ಆದ್ಯೋತ್ ಸುದ್ದಿನಿಧಿ:
ಉತ್ತರಿಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಂದಾಯ ಸಚೀವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಬಗರ್‌ಹುಕಂ,ಸಾಗುವಳಿ ಚೀಟಿ ಹಾಗೂ ಪಹಣಿ ಪತ್ರಿಕೆ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ,ಹಲವು ವರ್ಷಗಳಿಂದ ಅರಣ್ಯ ಭೂಮಿ ಹೊರತುಪಡಿಸಿ ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಊರು ಆಗಿರುವುದನ್ನು ಗ್ರಾಮ ದಾಖಲಾತಿಗಳು ಇಲ್ಲದಿರುವ ಕ್ಯಾಂಪ್, ತಾಂಡಾ,ಗಳಿಗೆ ಕಂದಾಯ ಗ್ರಾಮದ ಅಧಿಕಾರ ನೀಡುವ ಕೆಲಸ ಮಾಡಲಾಗುತ್ತದೆ. ಕಂದಾಯ ಗ್ರಾಮ ಆದ ನಂತರ ದಾಖಲೆ ಸಿಗುತ್ತದೆ. ದಾಖಲೆ ರಹಿತ ಗ್ರಾಮಗಳಿಗೆ ಶಾಶ್ವತ ಪರಿಹಾರ ನೀಡುವ ದೃಷ್ಟಿಯಿಂದ ಕಂದಾಯ ಗ್ರಾಮವನ್ನಾಗಿ ಮಾಡುವ ಕೆಲಸ ಮಾಡಲಾಗುತ್ತದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಒಂದು ವರ್ಷದಲ್ಲಿ ಕಂದಾಯ ಗ್ರಾಮವಾಗಿ ಮಾಡಲಾಗುವುದು ಆಂದೋಲನದ ಮಾದರಿಯಾಗಿ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ 38೦೦ ವಸತಿ ಪ್ರದೇಶಗಳು ಅನಧಿಕೃತವಾಗಿ ಇದೆ. ವರ್ಷದ ಒಳಗಡೆ ಕಂದಾಯವಾಗಿ ಗ್ರಾಮಗಳಾಗಿ ಪರಿವರ್ತನೆ ಮಾಡುತ್ತೇವೆ. ಅಧಿಕೃತ ಕಂದಾಯ ಗ್ರಾಮ ಎಂದು ಘೋಷಣೆ ಮಾಡಿ, ಹಕ್ಕುಪತ್ರ ನೀಡುವ ಕೆಲಸ ಮಾಡುತ್ತೇವೆ.ರಾಜ್ಯದಲ್ಲಿ 3೦ ಲಕ್ಷ ಕುಟುಂಬದಲ್ಲಿ 1.5೦ ಕೋಟಿ ಜನರಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ 1441 ಕುಟುಂಬಗಳಿವೆ. ಅವುಗಳಲ್ಲಿ ಸಾಂಕೇತಿಕವಾಗಿ 4 ಜನರಿಗೆ ನೀಡುತ್ತಿದ್ದೇವೆ. ಮುಂದಿನ ವಾರದೊಳಗಡೆ ಎಲ್ಲರಿಗೂ ನೀಡುತ್ತೇವೆ. ಸ್ವಲ್ಪ ಹಣ ಸಂದಾಯ ಮಾಡುವ 3೦೦ ಬಾಕಿ ಉಳಿಯುತ್ತದೆ. ಅವರು ಹಣ ಭüರ್ತಿ ಮಾಡಿದ ನಂತರ ಅವರಿಗೂ ನೀಡಲಾಗುತ್ತದೆ. ಹಳಿಯಾಳ 8, ಮುಂಡಗೋಡ 8 ಸೇರಿದಂತೆ 16 ವಸತಿ ಪ್ರದೇಶದವರಿಗೂ ಹಕ್ಕುಪತ್ರ ನೀಡಿ,ಶಾಶ್ವತ ಪರಿಹಾರ ಹಾಗೂ ನೆಮ್ಮದಿ ನೀಡುತ್ತೇವೆ ಅರಣ್ಯ ಭೂಮಿ ಅರ್ಜಿ ಕುರಿತು ಜಿಪಂ ಸದಸ್ಯರು ಇಲ್ಲದಿರುವ ಕಾರಣ ಇತ್ಯರ್ಥಪಡಿಸಲು ಜಿ.ಪಂ ಆಡಳಿತಾಧಿಕಾರಿ ಸದಸ್ಯರನ್ನಾಗಿ ಮಾಡಿ, ಚುನಾಯಿತ ಪ್ರತಿನಿಧಿಯನ್ನಾಗಿ ಸದಸ್ಯರನ್ನಾಗಿ ಮಾಡಿ ಅರಣ್ಯ ಹಕ್ಕು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಆ ಕಾರ್ಯವೂ ನಡೆಯಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮುಂಕಾಳು ವೈಧ್ಯ,ಯಲ್ಲಾಪುರ ಶಾಸಕರಾದಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ , ಜಿಲ್ಲಾಧಿಕಾರಿ ಲಕ್ಷ್ಮಿ ಪ್ರೀಯಾ ಸಹಾಯಕ ಆಯುಕ್ತಕಾವ್ಯಾರಾಣಿ ಕೆ.ವಿ ಉಪಸ್ಥಿತರಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಬೈರೇಗೌಡ,ಕಾಲಕಾಲಕ್ಕೆ ರಾಜಕೀಯ ಬದಲಾವಣೆ ಸಹಜ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಸರಕಾರ ಭದ್ರವಾಗಿದ್ದು ಜನರ ಕಲ್ಯಾಣ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ನಮ್ಮ ಅಭಿವೃದ್ಧಿಪರ ಚಿಂತನೆಯನ್ನು ನೋಡಿರುವ ರಾಜ್ಯದ ಜನತೆ ಉಪಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಸಮಯಬಂದಾಗ ರಾಜಕೀಯ ಬದಲಾವಣೆಗಳು ಆಗುತ್ತವೆ ಈಗ ಅದರ ಬಗ್ಗೆ ಗಾಳಿ ಸುದ್ದಿ ಹಬ್ಬಿಸುವುದು ಬೇಡ ಊಹಾಪೋಹದಿಂದ ಹೊಟ್ಟೆ ತುಂಬುವುದಿಲ್ಲ. ಸದ್ಯಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಕೇಂದ್ರ ಸರ್ಕಾರವು ವಕ್ಫ್ ಕಾನೂನು ತಿದ್ದುಪಡಿ ಮಾಡಲು ಹೊರಟಿದ್ದು, ಆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈಗ ಎನೂ ಹೇಳಲು ಸಾಧ್ಯವಿಲ್ಲ. ಕಾನೂನು ಪ್ರಕ್ರಿಯೆ ಮೂಲಕ ಪರಿಹಾರ ಮಾಡಲು ಸೂಚನೆ ನೀಡಲಾಗಿದ್ದು, ತಹಸೀಲ್ದಾರರು ಹಿಯರಿಂಗ್ ಮಾಡಿ ಅಭಿಪ್ರಾಯ ಪಡೆಯಲಾಗುತ್ತಿದೆಯೇ ಹೊರತು ಬದಲಾವಣೆ ಮಾಡಲಾಗುತ್ತಿಲ್ಲ.”ಬ” ಕರಾಬನಿಂದ ಇಲ್ಲಿನ ರೈತರು ಸಮಸ್ಯೆ ಎದುರಿಸುತ್ತಿರುವ ವಿಷಯದ ಕುರಿತು ಭೀಮಣ್ಣ ನಾಯ್ಕ ನನ್ನ ಗಮನಕ್ಕೆ ತಂದಿದ್ದಾರೆ. ಅದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಹಿನ್ನೆಲೆ ತಿಳಿದು ಮಾತನಾಡುತ್ತೇನೆ. ಅಲ್ಲದೇ ಅದರ ಕುರಿತು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಕಾನೂನು ವಿರುದ್ಧ ಸೂಚನೆ ನೀಡುವುದು ತಪ್ಪಾಗುತ್ತದೆ. ಕಾನೂನಿನ ಪ್ರಕಾರ ತಪ್ಪಿದ್ದರೆ ಸರಿಪಡಿಸಲಾಗುತ್ತದೆ.ಕಂದಾಯ ಇಲಾಖೆಯಲ್ಲಿ ಸರ್ವೇಯರ್ ಕೊರತೆ ಇರುವುದು ನಿಜ. ಎಲ್ಲ ಖಾಲಿ ಹುದ್ದೆ ಭರ್ತಿಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು, ಆ ಕುರಿತು ಕ್ರಮ ತೆಗೆದು ಕೊಳ್ಳಲಾಗುವುದು. 749 ಸರ್ವೇಯರ್ ಹಾಗೂ 34 ಎಡಿಆರ್ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇಮಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉತ್ತರಕನ್ನಡ ಜಿಲ್ಲೆಗೂ ನೇಮಕ ಮಾಡಲಾಗುತ್ತದೆ.ಗ್ರಾಪಂ ಮತ್ತು ನಗರಾಡಳಿತ ಸಂಸ್ಥೆಯವರು ಅರ್ಹರಿಗೆ ಇ-ಸ್ವತ್ತು ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ. ಇ-ಸ್ವತ್ತು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.