ಸಿದ್ದಾಪುರ ಉತ್ಸವ-೨೦೨೫ಕ್ಕೆ ಚಾಲನೆ


ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ನೆಹರು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಸಿದ್ದಾಪುರ ಉತ್ಸವ ೨೦೨೫ಕ್ಕೆ ಶನಿವಾರ ಶಿರಳಗಿ ಶ್ರೀಚೈತನ್ಯ ರಾಜರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಯವರು ಮಾತನಾಡಿ,ಸಾಹಿತ್ಯ,ಸಂಗೀತ,ಕಲೆ ಇಲ್ಲದ ಮನುಷ್ಯ ಪಶುವಿಗೆ ಸಮಾನ,ಯಾರು ಬದುಕಿನಲ್ಲಿ ಕೇವಲ ಸಂಪಾದನೆ ಮಾಡುವುದು,ಉಣ್ಣುವುದು ಮಾಡುತ್ತಾ ಸೀಮಿತರಾಗಿರುತ್ತಾರೋ ಅಂತಹವರ ಜೀವನ ಪಶುವಿನಂತೆ ಎಂಬ ಮಾತು ಸಂಸ್ಕೃತದಲ್ಲಿ ಇದೆ. ಸಂಸ್ಕೃತಿ,ಸAಸ್ಕಾರ ಇಲ್ಲದವರ ಬದುಕು ಬದುಕೇ ಅಲ್ಲ. ನಮ್ಮ ಜೀವನ ಶೈಲಿ ನಮಗೆ ಪ್ರದಾನವಾಗಿರಬೇಕು.ಯಾರು ಸಂಸ್ಕಾರಯುತವಾಗಿ ಜೀವನವನ್ನು ನಡೆಸುತ್ತಾರೋ ಅಂತಹ ಶೈಲಿಗೆ ಸಂಸ್ಕೃತಿ ಎನ್ನುತ್ತಾರೆ.ವಿಕೃತಿಯಿಂದ ಪ್ರಕೃತಿಯೆಡೆಗೆ ಅಲ್ಲಿಂದ ಸಂಸ್ಕೃತಿಯ ಕಡೆಗೆ ಮನುಷ್ಯ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕಿದೆ.

filter: 0; jpegRotation: 0; fileterIntensity: 0.000000; filterMask: 0;

ನಮ್ಮದೇಶದ ಬಟ್ಟೆ ಉಡುವ ಪದ್ದತಿ ಇರಬಹುದು,ಗುರುಕುಲ ವಿದ್ಯಾಭ್ಯಾಸ,ವಿವಾಹ ಮತ್ತು ದಾಂಪತ್ಯಗಳ ಶೈಲಿ ನಮಗೆ ಆದರ್ಶವಾಗಿರಬೇಕು.ನಮ್ಮ ದಿನ ನಿತ್ಯದ ಜೀವನದಲ್ಲಿ ನಮ್ಮ ಸಂಸ್ಕೃತಿ ಹಾಸುಹೊಕ್ಕಾಗಿದೆ. ಇದನ್ನು ಪ್ರಾಚೀನ ಋಷಿಮಹರ್ಷಿಗಳು ನಮಗೆ ಕೊಟ್ಟಿದ್ದಾರೆ ಇದಕ್ಕೆ ಕಾರಣ ಮನುಷ್ಯ ಆನಂದವಾಗಿ ಬದುಕಬೇಕು ಎಂದು. ನಮ್ಮೋಳಗಡೆ ದೇವತೆಗಳು,ದಾನವರು,ಮನುಷ್ಯರು ಎಲ್ಲರೂ ಇದ್ದಾರೆ ಸ್ವಾರ್ಥ ನಾವು ಏನಾಗುತ್ತಿದ್ದೆವೆ ಎನ್ನುವುದನ್ನು ಸೂಚಿಸುತ್ತದೆ. ಮುಂದಿನ ಪೀಳಿಗೆಯವರಲ್ಲಿ ನಾವು ಸದ್ವೀಚಾರವನ್ನು ತರುವ ಪ್ರಯತ್ನ ಮಾಡಬೇಕು ಈ ದಿಸೆಯಲ್ಲಿ ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿ ಬರಬೇಕು ಎಂದು ಹೇಳಿದರು.

filter: 0; jpegRotation: 0; fileterIntensity: 0.000000; filterMask: 0;

ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿ,ಸಿದ್ದಾಪುರ ಎನ್ನುವುದು ಸ್ವಾತಂತ್ರö್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವನ್ನುವಹಿಸಿತ್ತು. ಇಲ್ಲಿ ಹರಿಯುವ ಅಘನಾಶಿನಿ ನದಿ ಸಿದ್ದಾಪುರವನ್ನು ಹಾರದಂತೆ ಸುತ್ತುವರಿದಿದೆ.ಇಲ್ಲಿ ಪ್ರತಿ ಸಮುದಾಯವು ಒಂದು ವಿಶೇಷವಾದ ಕಲೆಯನ್ನು ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿದೆ. ನಮ್ಮ ಊರಿನ ಕಲೆಯನ್ನು ಹೊರಗಿನವರು ನೋಡಬೇಕು ಹೊರಗಿನ ಊರಿನವರ ಕಲೆಯನ್ನು ನಮ್ಮ ಊರಿನವರು ನೋಡಿ ಸಂತೋಷ ಪಡಬೇಕು. ಪ್ರವಾಸೋದ್ಯಮದ ಕಲ್ಪನೆ ಬದಲಾಗುತ್ತಿದೆ ಮೊದಲು ಜನ ಇಲ್ಲಿ ದೇವಸ್ಥಾನಗಳ ನೋಡಲು ಪರ್ವತಗಳನ್ನು ಸಮುದ್ರವನ್ನು ನೋಡಲು ಬರುತ್ತಿದ್ದರು. ಜನತೆ ಸಂಸ್ಕೃತಿಯನ್ನು ಕಲೆಯನ್ನು ಅದರಲ್ಲಿ ತಲ್ಲಿನರಾಗಿ ಅದನ್ನು ತಾವು ಅರಗಿಸಿಕೊಳ್ಳಲು ಬರುವಂತಹ ಪ್ರವಾಸೋದ್ಯಮದ ಕಾಲ ಇದು. ಬರುವಂತಹ ದಿನಗಳಲ್ಲಿ ಸಿದ್ದಾಪುರ ಉತ್ಸವ ನಮ್ಮ ನಾಡಿನ ಕಲಾ ಶ್ರೀಮಂತಿಕೆಯನ್ನು ಜಗತ್ತಿನ ಎದುರು ತೆರೆದಿಡುವಂತಹ ಒಂದು ದೊಡ್ಡ ಪ್ರದರ್ಶನ ವೇದಿಕೆಯಾಗಬೇಕು ಎಂದರು

filter: 0; jpegRotation: 0; fileterIntensity: 0.000000; filterMask: 0;

ಉತ್ಸವ ಸಮಿತಿಯ ಉಪೇಂದ್ರ ಪೈಮಾತನಾಡಿ,ಕಳೆದ ಮೂರು ವರ್ಷಗಳಿಂದ ಸಿದ್ದಾಪುರ ಉತ್ಸವವನ್ನು ನಾವು ಆಚರಿಸುತ್ತಾ ಬಂದಿದ್ದೇವೆ. ಕೆ.ಜಿ ನಾಯ್ಕ ಹಣಜೀಬೈಲ್ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಸಿದ್ದಾಪುರ ಸ್ವತಂತ್ರ ಹೋರಾಟದಿಂದಲೂ ಕೂಡ ದೇಶಕ್ಕೆ ಮಾದರಿಯಾಗಿ ಗುರುತಿಸಿಕೊಂಡಿದೆ. ನಮ್ಮ ಸಿದ್ದಾಪುರ ಉತ್ಸವ ಬೇರೆ ತಾಲೂಕು ಜಿಲ್ಲೆ ರಾಜ್ಯ ಗಳಿಂದ ಬಂದವರಿಗೂ ಕೂಡ ವೇದಿಕೆಯಲ್ಲಿ ಅವಕಾಶ ಕಲ್ಪಿಸಿದ್ದೇವೆ ಈ ವೇದಿಕೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್‌ವಹಿಸಿದ್ದರು.
ವೇದಿಕೆಯಲ್ಲಿ ಜೀವಜಲರಕ್ಷಣಾ ಸಂಘಟನೆಯ ಶ್ರೀನಿವಾಸ ಹೆಬ್ಬಾರ ಸಮಿತಿಯ ಪದಾಧಿಕಾರಿಗಳಾದ ನಾಗರಾಜ ನಾಯ್ಕ,ಸತೀಶ ಹೆಗಡೆ ಬೈಲಳ್ಳಿ, ಸುದರ್ಶನ ಪಿಳ್ಳೆ,ಎಸ್.ಕೆ.ಮೇಸ್ತ,ವಿಜಯೇಂದ್ರ ಗೌಡರ್,ರವಿಕುಮಾರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment