ರೈತರ ಬಂಧು ಸಿದ್ದಾಪುರದ ಟಿಎಂಎಸ್‌ಗೆ 5.55ಕೋಟಿರೂ. ನಿವ್ವಳ ಲಾಭ


ಆದ್ಯೋತ್ ಸುದ್ದಿನಿದಿ:

ಉತ್ತರಕನ್ನಡ ಸಿದ್ದಾಪುರದ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ. ರೈತರ ಪಾಲಿಗೆ ಬಂಧುವಾಗಿದೆ.78ವರ್ಷ ಪೂರೈಸಿ 79ನೇವರ್ಷಕ್ಕೆ ಕಾಲಿಡುತ್ತಿರುವ ಸಂಘವು ರೈತರ ಬೆನ್ನಲುಬಾಗಿದೆ. ಕೇವಲ ಅಡಿಕೆ ಮಾರಾಟಕ್ಕೆ ಸೀಮಿತವಾಗದೆ ಸದಸ್ಯರಿಗೆ ಅವಶ್ಯಕವಿರುವ ಕಿರಾಣಿ ಸಾಮಾನು,ಕಟ್ಟಡ ಸಾಮಾನು,ಔಷಧ ಸೇರಿದಂತೆ ಉತ್ತಮ ಗುಣಮಟ್ಟದ ಕೈಗೆಟುಕುವ ದರದಲ್ಲಿ ನೀಡುತ್ತಾ ಬಂದಿದೆ. ಈ ಬಾರಿ 5,55,59,327.45ರಷ್ಟು ನಿವ್ವಳ ಲಾಭವನ್ನುಗಳಿಸಿದೆ.ಜೂ.28ಕ್ಕೆ ಟಿಎಂಎಸ್ ಸಭಾಂಗಣದಲ್ಲಿ ಸರ್ವಸದಸ್ಯರ ಸಭೆಯನ್ನು ಕರೆಯಲಾಗಿದೆ

ಈ ಕುರಿತು ಮಾಹಿತಿ ನೀಡಿದ ಸಂಘದ ಆರ್.ಎಂ.ಹೆಗಡೆ ಬಾಳೆಸರ, ಅಡಿಕೆಬೆಳೆಗಾರರ ರೈತರ ಬೆನ್ನೆಲುಬಾಗಿರುವ ನಮ್ಮ ಸಂಘವು 78ಸಾರ್ಥಕ ವಸಂತಗಳನ್ನು ಪೂರೈಸಿ 79 ನೇ ವರ್ಷದಲ್ಲಿಕಾರ್ಯನಿರ್ವಹಿಸುತ್ತಿದ್ದು, ಮಾರ್ಚ 31 ಕ್ಕೆ ಮುಗಿದಆರ್ಥಿಕ ವರ್ಷ 2024-25 ಸಾಲಿನಲ್ಲಿ ನಿಧಿಗಳನ್ನು ತೆಗೆದಿರಿಸಿದ ನಂತರದಲ್ಲಿರೂ. 5,55,59,327.45ರಷ್ಟು ನಿಕ್ಕಿ ಲಾಭ ಗಳಿಸಿರುತ್ತದೆ.

ಕಾನಸೂರು ಹಾಗೂ ಶಿರಸಿಯಲ್ಲಿ ಶಾಖೆಗಳನ್ನು ಹೊಂದಿರುವ ನಮ್ಮ ಸಂಘ 2024-25 ನೆಯ ಸಾಲಿನಲ್ಲಿದಾಖಲೆಯ 63.127 ಕ್ವಿಂಟಲ್‌ಅಡಿಕೆ, 489 ಕ್ವಿಂಟಲ್ ಮೆಣಸು, ಹಾಗೂ 1014ಕ್ವಿಂಟಲ್ ಹಸಿ ಅಡಿಕೆ ವಿಕ್ರಿಮಾಡಿದ್ದು, ಸಂಘದ ವಹಿವಾಟುರೂ.234.೦1ಕೋಟಿಆಗಿದ್ದು, ಹಾಗೂ ದುಡಿಯುವ ಬಂಡವಾಳ ರೂ 237.2೦ಕೋಟಿಗೂಅಧಿಕವಾಗಿದೆ. . ಸಂಚಿತ ನಿಧಿಗಳ ಮೊತ್ತರೂ. 66.84 ಕೋಟಿಯಷ್ಟಿದೆ. ರೂ. 117.58ಕೋಟಿ ಠೇವುಗಳನ್ನು ಸಂಗ್ರಹಿಸಲಾಗಿದೆ.

ಕೃಷಿ ವಿಭಾಗದಲ್ಲಿಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ ಹಾಗೂ ಪ್ಲಾಸ್ಟಿಕ್ ಸಾಮಾಗ್ರಿ ಸೇರಿ ರೂ.7.78ಕೋಟಿರೂ. ವಿಕ್ರಿ ವ್ಯವಹಾರ ಮಾಡಲಾಗಿದೆ.ಕಿರಾಣಿಹಾಗೂ ಎಪಿಎಮ್‌ಸಿ ವಿಭಾಗ ಸಹಿತ 5.74 ಕೋಟಿ, ಔಷಧಿ ವಿಭಾಗದಲ್ಲಿ 64.17ಲಕ್ಷ, ಕಟ್ಟಡ ನಿರ್ಮಾಣ ವಿಭಾಗದಲ್ಲಿ 55.95ಲಕ್ಷಕ್ಕೂಅಧಿಕವಿಕ್ರಿವ್ಯವಹಾರವಾಗಿದೆ.ಕೇಂದ್ರಕಚೇರಿಯಲ್ಲಿರೂ. 4.22ಕೋಟಿ, ಕಾನಸೂರ ಶಾಖೆಯಲ್ಲಿ37.45 ಲಕ್ಷ, ಮಾರಾಟ ಮಳಿಗೆ ಶಿರಸಿಯಲ್ಲಿ ರೂ. 1.೦5ಕೋಟಿ,ಕೃಷಿ ವಿಭಾಗದಲ್ಲಿರೂ. 20.61 ಲಕ್ಷ, ದವಸಧಾನ್ಯ ವಿಭಾಗದಲ್ಲಿರೂ.15.32 ಲಕ್ಷ, ಸೇವಾ ವಿಭಾಗದಲ್ಲಿ 7.2ಸಾವಿರ ಲಾಭಗಳಿಸಿದ್ದು, ಔಷಧಿ ವಿಭಾಗದಲ್ಲಿರೂ.2.11 ಲಕ್ಷ, ಅಡಿಕೆಖರೀದಿ ವಿಭಾಗದಲ್ಲಿರೂ 13.21 ಲಕ್ಷ,ದವಸಧಾನ್ಯ ಎಪಿಎಮ್‌ಸಿ ವಿಭಾಗದಲ್ಲಿರೂ 4.63 ಲಕ್ಷ, ನಿಯಂತ್ರಣ ವಿಭಾಗದಲ್ಲಿರೂ. 1.98 ಲಕ್ಷ, ಅಕ್ಕಿಗಿರಣಿ ವಿಭಾಗದಲ್ಲಿ ರೂ.2.8೦ಲಕ್ಷ ಹಾಗೂ ಕಟ್ಟಡ ಸಾಮಾಗ್ರಿ ವಿಭಾಗದಲ್ಲಿ ರೂ.2೦.೦8 ಲಕ್ಷಹಾನಿ ಅನುಭವಿಸಿದ್ದು, ಒಟ್ಟಾರೆರೂ. 5.55ಕೋಟಿ ನಿಕ್ಕಿ ಲಾಭಗಳಿಸಿರುತ್ತದೆ.ಸಂಘದ ಲಾಭದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಂಚಿಕೆ ಮಾಡಲು ಆಡಳಿತ ಮಂಡಳಿಯು ನಿರ್ಣಯಿಸಿದೆ ಎಂದು ಹೇಳಿದರು

ಕೇಂದ್ರಕಛೇರಿ ಹಾಗೂ ಕಾನಸೂರ ಶಾಖೆಯಲ್ಲಿ ವಿಶಾಲವಾದ ವ್ಯಾಪಾರಾಂಗಣವನ್ನು ನಿರ್ಮಿಸಲಾಗಿದೆ.ಅಕ್ಕಿಗಿರಣಿಯ ಪಕ್ಕದಲ್ಲಿಗೋದಾಮು ನಿರ್ಮಾಣ ಹಾಗೂ ಕಾನಸೂರ ಶಾಖೆಯಲ್ಲಿಗೋದಾಮು ನಿರ್ಮಾಣ ಮಾಡಿಉಪಯೋಗಿಸಲಾಗುತ್ತಿದೆ.ಕಳೆದ ಬಾರಿ ಮಾರಾಟ ಮಳಿಗೆ ಶಿರಸಿ ಹಾಗೂ ಕಾನಸೂರ ಶಾಖೆಯಲ್ಲಿದಾಖಲೆ ಪ್ರಮಾಣದಅಡಿಕೆ ವಿಕ್ರಿಯಾಗಿದ್ದು, ವಿಶೇಷವಾಗಿ ಕಾನಸೂರ ಶಾಖೆಯಲ್ಲಿಇನ್ನೂ ಹೆಚ್ಚಿನ ಸೇವೆಗಳನ್ನು ಒದಗಿಸಲು ಆ ಭಾಗದ ಸದಸ್ಯರ ಬೇಡಿಕೆಯಿದ್ದು, ಮುಂದಿನ ದಿನಗಳಲ್ಲಿ ಸದಸ್ಯರಆಧ್ಯತೆಯ ಮೇರೆಗೆ ಹೊಸ ಯೋಜನೆ ಹಾಗೂ ವ್ಯವಹಾರಗಳನ್ನು ಪ್ರಾರಂಭಿಸಲುತೀರ್ಮಾನಿಸಲಾಗುವುದು.ಸದಸ್ಯರಅಡಿಕೆ, ಕಾಳುಮೆಣಸು ಶಿಲ್ಕಿಗೆ ಯಾವುದೇ ಶುಲ್ಕ ವಿಧಿಸಲಾಗುತ್ತಿಲ್ಲ ಹಾಗೂ ಗೋದಾಮಿಗೆ ವಿಮೆ ರಕ್ಷಣೆಯನ್ನು ನೀಡಲಾಗಿದೆ.ಕಳೆದ ಆರ್ಥಿಕ ವರ್ಷದಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳಿಗೆ ರೂ.34.4೦ಕೋಟಿ, ಹಾಗೂ ವಯಕ್ತಿಕ ಸದಸ್ಯರಿಗೆರೂ. 85.78ಕೋಟಿಯಷ್ಟುಆಸ್ಸಾಮಿ ಮುಂಗಡ ಸಾಲವನ್ನು ಮಂಜೂರಿಮಾಡಲಾಗಿದೆ. .ಸಕ್ರಿಯವಾಗಿ ವ್ಯವಹರಿಸುವ ಸದಸ್ಯರು ಮೃತಪಟ್ಟ ಸಂದರ್ಭದಲ್ಲಿಅವರಕುಟುAಬಕ್ಕೆ ನೆರವಾಗುವದೃಷ್ಟಿಯಿಂದ 1೦,೦೦೦ರೂ. ಧನಸಹಾಯ ನೀಡಲಾಗುತ್ತಿದೆ.ವರದಿ ವರ್ಷದಲ್ಲಿ 5೦ ಮೃತ ಸದಸ್ಯರಕುಟುಂಬಕ್ಕೆತಲಾರೂ. 1೦,೦೦೦ ರಂತೆಅoತೂ 5,೦೦,೦೦೦ರೂ. ಈ ಯೋಜನೆಯಿಂದ ನೀಡಲಾಗಿದೆ.ಸಂಘದಲ್ಲಿ ವ್ಯವಹಾರಕೈಕೊಂಡ ಹಾಗೂ ಅವರಕುಟುಂಬದ ಸದಸ್ಯರಅನಾರೋಗ್ಯದ ಸಂದರ್ಭದಲ್ಲಿ, ಸದಸ್ಯರ ಹಿತದೃಷ್ಠಿಯಿಂದ, ಆಸ್ಪತ್ರೆಯಚಿಕಿತ್ಸಾ ವೆಚ್ಚವನ್ನು ಭರಿಸಿಕೊಡುವ ಸದುದ್ದೇಶದಿಂದ, ಸಂಘದಕ್ಷೇಮನಿಧಿಯೋಜನೆಯು ಪುನರಾರಂಭವಾಗಿದೆ ಎಂದು ಆರ್.ಎಂ.ಹೆಗಡೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಘದಉಪಾಧ್ಯಕ್ಷಎಮ್.ಜಿ ನಾಯ್ಕ ಹಾದ್ರಿಮನೆ, ನಿರ್ದೇಶಕರಾದ ಕೆ.ಕೆ ನಾಯ್ಕ ಸುಂಕತ್ತಿ, ಜಿ.ಎಮ್ ಭಟ್‌ಕಾಜಿನಮನೆ, ಇಂದಿರಾಎಸ್ ಭಟ್‌ಗುಡ್ಡೆಕೊಪ್ಪ, ಜಿ.ಎನ್ ಹಸ್ಲರ್‌ಕುಡಗುಂದ, ಎಮ್‌ಎನ್ ಹೆಗಡೆತಲೆಕೆರೆ, ಪಿ.ಕೆ ನಾಯ್ಕ ಮುಗದೂರ,ಸುಧೀರ ಬಿ.ಗೌಡರ್ ಬಾಳೆಕುಳಿ, ಸುಬ್ರಮಣ್ಯ ಜಿ ಭಟ್ ಚಟ್ನಳ್ಳಿ, ಕೆ.ಆರ್ ವಿನಾಯಕ ಕೋಲಸಿರ್ಸಿ, ಪ್ರಧಾನ ವ್ಯವಸ್ಥಾಪಕ ಸತೀಶ್‌ಎಸ್ ಹೆಗಡೆ ಹೆಗ್ಗಾರಕೈ, ಉಪವ್ಯವಸ್ಥಾಪಕ ಪ್ರಸನ್ನಕುಮಾರ್ ಭಟ್‌ಕೆರೆಹೊಂಡ ಹಾಜರಿದ್ದರು.

ಸಂಘದ ಬ್ರಾö್ಯಂಡ್ ಹಾಗೂ ಗುರುತನ್ನುಜನರ ಮನದಲ್ಲಿ ಉಳಿಯುವಂತೆ ಲೋಗೋ ರೂಪಿಸಲಾಗಿತ್ತು.ಆದರೆಅದೇ ಲೋಗೋ ಸಿಂಗಾಪುರದ ಒಂದು ಸಾಫ್ಟವೇರ್‌ಕಂಪನಿಯು ಪೆಟೇಂಟ್‌ಕೇಸ್ ಹಾಕಿತ್ತು, ಈಗ ಪೇಟೇಂಟ್ ನ್ಯಾಯಾಲಯದಲ್ಲಿ ಲೋಗೋ ಹಕ್ಕನ್ನು ನಮಗೆ ನೀಡಿ.ಪೆಟೇಂಟ್‌ಕೂಡ ನೀಡಿದೆ.ಲೋಗೋ ಕೂಡ ನಮ್ಮದಾಗಿದೆ.ಜಗತ್ತಿನಾದ್ಯಂತ ಈಗ ಲೋಗೋವನ್ನುಅಧಿಕೃತವಾಗಿ ನಾವು ಬಳಸಬಹುದಾಗಿದೆ ಎಂದು ಆರ್.ಎಂ.ಹೆಗಡೆಬಾಳೆಸರ ಹೇಳಿದರು.

About the author

Adyot

Leave a Comment