ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ತಹಸೀಲ್ದಾರ ಕಚೇರಿ ಎದುರು ಬುಧವಾರ ವಿವಿಧ ಬ್ರಾಹ್ಮಣ ಸಮಾಜದವರು, ಶಿವಮೊಗ್ಗ ದಿಂದ ಬಿದರ್‌ವರೆಗೆ ಸಿಇಟಿ ಪರೀಕ್ಷೆಯ ವೇಳೆ ಜನಿವಾರ ತೆಗೆಸಿದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ ಶ್ಯಾಮಸುಂದರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಹವ್ಯಕಮಹಾಸಭಾದ ತಾಲೂಕು ಅಧ್ಯಕ್ಷ ಮಹೇಶ ಹೆಗಡೆ ಚಟ್ನಳ್ಳಿ ಮಾತನಾಡಿ,ಭಾರತೀಯ ಸಂಸ್ಕೃತಿ ಅತ್ಯಂತ ವಿಶಿಷ್ಟವಾದದ್ದು ನಮ್ಮ ಸಂಸ್ಕೃತಿಯಲ್ಲಿ ಶಾಸ್ತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ. ಆದರೆ ಇತ್ತೀಚೆಗೆ ಬ್ರಾಹ್ಮಣರನ್ನು ಅವಹೇಳನ ಮಾಡುವಂತಹ ಅನೇಕ ಪ್ರಕರಣಗಳು ನಡೆಯುತ್ತಿವೆ. ಇಂಥ ಕೃತ್ಯಗಳು ಒಂದು ವ್ಯಕ್ತಿಯಿಂದ ಆಗಿದ್ದಲ್ಲ. ಆದರೆ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬೀದರ್ ನಿಂದ ಹಿಡಿದು ಶಿವಮೊಗ್ಗ ವರೆಗೂ ಏಕಕಾಲದಲ್ಲಿ ಜನಿವಾರವನ್ನು ತೆಗೆಸುವ ಕಾರ್ಯ ನಡೆದಿದೆ ಎಂದರೆ ಇದೊಂದು ಷಡ್ಯಂತ್ರ ಎಂದು ಹೇಳಬಹುದು ಸಂಘಟಿತರಾಗಿ ಸಮಾಜದ ಅಸ್ಮಿತೆಯನ್ನು ನಾವು ಉಳಿಸಿಕೊಳ್ಳಬೇಕು. ಇದೇ ರೀತಿ ಮುಂದುವರೆದರೆ ನಮ್ಮ ಬ್ರಾಹ್ಮಣ ಸಮಾಜ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಾ.ಶಶಿಭೂಷಣ ಹೆಗಡೆ ಮಾತನಾಡಿ,ನಿನ್ನೆ ಕಾಶ್ಮೀರದಲ್ಲಿ ನಿಮ್ಮ ಧರ್ಮ ಯಾವುದು ಎಂದು ಕೇಳಿ ಹಿಂದುಗಳನ್ನು ಗುಂಡಿಟ್ಟ ಘಟನೆ ನಡೆದಿದೆ. ಸ್ವಲ್ಪ ದಿನಗಳ ಹಿಂದೆ ಪರೀಕ್ಷೆ ಬರೆಯಲು ಬಂದAತಹ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಾರೆ ಇದೆಲ್ಲವೂ ವ್ಯವಸ್ಥಿತ ನಡೆಯುತ್ತಿರುವುದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ ಸರ್ಕಾರದಿಂದ ಈವರೆಗೂ ಈ ಕುರಿತು ಯಾವುದೇ ಸ್ಪಷ್ಟವಾದ ಸ್ಪಷ್ಟನೆ ಬಂದಿಲ್ಲ.ಸರ್ಕಾರ ಸಮಸ್ತ ರಾಜ್ಯದ ಕ್ಷಮೆಯನ್ನು ಯಾಚಿಸಬೇಕು. ಇಂಥ ಘಟನೆಗಳು ಮರು ಕಳಿಸಿದಂತೆ ಸರ್ಕಾರ ಎಚ್ಚರ ವಹಿಸಬೇಕು. ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಸರಕಾರದ ವೆಚ್ಚದಿಂದ ಅವರು ಕೇಳುವ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದರು
ಗೌಡಸಾರಸ್ವತಬ್ರಾಹ್ಮಣ ಸಮಾಜದ ಗುರುರಾಜ ಶಾನಭಾಗ ಮಾತನಾಡಿ,ಆಕ್ರಮಣಗಳು ಎರಡು ರೀತಿ ಆಗುತ್ತದೆ ಒಂದು ನೇರ ಆಕ್ರಮಣ ಇನ್ನೊಂದು ಅನ್ಯಮಾರ್ಗದ ಆಕ್ರಮಣ. ಮಾಂಗಲ್ಯ ಸರ ತೆಗೆಯಿಸುವುದು,ಜನಿವಾರ ತೆಗೆಯಿಸುವುದರ ಹಿಂದೆ ಒಂದು ಸಂಚು ಇದೆ ಇದು ಕೇವಲ ಬ್ರಾಹ್ಮಣರಿಗಷ್ಟೆ ಅಲ್ಲ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ ಎಂದರು.
ನಾಮಧಾರಿ ಸಮಾಜದ ಮುಖಂಡ ಕೆ.ಜಿ.ನಾಯ್ಕ ಮಾತನಾಡಿ,ಜನಿವಾರ ತೆಗೆಸಿದ ಘಟನೆ ಬಿಸಿ ಮುಟ್ಟುತ್ತಿದ್ದಂತೆ ಸರ್ಕಾರ ಎರಡು ಜನ ಹೋಂ ಗಾರ್ಡ್ ಗಳನ್ನು ಅಮಾನತುಪಡಿಸಿತು ಹೋಂ ಗಾರ್ಡ್ ಗಳು ಸರ್ಕಾರಿ ನೌಕರರೆ ಅಲ್ಲ. ಇದರ ಹಿಂದೆ ಇರುವವರು ಯಾರು ಎನ್ನುವುದು ಬಯಲಾಗಬೇಕು.ಇಂಥ ಘಟನೆಗಳು ಅಲ್ಪಸಂಖ್ಯಾತರವರ ಮೇಲೆ ನಡೆದಿದ್ದರೆ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಸ್ಪಷ್ಟನೆಯನ್ನು ಕೊಡುತ್ತಿದ್ದರು. ನಾವು ಇನ್ನೂ ಕೂಡ ಸಂಘಟಿತರಾಗದೆ ಹೋದರೆ ಕಾಶ್ಮೀರದಲ್ಲಿ ನಡೆದಂತ ಘಟನೆ ಸಿದ್ದಾಪುರದಲ್ಲಿಯೂ ಸಹ ನಡೆಯಬಹುದು. ಜನಿವಾರ ತೆಗೆಸಿದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ತೊಂದರೆಗಳುಗಾದ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಕೊಡಿಸಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು. ಎಂದು ಎಚ್ಚರಿಕೆ ನೀಡಿದರು.
ಡಾ.ರವಿ ಹೆಗಡೆ ಹೂವಿನ ಮನೆ ಮಾತನಾಡಿ
ನಮ್ಮ ಜನಿವಾರಕ್ಕೆ ಕೈಮುಟ್ಟಿದ್ದಾರೆ ಎಂದರೆ ಬೆಂಕಿಗೆ ಕೈ ಹಾಕಿದ್ದಾರೆ ಎಂದು. ರಾಜ್ಯದಲ್ಲಿ ಆಡಳಿತ ನಡೆಸುವವರು ದಯವಿಟ್ಟು ಕೇಳಿ ಬೆಂಕಿಗೆ ಕೈ ಹಾಕಿದ್ದೀರಿ.ಜನಿವಾರಕ್ಕೆ ಕೈ ಹಾಕಿದರೆ ಕೈ ಕತ್ತರಿಸುವ ಅನಿವಾರ್ಯತೆ ಬರುತ್ತದೆ ಎಂಬ ಎಚ್ಚರಿಕೆಯನ್ನು ಈ ಪ್ರತಿಭಟನೆಯ ಮೂಲಕ ನಾವು ನೀಡುತ್ತಿದ್ದೇವೆ. ಜನಿವಾರ ಪೌರುಷದ ಸಂಕೇತ . ನಮ್ಮ ತಾಳ್ಮೆ ದೌರ್ಬಲ್ಯದ ಸಂಕೇತ ಎಂದು ನೀವು ತಿಳಿದುಕೊಳ್ಳಬಾರದು. ಆಡಳಿತ ವ್ಯವಸ್ಥೆಯಲ್ಲಿ ಇರುವವರು ಎಚ್ಚರವಾಗಿರದೆ ಇದ್ದರೆ ನಾವು ಎಚ್ಚರವಾಗಿದ್ದೇವೆ ಎಂದು ನಾವು ತೋರಿಸಿ ಕೊಡಬೇಕಾಗಿದೆ. ಬ್ರಾಹ್ಮಣ ಎದುರು ಹಾಕಿಕೊಂಡು ಬದುಕುವುದು ಕಷ್ಟ ಎಂದರು
ಅಖಿಲಭಾರತ ಹವ್ಯಕ ಸಮಾಜದ ಉಪಾಧ್ಯಕ್ಷ ಆರ್ ಎಂ ಹೆಗಡೆ ಬಾಳೇಸರ,ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖ ವಿನಾಯಕ ಶೇಟ್,ಡಾ.ರವಿ ಹೆಗಡೆ ಹೂವಿನ ಮನೆ,ವಿಶ್ವಕರ್ಮ ಬ್ರಾಹ್ಮಣ ಸಮಾಜದ ರಾಜೇಂದ್ರ ಆಚಾರ್ಯ, ಕಾಶಿನಾಥ ಪೈ, ಮುಂತಾದವರು ಮಾತನಾಡಿದರು.