ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ-69ರ ಉಪ್ಪೋಣಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಮತ್ತು ಸ್ಕಾರ್ಪೀಯೋ
ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಸ್ಕಾರ್ಪಿಯೋ
ದಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.ಬಸ್ ಮತ್ತು ಕಾರಿನಲ್ಲಿದ್ದ 6 ಜನರು ತೀವ್ರಗಾಯಗೊಂಡಿದ್ದಾರೆ.
ಭಟ್ಕಳ ಡಿಪೋಗೆ ಸೇರಿದ ಸಾರಿಗೆ ಬಸ್ ಹೊನ್ನಾವರದ ಕಡೆಯಿಂದ ಶಿರಸಿಗೆ ತೆರಳುತ್ತಿದ್ದು ಸ್ಕಾರ್ಪಿಯೋ ಕಾರು ಜೋಗದಿಂದ ಹೊನ್ನಾವರದ ಕಡೆಗೆ ತೆರಳುತ್ತಿತ್ತು ಕಾರಿನಲ್ಲಿದ್ದವರು ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ
ಮೃತಪಟ್ಟವರು ರಕ್ಷಿತ ಬೆಂಗಳೂರು(28) ಶ್ರೀನಿವಾಸ ಬೆಂಗಳೂರು(60) ಎನ್ನಲಾಗಿದೆ.
ನಾಗರಾಜ ಬಿ.ಎಸ್.ಬೆಂಗಳೂರು,ರಂಗಸ್ವಾಮಿ ಬೆಂಗಳೂರು
ವಿ.ಕೃಷ್ಣಪ್ಪ ಬೆಂಗಳೂರು.ಅಜ್ಮೀರ್ ಶಹಾಬುದ್ದೀನ್ ಸಾಬ್ ಕೆಎಸ್ಆರ್ಟಿಸಿ ಬಸ್ ಚಾಲಕ.ರಾಮಕೃಷ್ಣ ಮೋಚಾ ಖಾರ್ವಿ, ಮರವಂತೆ ಉಡುಪಿ,ರತಿ ನೇಮಿರಾಜ ಜೈನ್,ಮಾವಿನಗುಂಡಿ
ಗಾಯಗೊಂಡವರಾಗಿದ್ದಾರೆ.