಿಚಾರಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ.- ಡಾ ಗಿರಿಧರ ಕಜೆ. ಹೇಳಿದರು

About the author

Adyot

Leave a Comment