ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮಾವಿನಹೊಳೆಯಲ್ಲಿ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ ಸಂಘ ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಮಹಿಳೆಯರು ಮತ್ತು ಪುರುಷರ ಹಗ್ಗಜಗ್ಗಾಟ ಪಂದ್ಯಾವಳಿ ಕಾರ್ಯಕ್ರಮ ನಡೆಯಿತು.
ಶರಾವತಿ ಬಲದಂಡೆಯ ಮೇಲಿರುವ ಮಾವಿನಹೊಳೆಯಲ್ಲಿ ಹಗ್ಗಜಗ್ಗಾಟ ಕಾರ್ಯಕ್ರಮಕ್ಕೆ ಅದ್ಧೂರಿಯಾದ ಅಂಕಣವನ್ನು ಸಿದ್ಧಪಡಿಸಲಾಗಿತ್ತು. ಸಾವಿರಾರು ಆಸನಗಳ ವ್ಯವಸ್ಥೆ ಮಾಡಿ, ಬಂದವರಿಗೆ ಊಟೋಪಚಾರಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಸಭಾ ಕಾರ್ಯಕ್ರಮಕ್ಕಾಗಿ ಅದ್ದೂರಿ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ರಾಮಕ್ಷತ್ರೀಯ ಸಮಾಜದ ಇತಿಹಾಸದಲ್ಲಿ ಹಿಂದೆAದೂ ಕಂಡರಿಯದ ಸಮಾರಂಭಕ್ಕೆ ಈ ಹಗ್ಗಜಗ್ಗಾಟ ಪಂದ್ಯಾವಳಿ ಸಾಕ್ಷಿಯಾಯ್ತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ ಸಂಘ ರಾಮಕ್ಷತ್ರೀಯ ಸಮಾಜಕ್ಕಾಗಿ ಸಿದ್ಧಪಡಿಸಿದ ನೂತನ ಧ್ವಜವನ್ನು ಸ್ವರ್ಣವಲ್ಲಿ ರಾಮಕ್ಷತ್ರೀಯ ಪರಿಷತ್‌ನ ಅಧ್ಯಕ್ಷ ಎಸ್.ಕೆ. ನಾಯ್ಕ ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮಕ್ಕೆ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ತನುಜಾ ಬಾಬುರಾವ ಹೊಸಪಟ್ಟಣಕರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಪ್ರಶಾಂತ ನಾಯ್ಕ ಮಿರ್ಜಾನ್ ರಾಮಕ್ಷತ್ರೀಯ ಲಾಂಚನ ಬಿಡುಗಡೆಗೊಳಿಸಿದರು. ಹಿರೆಗುತ್ತಿ ಆರ್.ಎಪ್.ಒ ರಾಜು ನಾಯ್ಕ ರಾಮಕ್ಷತ್ರೀಯ ಸ್ವಾಭಿಮಾನದ ಧ್ಯೇಯಗೀತಯನ್ನು ಲೋಕಾರ್ಪಣೆಗೊಳಿಸಿದರು.
ತನುಜಾ ಬಾಬುರಾವ ಹೊಸಪಟ್ಟಣಕರ ಮಾತನಾಡಿ, ರಾಮಕ್ಷತ್ರೀಯ ಸಮಾಜದವರು ಶೈಕ್ಷಣಿಕವಾಗಿ ಯಶಸ್ಸನ್ನು ಸಾಧಿಸಬೇಕು. ಶೈಕ್ಷಣಿಕವಾಗಿ ಯಶಸ್ಸು ಸಾಧಿಸಿದರೆ ಮಾತ್ರ ಯಾವುದೇ ಸಮಾಜ ಪ್ರಗತಿಪಥದಲ್ಲಿ ನಡೆಯೋದಕ್ಕೆ ಸಾಧ್ಯ ಹಾಗೇ ನಮ್ಮ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಮಕ್ಷತ್ರೀಯ ಸಂಘದಿAದ ನೆರವು ನೀಡಬೇಕು ಎಂದ ಹೇಳಿದ ರು.
ಶಾಸಕ ದಿನಕರ ಶೆಟ್ಟಿಯವರು ಮಾತನಾಡಿ, ಪ್ರತಿಯೊಂದು ಸಮಾಜವೂ ಸಂಘಟಿತವಾಗಿ ಹೋರಾಡುತ್ತಿದೆ. ಆದರೆ ಈ ವಿಚಾರದಲ್ಲಿ ರಾಮಕ್ಷತ್ರೀಯ ಸಮಾಜ ತುಂಬಾ ಹಿಂದುಳಿದಿತ್ತು. ಆದರೆ ಈಗ ಸಂಘಟಿತರಾಗುವ ಕಾಲ ಬಂದಿದೆ. ನನ್ನ ರಾಜಕೀಯ ಜೀವನದಲ್ಲಿ ರಾಮಕ್ಷತ್ರೀಯ ಸಮಾಜದ ಸೇವೆ ಅಗಣಿತವಾದದ್ದು. ನಿಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದರು
ಸ್ವರ್ಣವಲ್ಲಿ ರಾಮಕ್ಷತ್ರೀಯ ಪರಿಷತ್ ಅಧ್ಯಕ್ಷ ಎಸ್.ಕೆ. ನಾಯ್ಕ ಮಾತನಾಡಿ, ಈ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿರುವ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ ಸಂಘದ ಸಂಘಟಕರ ಕಾರ್ಯವನ್ನು ಪ್ರಶಂಸಿಸಿದರು.
ಹಗ್ಗಜಗ್ಗಾಟ ಕಾರ್ಯಕ್ರಮದ ಸಂಘಟಕ ಕವನ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಇದು ನಮ್ಮ ಸಂಘದ ನಾಲ್ಕನೇ ಕಾರ್ಯಕ್ರಮ. ಈ ಹಿಂದೆ ಮೂರು ಕಾರ್ಯಕ್ರಮಗಳನ್ನು ಮಾಡಿ ಸೈ ಎನಿಸಿಕೊಂಡಿದ್ದೇವೆ. ಇದು ೨೬ ಮನೆಯವರು ಸೇರಿ ಮಾಡಿದ ಕಾರ್ಯಕ್ರಮ. ಇಂತ ಕಾರ್ಯಕ್ರಮವನ್ನು ಮಾಡಲು ರಾಮಕ್ಷತ್ರೀಯ ಸಮಾಜದಿಂದ ಮಾತ್ರ ಸಾಧ್ಯ. ಹಿಂದು ಕ್ಷತ್ರಿಯ ಎಂದು ಶಾಲಾ ದಾಖಲೆಗಳಲ್ಲಿ ಬರೆಸಿದ ನಮ್ಮ ಉತ್ತರ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮುದಾಯದವರನ್ನು ಕೇಂದ್ರದ ಒಬಿಸಿ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಕಾರಿ ಸೌಲಭ್ಯ ಸಿಗುತ್ತಿಲ್ಲ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಈ ವೇದಿಕೆಯನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದರು.
ರಾಮಕ್ಷತ್ರಿಯ ಸಮಾಜದ ಎಲ್ಲ ಊರಿನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯ್ತು. ಎಲ್ಲರ ಪರವಾಗಿ ಮಾತನಾಡಿದ ಮೋಹನ್ ಸಾಲೆಹಿತ್ತಲ ಅವರು, ಇವತ್ತು ಸನ್ಮಾನಿತರಾದವರು ನಿಮ್ಮೂರಿನ ವ್ಯಾಪ್ತಿಗೆ ಕೆಲಸ ಮಾಡದೇ, ನಮ್ಮ ಸಮಾಜದ ಒಗಟ್ಟಿಗಾಗಿ ಶ್ರಮಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು ಎಂದು ಕಿವಿ ಮಾತು ಹೇಳಿದರು.