ದಾವಣಗೆರೆಯಲ್ಲಿ “ಇಟಗಿ ಇತಿ ವೃತ್ತ” ಪುಸ್ತಕ ಪರಿಚಯ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಇತ್ತೀಚೆಗೆ ಸಿದ್ದಾಪುರ ಇಟಗಿಯ ಐತಿಹಾಸಿಕ ಶ್ರೀರಾಮೇಶ್ವರ ದೇವರ ಬ್ರಹ್ಮಕಲಶೋತ್ಸವದ ನಿಮಿತ್ತ ಲೇಖಕ ಅತ್ತಿಮರಡು ವಿಶ್ವೇಶ್ವರ ಹೆಗಡೆ ರಚಿಸಿರುವ ಶ್ರೀಕ್ಷೇತ್ರ ಇಟಗಿಯ ಇತಿಹಾಸವನ್ನು ಸಾರುವ “ಇಟಗಿಯ ಇತಿವೃತ್ತ”ಪುಸ್ತಕದ ಪರಿಚಯ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೃಶ್ಯಕಲಾ ಮಹಾವಿದ್ಯಾಲಯ ಬೋಧಕ ದತ್ತಾತ್ರೇಯ ಭಟ್ ಮಾತನಾಡಿ,ಐತಿಹಾಸಿಕ ಮತ್ತು ಪೌರಾಣಿಕ ಕುರುಹುವಿನ ಜೊತೆಗೆ ಪ್ರಾಚೀನ ಕಾಲದ ವಾಸ್ತಶಿಲ್ಪ ಜ್ಞಾನವನ್ನು ಇಟಗಿ ಇತಿವೃತ್ತ ಪುಸ್ತಕ ನೀಡಲಿದೆ 14 ಅಂಶಗಳೊಂದಿಗೆ ಸಂಶೋಧನಾ ನೆಲೆಯಲ್ಲಿ ಬರೆದಿರುವ ಈ ಪುಸ್ತಕದಲ್ಲಿ ರಾಮೆಶ್ವರ ದೇವಾಲಯದ ಜೊತೆಗೆ ಸುತ್ತಲಿನ ಭಾರತೀಯ ದೇವಾಲಯದ ಸಂಸ್ಕೃತಿಯ ಬಗ್ಗೆ ವಿವರಿಸಲಾಗಿದೆ. ವಿಜಯನಗರ ಶೈಲಿಯ ಈ ದೇವಾಲಯದಲ್ಲಿ ಚಂದ್ರಶೇಖರ,ಆಲಿಂಗನ ಚಂದ್ರಶೇಖರ ಹಾಗೂ ಉಮಾ ಸಹಿತ ಚಂದ್ರಶೇಖರ ಮೂರ್ತಿಗಳಿವೆ.ಷಡಾಧಾರ ಕರ್ಮದಲ್ಲಿ ೬ ಮೊನೆಯ ಕ್ರಮಗಳಲ್ಲಿ ಲಿಂಗಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನದ ವಾಸ್ತುವಿನ್ಯಾಸ,ನಕಾಶೆ ಹೇಗಿರಬೇಕೆಂಬ ವಿವರಣೆ ಈ ಪುಸ್ತಕದಲ್ಲಿದೆ.ಇದು ಶಿಲ್ಪಕಲೆಯನ್ನು ಅಧ್ಯಯನ ಮಾಡಲು ಸಹಕಾರಿಯಾಗಿದೆ. ಸೋಮ,ಶರಾವತಿ,ಅಘನಾಶಿನಿ ನದಿಗಳು,ಪರ್ವತಶ್ರೇಣಿಗಳಿಂದ ಕೂಡಿರುವ ಈ ಕ್ಷೇತ್ರವು ಅಯೋಧ್ಯೆ ನಗರಕ್ಕೆ ಹೋಲುವಂತಿದೆ. ಈ ಕ್ಷೇತ್ರದ ಬಗ್ಗೆ ಶಿವರಾಮ ಕಾರಂತರೂ ಸೇರಿದಂತೆ ಅನೇಕ ವಿದ್ವಾಂಸರು ಉಲ್ಲೇಖಿಸಿದ್ದಾರೆ ಎಂದು ಹೇಳಿದ ಅವರು ಈ ಪುಸ್ತಕದಲ್ಲಿ ಕೆಲಪದ್ಯಗಳ ಜೊತೆಗೆ ಅಲ್ಲಿ ಭೇಟಿ ನೀಡಿರುವ ಭಕ್ತರ ಅನುಭವಗಳನ್ನು ದಾಖಲಿಸಿದರೆ ಉಪಯುಕ್ತವಾಗುತ್ತಿತ್ತು ಎಂದು ಹೇಳಿದರು.

ಕ್ಷ-ಕಿರಣ ತಜ್ಞಡಾ.ಎಸ್.ಆರ್.ಹೆಗಡೆ ಮಾತನಾಡಿ,ಏಪ್ರಿಲ್ ಮೊದಲವಾರದಲ್ಲಿ ಇಟಗಿ ರಾಮೆಶ್ವರ ದೇವರ ಬ್ರಹ್ಮಕಲಶೋತ್ಸವ ನೇರವೇರಲಿದೆ.ಇದಕ್ಕೆ ಆರ್ಥಿ ನೆರವು ನೀಡಬೇಕು ಎಂದು ಕೋರಿದರು.
ಬಾಪೂಜು ವಿದ್ಯಾಸಂಸ್ಥೆ ನಿರ್ದೇಶಕ ಸಂಪನ್ನ ಮುತಾಲಿಕ ಮಾತನಾಡಿ,14 ಆಧಾರದ ಮೂಲಕ ದೇವಸ್ಥಾನದ ಗರ್ಭಗುಡಿ,ಪೀಠ,ದೀಪಸ್ತಂಭ ಯಾವ್ಯಾವ ದಿಕ್ಕಿನಲ್ಲಿರಬೇಕೆಂಬ ಬಗ್ಗೆ ವಿವರಿಸಿರುವುದು ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು.
ವಿಕಸ್ಥಾನಿಕ ಸಂಪಾದಕ ಸದಾನಂಧ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ವಿನೇಶ ಶೆಟ್ಟಿ,ಬಾತಿಯ ತಪೋವನ ಸಮೂಹ ಸಂಸ್ಥೆಯ ಛೇರ‍್ಮನ್ ಡಾ.ಶಶಿಕುಮಾರ ಮೆಹರ್ವಾಡೆ,ವಕೀಲ ಅರುಣ ಹೆಗಡೆ ಉದ್ಯಮಿ ಕುಸುಮ ಶ್ರೇಷ್ಠಿ,ಬ್ರಹ್ಮಕಲಶೋತ್ಸವ ಸಮಿತಿ ನಾರಾಯಣಮೂರ್ತಿ ಹೆಗಡೆ ಹರಗಿ,ಗಜಾನನ ಹೆಗಡೆ ಕೊಡ್ತಗಣಿ ಉಮೇಶ ಹೆಗಡೆ ಕೊಡ್ತಗಣಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ಅನುಶ್ರೀ ಬಳಗದ ವೀಣಾ ಹೆಗಡೆ ತಂಡದಿಂದ ಶಿವ ಗೀತೆ ಗಾಯನ ನಡೆಯಿತು.
—–
ಸಾಮಾಜಿಕ ಜಾಲತಾಣ ಹಾವಳಿಯಿಂದ ಮಕ್ಕಳಿಗೆ ದೇಶದ ಪರಂಪರೆ ಮತ್ತು ಇತಿಹಾಸದ ಅರಿವಿಲ್ಲದಂತಾಗಿದೆ. ಇಂತಹ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರಬೇಕು ಇಟಗಿ ರಾಮೇಶ್ವರ ದೇವರ ಬ್ರಹ್ಮಕಲಶೋತ್ಸವಕ್ಕೆ ಬಂಟರ ಸಮುದಾಯದಿಂದ ನೆರವು ನೀಡಲಾಗುವುದು.
ದಿನೇಶ ಕೆ.ಶೆಟ್ಟಿ
ದೂಡಾ ಅಧ್ಯಕ್ಷರು
—-
ಶೈವವೈಷ್ಣವ ಒಂದೇ ಎಂದು ಸಾರಲು ರಾಮಈಶ್ವರರನ್ನು ಒಟ್ಟಿಗೆ ಪೂಜಿಸುವ ಪ್ರತೀತಿ ಇದೆ ಧಾರ್ಮಿಕ ಕೇಂದ್ರಗಳನ್ನು ಪರಿಚಯಿಸಲು ಹೆಚ್ಚು ಜನರನ್ನು ಕರೆದುಕೊಂಡು ಹೋಗಬೇಕು
ಡಾ.ಶಶಿಕುಮಾರ ಮೆಹರ್ವಾಡೆ ಅಧ್ಯಕ್ಷರು.
ತಪೋವನ ಸಮೂಹ ಸಂಸ್ಥೆ

About the author

Adyot

Leave a Comment