
ಆದ್ಯೋತ್ ಸುದ್ದಿನಿಧಿ:
ರೈತರ ಪ್ರಧಾನ ಮಂತ್ರಿ ಫಸಲ್ ಭೀಮ್ ಯೋಜನೆ 2025 -26 ನೇ ಸಾಲಿನ ಖರೀಫ್ ಬೆಳೆಗಳಿಗೆ ರೈತ ಬಾಂಧವರು ಬೆಳೆ ವಿಮೆ ಯೋಜನೆ ಅಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಮುಖಂಡರಾದ ಎಸ್ ಎಂ ಎಲ್.ಪ್ರವೀಣ್ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪ್ರವೀಣ್, ಪ್ರತಿವರ್ಷದಂತೆ ಈ ವರ್ಷವೂ ರೈತರ ಬೆಳೆ ವಿಮೆ ಮಾಡಿಸಬೇಕು ಬೆಳವಿಮೆ ನೋಂದಣಿಗೆ ಜುಲೈ 31ರ ಅಂತಿಮ ದಿನಾಂಕವಾಗಿದ್ದು, ರೈತರು ತಮ್ಮ ಹತ್ತಿರ ಪೋಸ್ಟ್ ಆಫೀಸ್ ಬ್ಯಾಂಕ್ ಅಥವಾ ಸಿ ಎಸ್ ಸಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಬೆಳೆವಿಮೆಯಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿ ಪ್ರಕೃತಿ ವಿಕೋಪಗಳಿಂದ ತಮ್ಮ ಬೆಳೆಯ ನಷ್ಟ
ವನ್ನು , ಆರ್ಥಿಕ ಸಂಕಷ್ಟ ಅನುಭವಿಸುವುದನ್ನು ತಪ್ಪಿಸಿಕೊಳ್ಳಬಹುದು. ಹೀಗಾಗಿ ಎಲ್ಲ ರೈತರು ಬೆಳೆವಿಮಾ ಮಾಡಿಸಿಕೊಳ್ಳಿ ಎಂದು ಅವರು ಹೇಳಿದ್ದಾರೆ.
