ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹನಿಟ್ರ್ಯಾಪ್ ನಡೆದಿದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್ ದೂರು ನೀಡಿದ್ದು ಮೂವರು ಆರೋಪಿಗಳನ್ನು ಪೊಲೀಸ್ ರು ಬಂಧಿಸಿದ್ದು ಓರ್ವವ್ಯಕ್ತಿ ಪರಾರಿಯಾಗಿದ್ದಾನೆ.
ಅಜೀತ ಶ್ರೀಕಾಂತ ನಾಡಿಗ ಪ್ರಾಯ: 25 ವರ್ಷ ಸಾ:
ಕೆರೆಜಡ್ಡಿ ಉಂಚಳ್ಳಿ ಶಿರಸಿ,ಧನುಷ ಡಿ ಶೇಟ್ಟಿ ಪ್ರಾಯ: 25 ವರ್ಷ ಸಾ: ಗೋಲಗೇರಿ ಓಣಿ ಬನವಾಸಿ ರೋಡ್ ಶಿರಸಿ. ಪದ್ಮಜಾ ಡಿಎನ್ ರಂಗನಾಥ ಬಡಾವಣೆ ಗೋಪಾಳ ಶಿವಮೊಗ್ಗ
ಪ್ರಾಯ:50, ಬಂಧಿತ ಆರೋಪಿಗಳಾಗಿದ್ದು ರಫೀಕ್/ ಸಾಗರ ಪರಾರಿಯಾದ ಆರೋಪಿಯಾಗಿದ್ದಾನೆ.
ದೂರುದಾರನಿಗೆ ಉಪನ್ಯಾಸಕ ಹುದ್ದೆಯನ್ನು ಕೊಡಿಸುತ್ತೆನೆ ಎಂದು ನಂಬಿಸಿದ ಶಿರಸಿಯ ಇಬ್ಬರು ಆರೋಪಿಗಳು ಶಿವಮೊಗ್ಗಕ್ಕೆ ಕರೆದೊಯ್ದು ಮನೆಯೊಂದರ ಕೋಣೆಯಲ್ಲಿ ಕೂಡಿ ಹಾಕಿ ಮಹಿಳೆಯ ಜೊತೆ ಬೆತ್ತಲೆಯಾಗಿರಿಸಿ ಫೋಟೋ ತೆಗೆದು ವಿಡಿಯೊ ಮಾಡಿ ದೂರುದಾರನ ತಂದೆಗೆ ವಿಡಿಯೊ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೆವೆ ಮತ್ತು ಬಲತ್ಕಾರದ ಕೇಸ್ ದಾಖಲಿಸುತ್ತೆವೆ,ನಿನ್ನ ಮಗನನ್ನು ಕೊಲ್ಲುತ್ತೆವೆ ಇಲ್ಲವಾದರೆ ಹದಿನೈದು ಲಕ್ಷರೂ.ನೀಡು ಎಂದು ಬೆದರಿಸಿ ಚೆಕ್ ಪಡೆದು ಹೋಗಿದ್ದರು.
ಅಲ್ಲಿಂದ ಬಂದ ದೂರುದಾರ ಪೊಲೀಸ್ ರನ್ನು ಸಂಪರ್ಕಿಸಿ ದೂರು ನೀಡಿದಾಗ ಶಿರಸಿ ಪೊಲೀಸ್ ರು ಡಿವೈಎಸಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಕ್ಷಿಪ್ರಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.