ದೆಹಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ

ಆದ್ಯೋತ್ ಸುದ್ದಿನಿಧಿ:
ದೆಹಲಿಯ ಒಂಬತ್ತನೆ ಮುಖ್ಯಮಂತ್ರಿ ಯಾಗಿ ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಮುಗಿದು ಬಿಜೆಪಿ ಜಯಭೇರಿ ಬಾರಿಸಿ ಒಂದು ತಿಂಗಳು ಕಳೆಯುತ್ತಾ ಬಂದಿದ್ದರೂ ಮುಖಮಂತ್ರಿ ಹೆಸರನ್ನು ಅಂತಿಮಗೊಳಿಸದೆ ಗೊಂದಲದಲ್ಲಿತ್ತು. ಈಗ ಮಹಿಳಾ ಮುಖ್ಯಮಂತ್ರ್ರಿಯ ಹೆಸರನ್ನು ಅಂತಿಮಗೊಳಿಸಿದೆ.
ಮುಖ್ಯಮಂತ್ರಿ ಯ ರೇಸ್ ನಲ್ಲಿ ಪರ್ವೇಶ ವರ್ಮಾ, ಸತೀಶ ಉಪಾಧ್ಯಾಯ,ವಿಜೇಂದ್ರ ಗುಪ್ತ ಇದ್ದರು ಆದರೆ ಅಚ್ಚರಿಯ ಘಟನೆಗಳನ್ನು ನೀಡುವ ಬಿಜೆಪಿ ಇದೇ ಮೊದಲಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಬನಿಯ ಸಮುದಾಯಕ್ಕೆ ಸೇರಿದ ರೇಖಾ ಗುಪ್ತಾರನ್ನು ಆಯ್ಕೆ ಮಾಡಿದೆ.

ಬಿಜೆಪಿಯ ಪ್ರಮುಖ ನಾಯಕಿಯಾಗಿರುವ ಗುಪ್ತಾ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೂಲಕ ರಾಜಕೀಯ ಜೀವನ ಪ್ರಾಂಭಿಸಿದ್ದರು.1996-97ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದರು.2007ರಲ್ಲಿ ಕೌನ್ಸಿಲ್ ರ ಆಗಿ ಆಯ್ಕೆಯಾದರು.ಬಿಜೆಪಿ ದೆಹಲಿ ಬಿಜೆಪಿ ಮಹಿಳಾಮೋರ್ಚಾದ ಪ್ರದಾನಕಾರ್ಯದರ್ಶಿಯಾಗಿ,ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಪ್ರಥಮ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗಿದ್ದಾರೆ.

About the author

Adyot

Leave a Comment