ಆದ್ಯೋತ್ ಸುದ್ದಿನಿಧಿ:
ರಾಜ್ಯ ಸರ್ಕಾರವು ಜನಗಣತಿಯ ಹೆಸರಿನಲ್ಲಿ ರಾಜ್ಯದ ಬಹುಸಂಖ್ಯಾ ಸಮುದಾಯಗಳನ್ನು ಜನಸಂಖ್ಯೆಯನ್ನು ಮೂಲ ಗುಂಪು ಮಾಡಲು ಹೊರಟಿದೆ ಎಂದು ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದ ಎಸ್ಎಂಎಲ್ ಪ್ರವೀಣ್ ಬೇಸರ ವ್ಯಕ್ತಪಡಿಸಿದರು.
ಭರಮಸಾಗರದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ವತಿಯಿಂದ ಪ್ರವಾಸಿ ಮಂದಿರದಲ್ಲಿ ನಡೆದ ಯುವ ಮುಖಂಡರ ಸಭೆಯಲ್ಲಿ ಮಾತನಾಡಿ, ಹತ್ತು ವರ್ಷಗಳ ಹಿಂದೆ ಜಾತಿಗಣತಿ ನಡೆದಿದೆ. ಹೀಗಾಗಿ ಹಲವು ದೊಡ್ಡ ಸಮುದಾಯಗಳ ಸಂಖ್ಯೆಯನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ. ದಶಕಗಳ ಹಿಂದೆ ನಡೆದ ಸಮೀಕ್ಷೆ ವರದಿ ಈಗ ಜಾರಿ ಮಾಡಲು ಒಂದಾಗಿರುವುದು ಅವ್ಯಜ್ಞಾನಿಕ ಕ್ರಮ ಎಂದರು.
ಲಿಂಗಾಯತ ವೀರಶೈವ 2 ಒಂದೇ ಆಗಿದೆ, ಎರಡನ್ನು ವಿಭಾಗಿಸುವುದು ಸರಿಯಲ್ಲ ಈಗಾಗಲೇ ಸಮುದಾಯಗಳು ರಾಜ್ಯಮಟ್ಟದ ನಾಯಕರು ಸಮುದಾಯದ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ. ಇದು ಸರ್ಕಾರದ ಜವಾಬ್ದಾರಿ ಜೊತೆಗೆ ಯುವ ವೀರಶೈವ ಲಿಂಗಾಯತ ವೇದಿಕೆಯ ಕರ್ತವ್ಯ ಕೂಡ ಹೌದು ಎಂದು ಹೇಳಿದರು. ಸಭೆಯಲ್ಲಿ ಯುವ ವೀರಶೈವ ಲಿಂಗಾಯಿತ ಮುಖಂಡರು ಪಾಲ್ಗೊಂಡಿದ್ದರು
ಬಿಟಿ ನಿರಂಜನ್ ಮೂರ್ತಿ, ಡಿಸಿ ಕೊಟ್ರೇಶ್, ಎಂ ಎಸ್ ಕರಿಬಸಪ್ಪ, ಡಿಎಸ್ ಅಭಿಷೇಕ್, ಎನ್ ಕೆ ಸಂತೋಷ್, ಕರಡಿ ಆನಂದು, ಡಿಸಿ ಮಂಜುನಾಥ್, ಇನ್ನಿತರ ಯುವ ಮುಖಂಡರುಗಳು ಪಾಲ್ಗೊಂಡಿದ್ದರು
———-
ಜನ ಗಣತಿಯೊಂದಿಗೆ ಜಾತಿ ಗಣತಿಗೆ ಕೇಂದ್ರ
ಸರ್ಕಾರ ಕೈಗೊಂಡ ನಿರ್ಧಾರ, ಸಮಾನತೆ ಹಾಗೂ ಸಬಲೀಕರಣಕ್ಕೆ ಮಹತ್ವದ ಹೆಜ್ಜೆ ಆಗಿದೆ.ಇದು ಮತ ಬ್ಯಾಂಕ್ ರಾಜಕೀಯ ಎನ್ನಲು ಬರುವುದಿಲ್ಲ ಇದು ಬದ್ಧತೆ, ನೈಜ ಕಾಳಜಿ ಬಿಂಬಿಸುತ್ತದೆ.
ಎಸ್ಎಂಎಲ್ ಪ್ರವೀಣ್
ರಾಜ್ಯ ಕಾರ್ಯದರ್ಶಿಗಳು ವೀರಶೈವ ಲಿಂಗಾಯತ ಯುವ ವೇದಿಕೆ ಬೆಂಗಳೂರು