ಸಿದ್ದಾಪುರ ಭಾನ್ಕುಳಿ ಶಂಕರಪಂಚಮೀ ಉತ್ಸವಕ್ಕೆ ಆಗಮಿಸಿದ ಶ್ರೀರಾಘವೇಶ್ವರಭಾರತೀಸ್ವಾಮೀಜಿ


ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರತಾಲೂಕಿನ ಭಾನ್ಕುಳಿ ಶ್ರೀರಾಮದೇವಮಠ ಗೋಸ್ವರ್ಗದಲ್ಲಿ ಜರುಗುತ್ತಿರುವ ಶಂಕರಪಂಚಮೀ ಉತ್ಸವ ಸಾನ್ನಿಧ್ಯ ವಹಿಸಲಿರುವ ಶ್ರೀ ರಾಘವೇಶ್ವರಭಾರತೀಸ್ವಾಮೀಜಿ ಪುರ ಪ್ರವೇಶ ಗುರುವಾರ ಸಂಜೆ ನಡೆಯಿತು.

filter: 0; jpegRotation: 0; fileterIntensity: 0.000000; filterMask: 0;

ಶ್ರೀ ರಾಮದೇವ ಮಠ ಆಡಳಿತ ಮಂಡಳಿಯ ಎಂ.ಎA.ಹೆಗಡೆ, ಶಂಕರ ಪಂಚಮಿ ಉತ್ಸವ ಸಮಿತಿ ಹಾಗೂ ಗೋಸ್ವರ್ಗ ಸಮಿತಿಗಳ ಆರ್.ಎಸ್.ಹೆಗಡೆ ಹರಗಿ, ಜಿ.ಕೆ.ಹೆಗಡೆ ಗೋಳಗೋಡ, ಮಹೇಶ ಭಟ್ಟ ಚಟ್ನಳ್ಳಿ, ಎನ್.ವಿ.ಹೆಗಡೆ ಮುತ್ತಿಗೆ, ಜಿ.ಎಸ್.ಭಟ್ಟ ಕಲ್ಲಾಳ, ಜಯರಾಮ ಭಟ್ಟ ಗುಂಜಗೋಡ, ಎಂ.ಜಿ.ರಾಮಚಂದ್ರ ಮರ್ಡುಮನೆ, ಶಾಂತಾರಾಮ ಹಿರೇಮನೆ, ರಮಾನಂದ ತಲವಾಟ, ಎಂ.ವಿ.ಹೆಗಡೆ ಮುತ್ತಿಗೆ, ವೀಣಾ ಭಟ್ಟ ಶಿರಸಿ, ಚಂದನ ಶಾಸ್ತ್ರಿ ಸೇರಿದಂತೆ ಅನೇಕ ಪ್ರಮುಖರು ಶ್ರೀಗಳವರನ್ನು ಬರಮಾಡಿಕೊಂಡು ಫಲಸಮರ್ಪಣೆ ಮಾಡಿದರು.

filter: 0; jpegRotation: 0; fileterIntensity: 0.000000; filterMask: 0;

ಈ ಸಂದರ್ಭದಲ್ಲಿ ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರು ಶಂಕರಮಂಟಪದಲ್ಲಿ ಸ್ಥಾಪಿಸಲಾದ ಶಂಕರಾಚಾರ್ಯರ ಕಾಷ್ಟಶಿಲ್ಪಕ್ಕೆ ಹಾಗೂ ಮಹಾಪಾದುಕೆಗೆ ಪೂಜೆ ಸಲ್ಲಿಸಿದರು. ಭಾರತವರ್ಷ ಯಾಗಶಾಲೆಯನ್ನು ವೀಕ್ಷಿಸಿದ ಶ್ರೀಗಳವರು ಅದರ ನಿರ್ಮಾಣ ಕುರಿತು ಮಾರ್ಗದರ್ಶನ ಮಾಡಿದರು.
ಗುರುವಾರ ಶ್ರೀ ರಾಮದೇವ ಭಾನ್ಕುಳಿಮಠದ ವಾರ್ಷಿಕೋತ್ಸವ ನಿಮಿತ್ತ ಗುರುವಂದನೆ, ದೇವತಾ ಪ್ರಾರ್ಥನೆ, ಸ್ವಸ್ತಿಪುಣ್ಯಾಹ, ದೇವನಾಂದಿ, ಋತ್ವಿಗ್ವರಣ, ಮಹಾಸಂಕಲ್ಪ, ಬ್ರಹ್ಮಕೂರ್ಚಹವನ, ಗೋಪೂಜೆ, ಶ್ರೀ ಮಹಾಗಣಪತಿ ಹವನ, ಶ್ರೀ ರಾಮತಾರಕ ಹವನ, ಕುಂಕುಮಾರ್ಚನೆ, ಯಜುರ್ವೇದ ಪಾರಾಯಣ ನಡೆಯಿತು. ಭಾಷ್ಯ ಪಾರಾಯಣ ಆರಂಭವಾಯಿತು.

ಶುಕ್ರವಾರ ಶಂಕರಪAಚಮೀಯಲ್ಲಿ ಸ್ವರ್ಣಮಂಟಪಾಲAಕೃತ ಶ್ರೀಕರಾರ್ಚಿತ ಪೂಜೆ, ಸ್ವರ್ಣ ಭಿಕ್ಷೆ, ಸಂಧ್ಯಾಮAಗಲ, ಶ್ರೀಮಹಾಪಾದುಕಾಪೂಜೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

About the author

Adyot

Leave a Comment