ಸರಕಾರದ ಬಗ್ಗೆ ಯಾವುದೇ ಅಸಮಧಾನವಿಲ್ಲ- ಶಾಸಕ ಭೀಮಣ್ಣ ನಾಯ್ಕ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ “ಸರಕಾರದ ಬಗ್ಗೆ ನನಗೆ ಯಾವುದೇ ರೀತಿಯ ಅಸಮಧಾನವಿಲ್ಲ ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸೋಮವಾರ ಸಿದ್ದಾಪುರದಲ್ಲಿ ನಡೆದ ಕನ್ನಡ ಸಾಹಿತ್ಯಪರಿಷತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಕೈಗಾರಿಕಾ ವಲಯ,ಕುಡಿಯುವ ನೀರಿನ ವಿಚಾರ,ವಿದ್ಯುತ್ ಬಗ್ಗೆ ಇರಬಹುದು ಎಲ್ಲ ಕೆಲಸಗಳಿಗೂ ಅನುದಾನ ಸಿಗುತ್ತಿದೆ.ಶಿರಸಿಯಲ್ಲಿ ಕೂಡ ಈಗಾಗಲೇ 65 ಕೋಟಿರೂ. ಮಂಜೂರಿಯಾಗಿ ಕಾಮಗಾರಿ ಪ್ರಾರಂಭವಾಗಿದೆ ಹಿಂದಿನ ಸರ್ಕಾರದಲ್ಲಿ ಬಂದಿರುವ ಕಾಮಗಾರಿಗೆ ಹಣ ಕೊರತೆ ಆಗಿತ್ತು ಆ ಕಾಮಗಾರಿಗಳಿಗೂ ಸಹ ಹಣ ಬಂದು ಈಗ ಪ್ರಗತಿಯಲ್ಲಿವೆ. ನನಗೆ ನಮ್ಮ ಸರ್ಕಾರದಿಂದ ಬರತಕ್ಕಂತಹ ಹಣದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಏನಾದರೂ ಇತ್ತು ಅಂತಾದರೆ ನಾನು ಸಂಬಂಧಪಟ್ಟ ಆಯಾ ಮಂತ್ರಿಗಳನ್ನ ಮುಖ್ಯಮಂತ್ರಿಗಳನ್ನ ಭೇಟಿ ಆಗುತ್ತೇನೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರನ್ನು ಭೇಟಿಯಾಗಿ ನಮ್ಮ ಕ್ಷೇತ್ರಕ್ಕೆ ಬೇಕಾಗಿರುವಂತಹ ಕೆಲವು ಸೇತುವೆಗಳಿಗಾಗಿ ಮನವಿ ನೀಡಿದ್ದೆನೆ ಅವರು ಭರವಸೆ ಕೊಟ್ಟಿರುವುದಲ್ಲದೆ ಸರ್ವೆ ನಡೆಸಲು ಸೂಚನೆ ನೀಡಿದ್ದಾರೆ.ಹುಸೂರು ಡ್ಯಾಂ ಎತ್ತರಿಸಲು 15ಕೋಟಿರೂ. ಬೇಡಿಕೆ ಇಟ್ಟಿದ್ದೆನೆ ಅದಕ್ಕೂ ಒಪ್ಪಿಗೆ ನೀಡಲಾಗಿದೆ.ಉಳಿದಂತೆ ಸಣ್ಣ ನೀರಾವರಿ ಮಂತ್ರಿಬೋಸರಾಜುರವರು,ಲೊಕೋಪಯೋಗಿ ಮಂತ್ರಿ ಸತೀಶ ಜಾರಕಿಹೊಳೆಯವರು ನನ್ನ ಬೇಡಿಕೆಯನ್ನು ಒಪ್ಪಿ ಕಾಮಗಾರಿ ನೀಡಿದ್ದಾರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅನೇಕ ಯೋಜನೆಗಳನ್ನು ತಂದು ಅವೆಲ್ಲವೂ ಕಾರ್ಯರೂಪಕ್ಕೆ ಬರುತ್ತಿದೆ.ಎರಡು ವರ್ಷದಲ್ಲಿ ನೂರಾರುಕೋಟಿರೂ. ಹಣವನ್ನು ತಂದಿದ್ದೇನೆ ಹೀಗಾಗಿ ನನಗೆ ಸರಕಾರದ ಬಗ್ಗೆ ಯಾವುದೇ ಅಸಮಧಾನವಿಲ್ಲ.ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿಯಾಗಿರುವ ಸುರ್ಜೆವಾಲಾರವರು ನಮ್ಮೆಲ್ಲ ಶಾಸಕರನ್ನು ವಯಕ್ತಿಕವಾಗಿ ಕರೆದು ಮಾತನಾಡುತ್ತಿದ್ದಾರೆ. ನನಗೆ ಮಂಗಳವಾರ ಸಮಯ ಕೊಟ್ಟಿದ್ದಾರೆ. ನಾನು ಆ ಸಂದರ್ಭದಲ್ಲಿ ಹೋಗಿ ನನ್ನ ಕ್ಷೇತ್ರದ ಬಗ್ಗೆ,ಅಭಿವೃದ್ಧಿ ಬಗ್ಗೆ ಬೇರೆ ಬೇರೆ ವಿಷಯಗಳನ್ನು ಮಾತನಾಡಲು ಮುಕ್ತವಾಗಿ ಅವಕಾಶ ಕೊಟ್ಟಿದ್ದಾರೆ. ಭೇಟಿಯ ಸಂದರ್ಭದಲ್ಲಿ ನನ್ನ ಕ್ಷೇತ್ರಕ್ಕೆ ಬೇಕಾಗಿರುವಂತಹ ಕಾಮಗಾರಿಗಳ ಹಾಗೂ ಅನುದಾನದ ಬಗ್ಗೆ ಈಗಾಗಲೇ ಎಲ್ಲಾ ಮಂತ್ರಿಗಳಿಗೂ ಮನವಿ ಕೊಟ್ಟಿದ್ದೇನೆ. ಅದಕ್ಕೆ ಪುರಸ್ಕಾರ ಸಿಗುವ ರೀತಿಯಲ್ಲಿ ಮಾತನಾಡುತ್ತೇನೆ. ಇಲ್ಲಿ ಪಕ್ಷದ ಸಂಘಟನೆಯೂ ಚೆನ್ನಾಗಿದೆ ಏನು ತೊಂದರೆ ಇಲ್ಲ. ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡಗೆ ಬಿಟ್ಟ ವಿಚಾರ ಅದು ನನಗೆ ಸಂಬಂಧಿಸಿಲ್ಲ ಯಾರೇ ಮುಖ್ಯಮಂತ್ರಿಯಾಗಲಿ,ಯಾರೇ ಮಂತ್ರಿಯಾಗಲಿ ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯಾದರೆ ಸಾಕು ಎಂದು ಭೀಮಣ್ಣ ನಾಯ್ಕ ಹೇಳಿದರು.

About the author

Adyot

Leave a Comment