ಚಕೋರ ವಿಚಾರ ವೇದಿಕೆಗೆ ಜಿಲ್ಲಾ ಸಂಚಾಲಕರ ನೇಮಕ

ಆದ್ಯೋತ್ ಸುದ್ದಿನಿಧಿ;
ಕರ್ನಾಟಕ ಸರಕಾರದ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಯೋಜನೆಯಾದ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉತ್ತರ ಕನ್ನಡ ಜಿಲ್ಲೆಯ ಸಂಚಾಲಕರನ್ನಾಗಿ
ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಸಹಪ್ರಾಧ್ಯಾಪಕಿ,ಲೇಖಕಿ ಡಾವಿಜಯಲಕ್ಷ್ಮೀ ದಾನರಡ್ಡಿ

ಹಾಗೂ ಚಿತ್ತಾಕುಲಾ ಸರಕಾರಿ ಪ್ರೌಢಶಾಲೆ ಇಂಗ್ಲೀಷ್ ಭಾಷಾ ಶಿಕ್ಷಕಿ, ಕವಯಿತ್ರಿ, ವಿಮರ್ಶಕಿ ಶ್ರೀದೇವಿ ಕೆರೆಮನೆ

ಅವರನ್ನು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರು ಆಯ್ಕೆ ಮಾಡಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಸದಸ್ಯ ಸಂಚಾಲಕಿ
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the author

Adyot

Leave a Comment