ಆದ್ಯೋತ್ ಸುದ್ದಿನಿಧಿ:
ಶಿರಸಿಯ ಸರಕಾರಿ ಪ್ರಥಮದರ್ಜೆ ಕಾಲೇಜ್ ನಲ್ಲಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉತ್ತರಕನ್ನಡ ಜಿಲ್ಲೆಯ ಚಕೋರ ಸಾಹಿತ್ಯ ವಿಚಾರ ವೇದಿಕೆ ವಿಶೇಷ ಉಪನ್ಯಾಸ
ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
ಅಧ್ಯಕ್ಷತೆವಹಿಸಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜನಾರ್ಧನ್ ಭಟ್ ಮಾತನಾಡಿ, ಜನಪ್ರಿಯತೆಯಿರುವ ಓದುವ ಕೃತಿಯನ್ನು ಬೇರೆ ಬೇರೆ ಮಗ್ಗುಲುಗಳಿಂದ ವಿಶ್ಲೇಷಿಸಿ ವಿಮರ್ಶಿಸಿ ಅರ್ಥಮಾಡಿಕೊಳ್ಳಬೇಕು.ಆಯಾ ಕಾಲಘಟ್ಟದಲ್ಲಿನ ಸಾಮಾಜಿಕ ಪರಿಸ್ಥಿತಿ ಮತ್ತು ವೈರುಧ್ಯತೆಗಳನ್ನು ಅರಿತುಕೊಳ್ಳುವಲ್ಲಿ ಸಾಹಿತ್ಯದ ಓದು ಅಧ್ಯಯನಗಳು ಬಹಳ ಮುಖ್ಯ.ಇತಿಹಾಸದ ಆಳವಾದ ತಿಳುವಳಿಕೆಯು ಕೃತಿಯನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಲು ಸಹಕಾರಿಯಾಗಿದೆ.ಜ್ಞಾನವಂತರಾದ ನಾವು ವಿಷಯಗಳ ವಿಮರ್ಶೆ ಮಾಡಿ ನಂತರ ನೈಜತೆಯನ್ನು ಒಪ್ಪಿಕೊಳ್ಳಬೇಕೆಂದು ಹೇಳಿದರು
ಉಪನ್ಯಾಸ ನೀಡಿದ ರೇಖಾ ಬಿಳಗಲಿ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯಲ್ಲಿ ಲೇಖಕಿ ಸಾರಾಅಬೂಬಕರ,ಮಾನವ ಪ್ರಪಂಚದಲ್ಲಿ ಪೊರೆಯುವಂತಹ ಗುಣ ಹೆಣ್ಣಿಗಿದೆ.ಈ ಆಧುನಿಕ ಯುಗದಲ್ಲಿ ಹೆಣ್ಣು ಗಂಡಿಗೆ ಸಮನಾಗಿ ನಿಲ್ಲಬಲ್ಲಳು.ಯಾವುದೇ ಧರ್ಮಗ್ರಂಥಗಳಲ್ಲಿ ಅವಗುಣಗಳಿಲ್ಲ, ಅವಗುಣಗಳಿರುವುದು ಮನುಷ್ಯನಲ್ಲಿ ಕಾದಂಬರಿಯ ಮುಖ್ಯ ಪಾತ್ರದಾರಿಯಾದ ನಾದೀರಾ. ಗಂಡಿನ ಆಡಳಿತಕ್ಕೂಳಪಟ್ಟ ಸ್ತ್ರೀ ಆ ಕಾಲದಲ್ಲಿ ಹೇಗೆ ಭೋಗದ ವಸ್ತುವಾಗಿದ್ದಳು, ಪುರುಷರ ದಬ್ಬಾಳಿಕೆಯಲ್ಲಿ ಸ್ತ್ರೀ ಅನುಭವಿಸಿದ ವೇದನೆ ಎಂತಹದ್ದು ಎಂಬುದನ್ನು ಸಾರಾ ಅವರು ಉತ್ತಮವಾಗಿ ಚಿತ್ರಿಸಿದ್ದಾರೆ ಧರ್ಮಗ್ರಂಥ, ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯದ ಕುರಿತು ಈ ಕಾದಂಬರಿ ಮಾತನಾಡುತ್ತದೆ. ಮುಖ್ಯ ಪಾತ್ರದಾರಿ ನಾದೀರಾ ಶೋಷಣೆಗೆ ಒಳಗಾಗುವ ಎಲ್ಲ ಮುಸ್ಲಿಂ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತದೆ. ಗಂಡಿನ ಆಧೀನದಲ್ಲಿದ್ದ ಸ್ತ್ರೀ ಆ ಕಾಲದಲ್ಲಿ ಸಂಪ್ರದಾಯದ ಹೆಸರಿನಲ್ಲಿ ನಲುಗಿದ್ದ ನೋವು ಈ ಕಾದಂಬರಿಯ ಮುಖ್ಯ ವಸ್ತುವಾಗಿದೆ. ಧರ್ಮದ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆಯಲ್ಲಿ ಹೆಣ್ಣು ಅನುಭವಿಸಿದ ನೋವು ವೇದನೆ ಎಂಥದ್ದು ಎಂಬುದನ್ನು ಸಾರಾ ಅವರು ಈ ಕಾದಂಬರಿಯಲ್ಲಿ ಹೃದಯ ವಿದ್ರಾವಕವಾಗಿ ಚಿತ್ರಿಸಿದ್ದಾರೆ. ತಪ್ಪು ತಿಳುವಳಿಕೆ, ಸಂವಹನದ ಕೊರತೆ ಹೇಗೆ ಇಡೀ ಬದುಕನ್ನು ಛಿದ್ರವಾಗಿಸುತ್ತದೆ ಎನ್ನುವುದಕ್ಕೆ ಈ ಕಾದಂಬರಿ ಜ್ವಲಂತ ಉದಾಹರಣೆ ಎಂದು ರೇಖಾ ಬಿಳಗಲಿ ಹೇಳಿದರು.
ಡಾ ವಿಜಯಲಕ್ಷ್ಮಿ ದಾನರೆಡ್ಡಿಯವರು ಮಾತನಾಡಿ,
ಮಹಿಳಾ ಸಾಹಿತ್ಯ ಎಂದರೆ ಹಿಂದಿನ ಕಾಲದ ಪುರುಷರ ದಬ್ಬಾಳಿಕೆಗೆ ಸೇಡು ತೀರಿಸಿಕೊಳ್ಳುವುದಲ್ಲ, ಬದಲಾಗಿ ಮಹಿಳೆಯರು ತಮ್ಮ ಸ್ಥಾನಮಾನದ ಕುರಿತು ಹೋರಾಡುವುದು, ಮತ್ತು ಮಹಿಳೆಯರ ಸಂವೇದನೆಗಳನ್ನು ಹಂಚಿಕೊಳ್ಳುವುದು ಎಂಬುದನ್ನು ನಾವು ಅರಿಯಬೇಕು ಎಂದು ತಿಳಿಸಿದರು.