ವಿಮಾಕಂಪನಿಯವರ ಡೊಂಬರಾಟಕ್ಕೆ ಕೇಂದ್ರಸರಕಾರ ನಿಯಂತ್ರಣ ಮಾಡಲಿ– ಶಿವರಾಮ ಹೆಬ್ಬಾರ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಶಿರಸಿಯಲ್ಲಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರರವರು ಬೆಳೆವಿಮಾ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಳೆವಿಮಾ ಕಂಪನಿಯವರು ರೈತರ ನೆರವಿಗೆ ಬರದೆ ಡೊಂಬರಾಟ ಮಾಡುತ್ತಿದ್ದಾರೆ ಇವರ ಈ ಆಟವನ್ನು ಕೇಂದ್ರ ಸರ್ಕಾರ ನಿಯಂತ್ರಣ ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಪರಸ್ಪರ ಸಂಘರ್ಷ ಬೇಡ. ಎರಡೂ ಸರಕಾರದವರೂ ಸೇರಿ ರೈತರಿಗೆ ನೆರವಾಗುವುದು ಒಳ್ಳೆಯದು .ವಿಮಾ ಕಂಪೆನಿಯ ನಿಯಂತ್ರಣ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಮಳೆ ಮಾಪನ ಯಂತ್ರ ಸರಿಯಿಲ್ಲ ಎಂದು ಹೇಳುತ್ತಾರೆ.. ವಿಮಾ ಹಣ ಭರಣ ಮಾಡಿಸಿಕೊಂಡಿದ್ದಾರೆ. ಹಾಗಿದ್ದ ಮೇಲೆ ಪರಿಹಾರ ನೀಡಬೇಕಲ್ಲವೆ? ವಿಮಾ ಕಂಪೆನಿಯು ರೈತರ ಮೇಲೆ ಅನಗತ್ಯ ಸವಾರಿ ಮಾಡುತ್ತಿದೆ. ರಾಜ್ಯ ಸರ್ಕಾರದಿಂದ ೫ ಸಭೆ ನಡೆಸಲಾಗಿದೆ. ೪೬ ಗ್ರಾಪಂಗೆ ಬೆಳೆ ವಿಮೆ ಬಂದಿದೆ. ಶೇ.೧೦ ರಷ್ಟು ತೋಟಗಾರಿಕಾ ಬೆಳೆ ಇರುವ ಪಂಚಾಯತ ವ್ಯಾಪ್ತಿಯ ರೈತರಿಗೆ ವಿಮೆ ಬಂದಿದೆ. ಅಡಿಕೆ ಬೆಳೆ ದೊಡ್ಡ ಪ್ರಮಾಣದಲ್ಲಿ ಇರುವ ಗ್ರಾಪಂ ವ್ಯಾಪ್ತಿಯ ರೈತರಿಗೆ ವಿಮೆ ಪರಿಹಾರ ಬಂದಿಲ್ಲ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ ವಿಮಾ ಕಂಪೆನಿಯ ಈ ತರಹದ ಧೋರಣೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಪ್ರತಿ ತಿಂಗಳು ವಿಮಾ ಕಂಪೆನಿ ಮಳೆ ಮಾಪನ ಕೇಂದ್ರವನ್ನು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿತ್ತು. ಈ ರೀತಿ ಮಾಡದೆ ಈಗ ಮಳೆ ಮಾಪನ ಕೇಂದ್ರದ ಅಂಕಿ-ಅAಶ ಹೊಂದಾಣಿಕೆಯಾಗುತ್ತಿಲ್ಲ ಎನ್ನುವುದು ತಪ್ಪು.ರೈತರಿಗೆ ಅನ್ಯಾಯವಾಗುತ್ತಿರುವುದನ್ನು ನಾವು ಸಹಿಸುವುದಿಲ್ಲ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನೇತೃತ್ವದಲ್ಲಿ ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿಲಿದ್ದೇವೆ.ಲೋಕಸಭಾ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಆರೋಪ ನಿಲ್ಲಿಸಿದರೆ ಒಳ್ಳೆಯದು. ರಾಜಕಾರಣವನ್ನು ಬದಿಗಿಟ್ಟು ಎಲ್ಲರೂ ಒಟ್ಟಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಂದಾಣಿಕೆ ಮಾಡಿಕೊಂಡು ರೈತರಿಗೆ ವಿಮೆ ಹಣ ಬಿಡುಗಡೆಗೆ ಕ್ರಮ ವಹಿಸಬೇಕು ಎಂದರು.

ರಾಜ್ಯ ಬಿಜೆಪಿ ಗೊಂದಲ ಗಮನಿಸುತ್ತಿದ್ದೇನೆ. ಅದರ ಕುರಿತು ಪ್ರತಿಕ್ರಿಯಿಸಲಾರೆ. ಕಾಂಗ್ರೆಸ್ ನ ಆಂತರಿಕ ಕಲಹದ ಕುರಿತು ಪ್ರತಿಕ್ರಿಯೆ ನೀಡಲು ನನಗೆ ಯಾವುದೇ ಅಧಿಕಾರವಿಲ್ಲ. ಎಂದರು.

About the author

Adyot

Leave a Comment