ಆದ್ಯೋತ್ ಸುದ್ದಿನಿಧಿ:
ಫೆಬ್ರವರಿ ೨ರಂದು ನಡೆದ ಟೀಚರ್ಸ ಬ್ಯಾಂಕ ಉಡುಪಿ ಇದರ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಕುಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಎಂ ಎಸ್ ಹೆಗಡೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
೧೧೦ ವರ್ಷಗಳ ಇತಿಹಾಸವನ್ನು ಸದರಿ ಬ್ಯಾಂಕ ಹೊದಿದ್ದು, ವಾರ್ಷಿಕ ೧೦೦೦ಕೋಟಿ ವಹಿವಾಟು ನಡೆಸುವ ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ಆಗಿರುತ್ತದೆ. ಪ್ರಸ್ತುತ ೧೫ ಬ್ರಾಂಚ್ ಹೊಂದಿದ್ದು, ೧೮ ಜಿಲ್ಲೆಗಳು ಇದರ ಕಾರ್ಯವ್ಯಾಪ್ತಿಗೆ ಒಳಪಟ್ಟಿವೆ. ಉತ್ತರ ಕನ್ನಡದವರೇ ಆದ ಶಿರಾಲಿ ಸುಬ್ಬರಾಯರು ಸ್ಥಾಪಿಸಿದ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಮೊದಲಿಗರುಎಂ.ಎಸ್.ಹೆಗಡೆಯವರಾಗಿರುತ್ತಾರೆ.
ಇವರಿಗೆ ತಾಲೂಕಿನ ಶಿಕ್ಷಕರ ಸಂಘ,ಶಿಕ್ಷಕರ ವೇದಿಕೆ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ತಾಲೂಕಗಳ ಶಿಕ್ಷಕ ಸಂಘಟನೆಗಳು ಅಭಿನಂದಿಸಿವೆ.