ಸಿದ್ದಾಪುರ ಕಸಾಪದಿಂದ ಅಭಿನಂದನಾ ಕಾರ್ಯಕ್ರಮ


ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಪ್ರಶಾಂತಿ ಪ್ರೌಢಶಾಲಾ ಸಭಾಭವನದಲ್ಲಿ ಜಿಲ್ಲಾಕನ್ನಡಸಾಹಿತ್ಯಪರಿಷತ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ೨೦೨೪-೨೫ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಶೇ.೧೦೦ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ಶಿಕ್ಷಣ ಪಡೆಯುವುದರಿಂದ ನಮಗೆ ಸಿಗುವ ಸೌಲಭ್ಯಗಳ ಬಗ್ಗೆ,ನಮ್ಮ ಹಕ್ಕಿನ ಬಗ್ಗೆ ಅರಿವು ಮೂಡುತ್ತದೆ ಶಿಕ್ಷಣ ಯಾರ ಒಬ್ಬರ ಸ್ವತ್ತಲ್ಲ ಎಲ್ಲರೂ ಶಿಕ್ಷಣ ಪಡೆಯುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಪಾಲಕರು ಮಕ್ಕಳಿಗೆ ಆಸ್ತಿ,ಹಣವನ್ನು ಕೂಡಿಹಾಕುವ ಅವಶ್ಯಕತೆ ಇಲ್ಲ ಉತ್ತಮ ಸಂಸ್ಕಾರ,ಒಳ್ಳೆಯ ಶಿಕ್ಷಣ ಸಿಗುವಂತೆ ಮಾಡಬೇಕು. ಕನ್ನಡದಲ್ಲಿ ಶೇ೧೦೦ರ ಸಾಧನೆ ಮಾಡಿದವರನ್ನು ಅಭಿನಂದಿಸುವ ಸಾಹಿತ್ಯಪರಿಷತ್‌ನ ಕಾರ್ಯ ಶ್ಲಾಘನೀಯವಾದುದು ಇದು ಉಳಿದ ಮಕ್ಕಳಿಗೆ ಸ್ಪೂರ್ತಿಯಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಆರ್.ನಾಯ್ಕ ಮಾತನಾಡಿ, ಶಿರಸಿ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲೆ ಉತ್ತಮ ಸಾಧನೆ ಮಾಡುತ್ತಿದೆ ಅದರಲ್ಲೂ ಸಿದ್ದಾಪುರ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿದೆ.ಇದಕ್ಕೆ ಶಿಕ್ಷಕರು,ಇಲಾಖೆಯವರು,ಪಾಲಕರು ಕಾರಣ ಜೊತಗೆ ಮಕ್ಕಳಲ್ಲಿ ಕಲಿಯಬೇಕೆಂಬ ಉತ್ಸಾಹವಿದೆ ಇದು ಇಂತಹ ಫಲಿತಾಂಶಕ್ಕೆ ಕಾರಣ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಮಾತನಾಡಿ,ಸಾಹಿತ್ಯ ಪರಿಷತ್ತು ನಿರಂತರವಾಗಿ ಕನ್ನಡದ ಕಾರ್ಯಕ್ರಮವನ್ನು ಮಾಡುವ ಮೂಲಕ ಕ್ರೀಯಾಶೀಲವಾಗಿದೆ. ನಮಗೆ ಇಂಗ್ಲೀಷ ಮೋಹ,ವಿದೇಶಿ ಮೋಹ ಹೆಚ್ಚಾಗುತ್ತಿದೆ ಆದರೆ ಈ ಮೋಹಗಳು ಕನ್ನಡವನ್ನು ಕೊಲ್ಲುವಷ್ಟು ಇರಬಾರದು.ಯಾವುದೇ ಲಾಭಕ್ಕಾಗಿ ಈ ಕಾರ್ಯಕ್ರಮವನ್ನು ಮಾಡುತ್ತಿಲ್ಲ ಮಕ್ಕಳಿಗೆ ಕನ್ನಡದ ಬಗೆಗಿನ ಜಾಗೃತಿ ಎದೆಯಲ್ಲಿ ಮೂಡಿಬರಲಿ ಎಂಬ ಉದ್ದೇಶದಿಂದ ಮಾಡುತ್ತಿದ್ದೆವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಹೆಚ್.ನಾಯ್ಕ,ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡ,ಆಧಾರ ಸಂಸ್ಥೆಯ ನಾಗರಾಜ ನಾಯ್ಕ ಮಾಳಕೋಡ,ಮುಂತಾದವರು ಉಪಸ್ಥಿತರಿದ್ದರು

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಡಾಕ್ಟ್ರೇಟ್ ಗೌರವ ಪಡೆದ ಜಿ.ಜಿ.ಹೆಗಡೆ ಬಾಳಗೋಡರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ಪ್ರಾಸ್ತಾವಿಕ ಮಾತನಾಡಿದರು ಪ್ರಶಾಂತ ಹೆಗಡೆ ಮುತ್ತಿಗೆ ಸ್ವಾಗತಿಸಿದರು ಸುಮಿತ್ರಾ ಶೇಟ ಪ್ರಾರ್ಥನೆ ಹಾಡಿದರು.ಮೇಘನಾ ನಾಯ್ಜ ನಿರೂಪಣೆ ಮಾಡಿದರು.

About the author

Adyot

Leave a Comment