ಶಿರಸಿ:ಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನ

ಆದ್ಯೋತ್ ಸುದ್ದಿನಿಧಿ:
ಅಕ್ರಮವಾಗಿ ಗಾಂಜಾ ಮಾದಕ ವಸ್ತು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ಗ್ರಾಮೀಣ ಪೊಲೀಸರು ಶನಿವಾರ ಬೆಳಗಿನ ಜಾವ 3 ಗಂಟೆಗೆ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.
ಶಿರಸಿ ಬಕ್ಕಳ ಗದ್ದೆಮನೆಯವಿಕ್ರಮ್ ರಾಮಕೃಷ್ಣ ಭಟ್
ಯಡಳ್ಳಿ ಸಿರ್ಸಿಮಕ್ಕಿಯ ಕಶ್ಯಪ್ ಮಂಜುನಾಥ ಹೆಗಡೆ
ಆರೊಪಿಗಳಾಗಿದ್ದಾರೆ,

ಗಿಡಮಾವಿನಕಟ್ಟೆ ಹತ್ತಿರ ಬರೂರ್ ಚೆಕ್ ಪೋಸ್ಟ್ ನಲ್ಲಿ ಸಿಲ್ವರ್ ಟೊಯೋಟಾ ಇನ್ನೋವಾ ಕಾರ್ ನಲ್ಲಿ ಅಕ್ರಮ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡಿಕೊಂಡು ಶಿರಸಿ ಕಡೆಗೆ ಮಾರಾಟ ಮಾಡಲು ಹೋಗುತ್ತಿರುವಾಗ ಸಿಕ್ಕಿ ಬಿದ್ದಿದ್ದು ಸದರಿಯವರನ್ನು ವಶಕ್ಕೆ ಪಡೆದು ಅಂದಾಜು 4,500/- ರೂ ಮೌಲ್ಯದ 80 ಗ್ರಾಂ ಗಾಂಜಾ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು 5,00,000/- ರೂ ಮೌಲ್ಯದ ಟೊಯೋಟಾ ಇನ್ನೋವಾ ನೋಂದಣಿ ಸಂಖ್ಯೆ ಕೆ.ಎ 09 -ಎಮ್ ಎ -0713 ಕಾರ್ ನ್ನು ಜಪ್ತಿಪಡಿಸಿಕೊಂಡಿದ್ದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ದ ಗುನ್ನೆ ನಂ 104/2025 u/s 8(c)20(B)(ii)(A) NDPS ಕಾಯಿದೆಯಡಿ ಪ್ರಕರಣ ದಾಖಲಾಗಿದೆ,
ಉತ್ತರಕನ್ನಡ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಎಂ ನಾರಾಯಣ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ
ಎನ್. ಕೃಷ್ಣಮೂರ್ತಿ, ಜಗದೀಶ್ ಎಂ,ಹಾಗೂ ಶಿರಸಿ ಉಪವಿಭಾಗದ ಡಿಎಸ್ಪಿ
ಗೀತಾ ಪಾಟೀಲ್ ,ಶಿರಸಿ ಗ್ರಾಮೀಣ ನಿರೀಕ್ಷಕ ಮಂಜುನಾಥ್ ಗೌಡ ಮಾರ್ಗದರ್ಶನದಲ್ಲಿ ಶಿರಸಿ ‌ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ ಕುಮಾರ್ ಎಮ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಘವೇಂದ್ರ ಜಿ, ರಾಮ ಕುದ್ರಗಿ,ಮೀರಾಶಿ, ರವಿ, ದವಲ್ ಸಾಬ್ ಹಾಗೂ ಮಾರುತಿ ಗೌಡ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು,
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಶಿರಸಿ ಗ್ರಾಮೀಣ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

About the author

Adyot

Leave a Comment