ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಹೋದ ಹುಲ್ಲಿನ ಲಾರಿ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಕುಮಟಾ ಮುಖ್ಯ ರಸ್ತೆಯ ಕುಂಬ್ರಿಗದ್ದೆ ಬಸ್ ನಿಲ್ದಾಣದ ಬಳಿ ಹುಲ್ಲಿನ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಸಿದ್ದಾಪುರ ಕಡೆಯಿಂದ ದೊಡ್ಮನೆ ಕಡೆಗೆ ಸಾಗುತ್ತಿದ್ದ ತಾಲ್ಲೂಕಿನ ಬೀರಲಮಕ್ಕಿ ಸಮೀಪದ ಉಡಳ್ಳಿಯ ಮಂಜುನಾಥ ಎಂಬುವವರಿಗೆ ಸೇರಿದ ಹುಲ್ಲಿನ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದ ಸುಮಾರು 45 ನಿಮಿಷಗಳ ಕಾಲ ಸಿದ್ದಾಪುರ ಕುಮಟಾ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಯಿತು.

ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಸ್ಥಳೀಯ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದರೂ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಿಲ್ಲ. ಚಿಕ್ಕ ವಾಹನವಾದ್ದರಿಂದ ಸಾಕಷ್ಟು ನೀರಿನ ದಾಸ್ತಾಸು ಇಲ್ಲದೆ ಪರದಾಡುವಂತಾಯಿತು. ನಂತರ ಸಾರ್ವಜನಿಕರ ಸಹಾಯದಿಂದ ಸಮೀಪದಲ್ಲಿ ಇರುವ ಮನೆಯ ನೀರನ್ನು ಬಳಸಿ ಪರಿಸ್ಥಿತಿ ನಿಭಾಯಿಸಲಾಯಿತು.

ತಾಲ್ಲೂಕಿನ ಅಗ್ನಿಶಾಮಕ ದಳದ ಅವ್ಯವಸ್ಥೆಯ ಕುರಿತು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

About the author

Adyot

Leave a Comment