ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಇಟಗಿ ಶ್ರೀರಾಮೇಶ್ವರ ಮತ್ತು ಶ್ರೀಅಮ್ಮನವರು,ಶ್ರೀವಿಠ್ಠಲದೇವರ ಅಷ್ಟಬಂಧ ಮಹೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಅಷ್ಟಬಂಧ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿ,ಬಿಳಗಿ ಸೀಮೆಯ ಐತಿಹಾಸಿಕ ಇಟಗಿ
ಶ್ರೀರಾಮೇಶ್ವರ ಮತ್ತು ಶ್ರೀಅಮ್ಮನವರು,ಶ್ರೀವಿಠ್ಠಲದೇವರ ಅಷ್ಟಬಂಧ ಮಹೋತ್ಸವ ಕಾರ್ಯಕ್ರಮವನ್ನು ಏ.೨ ರಿಂದ ಏ.೧೩ರವರೆಗೆ ನಡೆಸಲಾಗುವುದು.
.
ಐತಿಹಾಸಿಕವಾಗಿರುವ ಇಟಗಿ ಕ್ಷೇತ್ರ ಬಿಳಗಿ ರಾಜರ ಆಶ್ರಯದಲ್ಲಿರುವ ಕ್ಷೇತ್ರವಾಗಿತ್ತು. ತ್ರಿಕಾಲ ಬಲಿಪೂರ್ವಕವಾಗಿ ಪೂಜೆ ನಡೆಸುವ ದೇಶದಲ್ಲೆ ಏಕೈಕ ಕ್ಷೇತ್ರವಾಗಿದೆ. ಆಗಮಶಾಸ್ತçದ ಪ್ರಕಾರ ಪ್ರತಿ ೧೨ ವರ್ಷಕ್ಕೋಮ್ಮೆ ಅಷ್ಟಬಂಧ ಕಾರ್ಯಕ್ರಮ ಮಾಡಬೇಕು ಆದರೆ ಈ ಕ್ಷೇತ್ರದಲ್ಲಿ ೬೬ ವರ್ಷದ ಹಿಂದೆ ವಿಶ್ವಾವಸು ಸಂವತ್ಸರದಲ್ಲಿ ಅಷ್ಟಬಂಧ ಕಾರ್ಯಕ್ರಮ ನಡೆದಿತ್ತು ನಂತರದ ದಿನಗಳಲ್ಲಿ ಕಾರಣಾಂತರದಿAದ ಈ ಕಾರ್ಯಕ್ರಮ ನಡೆದಿರಲಿಲ್ಲ ಆದರೆ ಈಗ ಪುನಃ ವಿಶ್ವಾವಸು ಸಂವತ್ಸರದಲ್ಲಿ ಪುನಃ ಅಷ್ಟಬಂಧ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಇದಕ್ಕೆ ಸೀಮೆಯ ಎಲ್ಲಾ ಭಕ್ತವೃಂದದವರು ಉತ್ಸಾಹದಿಂದ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ನಮ್ಮ ಬಿಳಗಿಸೀಮೆಯ ಗುರುಪೀಠ ಶ್ರೀರಾಮಚಂದ್ರಾಪುರ ಮಠವಾಗಿದೆ. ನಮ್ಮ ಗುರುಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಅಷ್ಟಬಂಧ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯವನ್ನು ನೀಡಲಿದ್ದಾರೆ.
ಏ.೩ ಕ್ಕೆ ಆಗಮಿಸಲಿರುವ ಶ್ರೀಗಳು ಏ.೧೧ರವರೆಗೆ ಇಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಶ್ರೀಗಳ ಮಾರ್ಗದರ್ಶನದಲ್ಲೆ ಈ ಕಾರ್ಯಕ್ರಮ ನಡೆಯಲಿದೆ.ಈ ಅಷ್ಟಬಂಧ ಮಹೋತ್ಸವ ಕಾರ್ಯಕ್ರಮದಲ್ಲಿ ಆಗಮಶಾಸ್ತçದ ಪ್ರಕಾರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ನಮ್ಮ ತಾಲೂಕಿನ ಬಹುತೇಕ ವೈದಿಕರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಾರೆ ಇದಲ್ಲದೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿವರ್ಷ ಫಾಲ್ಗುಣ ಮಾಸ ಶುಕ್ಲಪಕ್ಷದ ಬಿದಿಗೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ ಈ ಬಾರಿ ಮಾರ್ಚ ೮ರಂದು ಮಹಾರಥೋತ್ಸವ ನಡೆಯುತ್ತದೆ ಆದರೆ ಅಷ್ಟಬಂಧ ಕಾರ್ಯಕ್ರಮದ ನಿಮಿತ್ತ ಈ ಬಾರಿ ಏಪ್ರಿಲ್‌ನಲ್ಲಿ ಮತ್ತೋಮ್ಮೆ ರಥೋತ್ಸವ ನಡೆಯಲಿದೆ. ಸೀಮೆಯ ಭಕ್ತರಲ್ಲದೆ ರಾಜ್ಯದ ಬೇರೆ ಬೇರೆ ಕಡೆಯಲ್ಲಿ ಇಟಗಿ ಕ್ಷೇತ್ರಕ್ಕೆ ಭಕ್ತರಿದ್ದಾರೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಡಾ.ಶಶಿಭೂಷಣ ಹೆಗಡೆ ಕೋರಿದರು.
ಕಾರ್ಯಕ್ರಮದಲ್ಲಿ ಮೊಕ್ತೇಸರ ಸಮಿತಿಯ ಉಮೇಶ ಹೆಗಡೆ ಕೊಡ್ತಗಣಿ,ಅಷ್ಟಬಂಧಸಮಿತಿಯ ಜಿ.ಕೆ.ಭಟ್ಟ,ರಾಮಾ ಹುಲಿಯಾ ಗೌಡ,ರಾಮ ಭಟ್ಟಕಲ್ಲಾಳ,ನಾರಾಯಣ ಮೂರ್ತಿ ಹೆಗಡೆ,ಗಜಾನನ ಹೆಗಡೆ,ಎಂ.ಡಿ.ನಾಯ್ಕ,ವಿನಾಯಕ ಹೊನ್ನೆಮಡಿಕೆ ಮುಂತಾದವರು ಉಪಸ್ಥಿತರಿದ್ದರು.