ಸಿದ್ದಾಪುರ ಭಾನ್ಕುಳಿ ಯಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ನಾಣ್ಯ ತುಲಾಭಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜೆಲ್ಲೆಯ ಸಿದ್ದಾಪುರ ಭಾನ್ಕುಳಿ ಗೋಸ್ವರ್ಗದಲ್ಲಿ ಗದಗಜಿಲ್ಲೆಯ ಮುಂಡರಗಿ ನಗರದ ನಾರಾಯಣ ಇಲ್ಲೂರು,ಶಮಂತಕಮಣಿ ದಂಪತಿಗಳ ಉಗ್ರರಥ ಶಾಂತಿ ಹಾಗೂ ಭೀಮರಥಶಾಂತಿ, ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ಗುರುಭಿಕ್ಷಾ ಸೇವೆ,ನಾಣ್ಯತುಲಾಭಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀರಾಘವೇಶ್ವರ ಭಾರತೀ,ಮನುಷ್ಯ ಹಣಸಂಪಾದಿಸಿದರೆ ಸಾಲದು ಮನುಷ್ಯ ಮನುಷ್ಯರನ್ನು ಸಂಪಾದಿಸಬೇಕು ಇದರಿಂದ ಜೀವನ ಸಾರ್ಥಕತೆಯನ್ನು ಹೊಂದುತ್ತದೆ.ನಾರಾಯಣ ಹನುಮಂತಪ್ಪ ಇಲ್ಲೂರ ತಮ್ಮ ತ್ಯಾಗ, ಸೇವೆ, ಪ್ರಯತ್ನದಿಂದ ಮುಂಡರಗಿಯ ಮಹಾದಾನಿ ಎನಿಸಿದ್ದಾರೆ ಎಷ್ಟೋ ಜನರಿಗೆ ಸೇವೆ ಮಾಡುವ ಮನಸ್ಸಿದ್ದರೂ ಸಂಪತ್ತಿರುವುದಿಲ್ಲ, ಸಂಪತ್ತಿದ್ದವರೆಲ್ಲರಿಗೂ ಸೇವೆ ಸಲ್ಲಿಸುವ ಮನವಿರುವುದಿಲ್ಲ. ಸರಿಯಾದ ಕಾಲಘಟ್ಟ, ಸರಿಯಾದ ಸಮಯ, ಸರಿಯಾದ ಕೆಲಸಕ್ಕೆ ನೀಡುವ ದಾನ ಶ್ರೇಷ್ಠ ದಾನವೆನಿಸಿದೆ. ಇಲ್ಲೂರ ಕುಟುಂಬದವರು ತಲೆತಲಾಂತರದಿಂದಲೂ ಗದಗ ಜಿಲ್ಲೆ ಮುಂಡರಗಿ ನಗರದ ಮಹಾದಾನಿಗಳೆಂದು ಹೆಸರುಗಳಿಸಿದ್ದಾರೆ.ಶುದ್ಧ ಮನಸ್ಸಿನಿಂದ ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರಿಂದ ಸಮಾಜಕ್ಕೆ ಮತ್ತಷ್ಟು ಸೇವೆ ದೊರೆಯುವಂತಾಗಬೇಕು.ನಾವು ಸತ್ತ ಮೇಲೆ ಸ್ವರ್ಗವನ್ನು ಕಾಣಬಹುದು. ಆದರೆ ಜೀವಿಸುವಾಗಲೇ ಸುತ್ತಮುತ್ತಲೂ ಗೋವನ್ನು ಕಾಣುವ ಗೋಸ್ವರ್ಗಕ್ಕೆ ಬಂದರೆ ಸ್ವರ್ಗದ ಕಲ್ಪನೆ ಮೂಡಲು ಸಾಧ್ಯ. ಗೋದಾನ, ಗೋಪೂಜೆ, ಕಾಮಧೇನು ಹವನ, ಗೋ ತುಲಾಭಾರ ಸೇವೆ, ಪೌಷ್ಠಿಕ ಹೋಮ ಹವನಾದಿಗಳ ಮೂಲಕ ಇಲ್ಲೂರ ಬಂಧುಗಳು ತಾವು ಗೋಪ್ರೇಮಿಗಳೆಂದು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.
#####
ಸಿದ್ದಾಪುರದಲ್ಲಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅಧ್ಯಯನ ಪೀಠ ಸ್ಥಾಪನೆಗೆ ಆದೇಶ

ಸಿದ್ದಾಪುರದಲ್ಲಿ ಶ್ರೀರಾಮಕೃಷ್ಣ ಹೆಗಡೆ ಅಧ್ಯಯನ ಪೀಠ ಸ್ಥಾಪಿಸಲು ಸರಕಾರ ಒಪ್ಪಿಗೆ ನೀಡಿದೆ.ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಧ್ಯಯನ ಪೀಠ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಅಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿರಸಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೆಗಡೆಯವರ ಅಭಿಮಾನಿಗಳು ರಾಮಕೃಷ್ಣ ಹೆಗಡೆಯವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಆಗ್ರಹಿಸಿದ್ದರು. ಇದಕ್ಕೆ ಸಭೆಯಲ್ಲಿ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದರು.
ಈಗ ಸಿದ್ದಾಪುರದಲ್ಲಿ ರಾಮಕೃಷ್ಣ ಹೆಗಡೆ ಅಧ್ಯಯನ ಪೀಠ ಸ್ಥಾಪಿಸಲು ಸರಕಾರ ಒಪ್ಪಿಗೆ ಸೂಚಿಸಿದ್ದು 2022-23 ಸಾಲಿನ ಆಯವ್ಯಯದಲ್ಲಿ ಪೂರಕ ಅನುದಾನ ನೀಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.
#####
ತಾಳಗುಪ್ಪಹುಬ್ಬಳ್ಳಿ ರೇಲ್ವೆ ಮಾರ್ಗ ಶೀಘ್ರ ನಿರ್ಮಾಣಕ್ಕೆ ಮನವಿ

ಮಲೆನಾಡು ಮತ್ತು ಉತ್ತರಕರ್ನಾಟಕವನ್ನು ಬೆಸೆಯುವ ತಾಳಗುಪ್ಪ-ಹುಬ್ಬಳ್ಳಿ ರೇಲ್ವೇ ಮಾರ್ಗವನ್ನು ಶೀಘ್ರದಲ್ಲೆ ಪ್ರಾರಂಭಿಸಲು ರೇಲ್ವೆ ಇಲಾಖೆಯ ಮೆಲೆ ಒತ್ತಡ ಹಾಕಬೇಕೆಂದು ಆಗ್ರಹಿಸಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸಿದ್ದಾಪುರದ ಜಾಗೃತ ನಾಗರಿಕಾ ವೇದಿಕೆ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಶಿವಮೊಗ್ಗದ ಅವರ ನಿವಾಸದಲ್ಲಿ ಭೇಟಿ ಮಾಡಿ ಸನ್ಮಾನಿಸಿ ಮನವಿ ಸಲ್ಲಿಸಿದರು.
ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡು-ಹುಬ್ಬಳ್ಳಿ ರೇಲ್ವೆ ಮಾರ್ಗವು ಕೇವಲ 158 ಕಿ.ಮಿ.ಉದ್ದವಿದೆ. ದಿ.ಸುರೇಶ ಅಂಗಡಿಯವರು ಶ್ರಮವಹಿಸಿ ಈ ಮಾರ್ಗಕ್ಕೆ ಅನುಮತಿ ದೊರಕುವಂತೆ ಮಾಡಿದ್ದರು. ಅವರ ಅಕಾಲಿಕ ನಿಧನ,ಕೊವಿಡ್ ಕಾರಣದಿಂದ ಇದರ ಸರ್ವೆ ಕಾರ್ಯವು ಕುಂಟುತ್ತಾ ಸಾಗಿದ್ದ ಸಮಯದಲ್ಲಿ ತಾವು ಮುತುವರ್ಜಿವಹಿಸಿ ಈ ಮಾರ್ಗದ ಅವಶ್ಯಕತೆಯನ್ನು ಕೇಂದ್ರಸರಕಾರ ಮತ್ತು ರೇಲ್ವೆ ಮಂಡಳಿಗೆ ಮನವರಿಕೆ ಮಾಡಿಕೊಟ್ಟು ಸರ್ವೆಕಾರ್ಯವು ಭರದಿಂದ ನಡೆಯುವಂತೆ ಮಾಡಿದ್ದಿರಿ. ಇದಕ್ಕಾಗಿ ತಮಗೆ ಹಾಗೂ ಕೇಂದ್ರ ಸರಕಾರಕ್ಕೆ ಕೃತಜ್ಞತೆಯನ್ನು ಸೂಚಿಸುತ್ತೆವೆ ಇದರ ಜೊತೆಗೆ ಶೀಘ್ರದಲ್ಲೆ ಈ ರೇಲ್ವೆ ಯೋಜನೆಯ ಕಾಮಗಾರಿ ಪ್ರಾರಂಭವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸದವರಿಗೆ ಒತ್ತಡ ಹೇರಬೇಕೆಂದು ಕೇಳಿಕೊಳ್ಳುತ್ತೆವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್,ಜಾಗೃತ ನಾಗರಿಕಾ ವೇದಿಕೆಯ ವಾಸುದೇವ ಬಿಳಗಿ,ಮಾಜಿ ತಾಪಂ ಅಧ್ಯಕ್ಷ ಸುಧೀರ್ ಗೌಡರ್ ,ನಾಗರಾಜ ಧೋಶೆಟ್ಟಿ,ವಿನಯ ಗೌಡರ್ ಮುಂತಾದವರು ಉಪಸ್ಥಿತರಿದ್ದರು.
#####
ತಾಲೂಕು < >ಕಸಾಪ ದಿಂದ ಚನ್ನವೀರ ಕಣವಿಯವರ ಕುರಿತಾದ ಭಾವ ನುಡಿನಮನ

ಸಿದ್ದಾಪುರ ಲಯನ್ಸ್ ಬಾಲಭವನದಲ್ಲಿ ಗುರುವಾರ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯಾಭಿಮಾನಿಗಳ ಸಹಕಾರದೊಂದಿಗೆ ಇತ್ತೀಚೆಗೆ ನಿಧನರಾದ ಕವಿ ಚನ್ನವೀರ ಕಣವಿಯವರ ಕುರಿತಾದ ಭಾವನುಡಿನಮನ ಕಾರ್ಯಕ್ರಮವನ್ನು ನಡೆಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಮಾತನಾಡಿ, ನಮ್ಮ ದೇಶವನ್ನು ಆಳಿದ ಅನೇಕ ಪ್ರಸಿದ್ದ ರಾಜಮಹಾರಾಜರೆ ನಮ್ಮ ಸ್ಮøತಿಪಟಲದಿಂದ ಮರೆಯಾಗಿದ್ದಾರೆ ಆದರೆ ಕವಿಗಳು ಮಾತ್ರ ಇಂದಿಗೂ ನಮ್ಮೊಂದಿಗೆ ಅವರ ಕಾವ್ಯ ಮತ್ತು ಸಾಹಿತ್ಯದ ಜೊತೆಗೆ ಜೀವಂತ ಇದ್ದಾರೆ. ಕಣವಿಯವರು ಕನ್ನಡ ಸಾಹಿತ್ಯದ ಮೇರು ಕವಿಗಳಾಗಿದ್ದಾರೆ.ಅವರನ್ನು ಸಾಹಿತ್ಯದ ಬಣವೆ ಎಂದು ಕರೆಯುತ್ತಿದ್ದರು ಅಷ್ಟು ಅಗಾಧ ಸಾಹಿತ್ಯ ಅವರದ್ದಾಗಿತ್ತು. ತಮ್ಮ ಸಾಹಿತ್ಯದಂತೆ ಅವರ ನಡವಳಿಕೆಯೂ ಸರಳ ಸಜ್ಜನಿಕೆಯಿಂದ ಕೂಡಿತ್ತು ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡು,ಪ್ರಾಂಶುಪಾಲ ಎಂ.ಕೆ.ನಾಯ್ಕ ಹೊಸಳ್ಳಿ,ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ,ಪ್ರಶಾಂತ ಹೆಗಡೆ,ಎನ್.ಟಿ.ನಾಯ್ಕ,ಸುಧಾರಾಣಿ ನಾಯ್ಕ,ಜಿ.ಎಂ.ಕುಮಟಾಕರ,ಶಂಕರಮೂರ್ತಿ,ಟಿ.ಕೆ.ಎಮ.ಜಾದ್ ಮುಂತಾಧವರು ಭಾಗವಹಿಸಿದ್ದರು. ಅನ್ಣಪ್ಪ ನಾಯ್ಕ ಶಿರಳಗಿ ಸ್ವಾಗತಿಸಿದರು.
ಕಣವಿಯವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.

About the author

Adyot

Leave a Comment