ಜೋಗಿನಮಠದ ಸಮೀಪ ಗುಡ್ಡಕುಸಿತ,ಬೆಂಗಳೂರು-ಹೊನ್ನಾವರ ರಸ್ತೆ ಬಂದ್?


ಆದ್ಯೋತ್ ಸುದ್ದಿನಿಧಿ;
ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ-69ರ
ಜೋಗಿನಮಠದ ಸಮೀಪದ ಘಟ್ಟಪ್ರದೇಶದಲ್ಲಿ ಗುಡ್ಡಕಯಸಿಯುತ್ತಿದ್ದು ವಾಹನ ಸವಾರರು ಆತಂಕದಿಂದ ಓಡಾಡುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಗೆರುಸೊಪ್ಪೆಯಿಂದ ಆಡುಕಟ್ಟದವರೆಗೆ ಸುಮಾರು 3೦ ಕಿ.ಮಿ. ಘಟ್ಟದ ಪ್ರದೇಶವಿದೆ ಇಲ್ಲಿಯ ಗುಡ್ಡಗಳು ಶೇಡಿಮಣ್ಣಿನಿಂದ ಕೂಡಿದ್ದು ಕುಸಿಯುವ ಗುಣವನ್ನು ಹೊಂದಿದೆ. ಈ ರಸ್ತೆಯಲ್ಲಿ ಬರುವ ಮಲೆಮನೆ ಘಟ್ಟದಲ್ಲಿ ಕಳೆದ ಮೂರುವರ್ಷದ ಹಿಂದೆ ರಸ್ತೆ ಕುಸಿದು ಎರಡು-ಮೂರುದಿನ ರಸ್ತೆ ಬಂದ್ ಆಗಿತ್ತು. ಈಗ ಜೋಗಿನಮಠದ ಸಮೀಪ ಗುಡ್ಡ ಕುಸಿಯುತ್ತಿದ್ದು ರಸ್ತೆ ಬಂದ್ ಆಗುವ ಎಲ್ಲಾ ಸಾಧ್ಯತೆಗಳಿವೆ.

ಜೋಗಿನಮಠದಿಂದ ಆಡುಕಟ್ಟದವರೆಗೆ ಸುಮಾರು ಮೂರು ಕಿ.ಮಿ.ಘಟ್ಟದ ಪ್ರದೇಶವಿದೆ. ಈ ಭಾಗದಲ್ಲಿ ಕಳೆದ ನಾಲ್ಕು-ಐದು ದಿನಗಳಿಂದ ಮೂರು ಕಡೆಯಲ್ಲಿ ಗುಡ್ಡಕುಸಿಯುತ್ತಿದೆ ಮಣ್ಣು,ಮರಗಳು ಬಿದ್ದು ವಿದ್ಯುತ್ ಕಂಬಗಳು ಮುರಿದು ಹೋಗಿದೆ. ನೊಡೆಲ್ ಅಧಿಕಾರಿಗಳು,ಸ್ಥಳೀಯ ಗ್ರಾಪಂ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎರಡು ಕಡೆಗಳಲ್ಲಿ ಎಚ್ಚರಿಕೆಯ ಬೋರ್ಡ ತಗುಲಿಸಿ ಹೋಗಿದ್ದಾರೆ. ವಾಹನ ಸವಾರರು ಮಾತ್ರ ಪ್ರಾಣ ಭಯದಿಂದಲೇ ಓಡಾಡುತ್ತಿದ್ದಾರೆ.

ಈಗಷ್ಟೆ ಮಳೆಗಾಲ ಪ್ರಾರಂಭವಾಗಿದೆ ಈಗ ಕುಸಿಯಲು ಪ್ರಾರಂಭವಾಗಿರುವ ರಸ್ತೆ ಮುಂದಿನ ಮೂರು ತಿಂಗಳ ಕಾಲ ಸುರಿಯಲಿರುವ ಮಳೆಗೆ ಸಂಪೂರ್ಣ ಕುಸಿಯಲಿದೆ.
ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಘಟ್ಟದ ಕೆಳಗಿನ ಭಟ್ಕಳ,ಹೊನ್ನಾವರ,ಕುಮಟಾ,ಅಂಕೋಲಾ,ಕಾರವಾರ ಗೋವಾದ ಕಡೆಯಿಂದ ಬೆಂಗಳೂರಿಗೆ ಹೋಗುವ ಹೆಚ್ಚಿನ ಬಸ್‌ಗಳು ಇದೇ ರಸ್ತೆಯಲ್ಲಿ ಓಡಾಡುತ್ತವೆ,ವಿಶ್ವವಿಖ್ಯಾತ ಜೋಗಫಾಲ್ಸ್ ಇಲ್ಲಿಯೇ ಸಮೀಪವಿರುವುದರಿಂದ ಫಾಲ್ಸ್ ನೋಡಲು ಬರುವ ಪ್ರವಾಸಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಗೋಕರ್ಣ,ಮುರುಡೇಶ್ವರ,ಕಾರವಾರದಂತಹ ಪ್ರವಾಸಿ ಸ್ಥಳಗಳಿಗೆ ಹೋಗುವುದು ಇದೇ ರಸ್ತೆಯಲ್ಲಿ. ಇಂತಹ ಪ್ರಮುಖ ರಸ್ತೆ ಸುರಕ್ಷತೆಯ ಬಗ್ಗೆ ಹೆದ್ದಾರಿ ಇಲಾಖೆಯವರು ಗಮನಹರಿಸದೆ ನಿರ್ಲಕ್ಷವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪರ್ಯಾಯ ಮಾರ್ಗ:
ಜೋಗಿನಮಠದ ಸಮೀಪ ಗುಡ್ಡ ಕುಸಿಯುತ್ತಿದ್ದು ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಲಿದೆ ಆದರೆ ಸಂಬಂಧಿಸಿದ ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನವನ್ನೆ ಹರಿಸುತ್ತಿಲ್ಲ ಕೇವಲ ಎಚ್ಚರಿಕೆಯ ಬೋರ್ಡ ತಗುಲಿಸಿ ಕೈತೊಳೆದುಕೊಂಡಿದ್ದಾರೆ. ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಗೆ ಬದಲಿ ರಸ್ತೆಯನ್ನು ಗುರುತಿಸಬೇಕಾಗಿದೆ. ಜೋಗ-ಕಾರ್ಗಲ್ ಮೂಲಕ ಚೂರಿಕಟ್ಟೆ ಮೂಲಕ ಸಾಗರ ತಲುಪಬಹುದು. ಇಲ್ಲವಾದಲ್ಲಿ ಮಾವಿನಗುಂಡಿ-ಸಿದ್ದಾಪುರ ಚೂರಿಕಟ್ಟೆಯ ಮೂಲಕವೂ ಹೋಗಬಹುದು.

ಈ ಕುರಿತು ಆದ್ಯೋತ್ ನ್ಯೂಸ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಹಾಗೂ ಸಿದ್ದಾಪುರ
ತಹಸೀಲ್ದಾರರನ್ನು ಸಂಪರ್ಕಿಸಿದೆ.
ಸತೀಶ ಎಂ‌ ಇಂಜನೀಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-:
ಜೋಗಿನಮಠದ ಸಮೀಪ ಗುಡ್ಡಕುಸಿದಿದೆ. ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೆನೆ ಈ ರಸ್ತೆಯಲ್ಲಿ ಓಡಾಡುವುದು ಸುರಕ್ಷಿತವಲ್ಲ ಮಳೆಗಾಲ ಮುಂದುವರಿದAತೆ ಗುಡ್ಡ ಇನ್ನಷ್ಟು ಕುಸಿಯಬಹುದು. ಈ ರಸ್ತೆಯ ವಾಹನ ಓಡಾಡುವುದನ್ನು ನಿರ್ಬಂಧಿಸುವ ಕುರಿತು ಹಾಗೂ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಸ್ಥಳೀಯ ತಹಸೀಲ್ದಾರರಿಗೆ ಹಾಗೂ ಪೊಲೀಸ್ ಇಲಾಖೆಗೆ ಪತ್ರದ ಮೂಲಕ ತಿಳಿಸಿದ್ದೆನೆ.

ಮಧುಸೂದನ ಕುಲಕರ್ಣಿ ತಹಸೀಲ್ದಾರರು ಸಿದ್ದಾಪುರ
ಬೆಂಗಳೂರು-ಹೊನ್ನಾವರ ರಾಷ್ಟಿçÃಯ ಹೆದ್ದಾರಿಯ ಜೋಗಿನಮಠದ ಸಮೀಪ ಗುಡ್ಡಕುಸಿಯುತ್ತಿರುವುದು ಗಮನಕ್ಕೆ ಬಂದಿದೆ ಸಂಬAಧಿಸಿದ ತಜ್ಞರ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೆನೆ ತಜ್ಞರ ಪ್ರಕಾರ ಈ ರಸ್ತೆಯಲ್ಲಿ ಓಡಾಡುವುದು ಸುರಕ್ಷಿತವಲ್ಲ ಎಂದು ಹೇಳಿದ್ದಾರೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ ಎರಡು ಪರ್ಯಾಯ ಮಾರ್ಗವನ್ನು ಗುರುತಿಸಲಾಗಿದೆ ಒಂದೆರಡು ದಿನದಲ್ಲಿ ಈ ಬಗ್ಗೆ ಕ್ರಮತೆಗೆದುಕೊಳ್ಳಲಾಗುವುದು.

About the author

Adyot

Leave a Comment