ಸಿಗಂದೂರು ಸೇತುವೆ ಲೋಕಾರ್ಪಣೆ

ಆದ್ಯೋತ್ ಸುದ್ದಿನಿಧಿ:
ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳವಾಗಿರುವ ಸಿಗಂದೂರು ಹಾಗೂ ಸುತ್ತಮುತ್ತಲಿನ ಭಾಗದ ಜನರ ಬಹುದಿನದ ಕನಸಾದ ಸೇತುವೆ ಸೋಮವಾರ ಲೋಕಾರ್ಪಣೆಗೊಂಡಿತು

ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆ ಇದಾಗಿದ್ದು ಸುಮಾರು ೪೫೦ ಕೋಟಿರೂ.ವೆಚ್ಚವಾಗಿದೆ.ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಸೇತುವೆಯನ್ನು ಉದ್ಘಾಟಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಹಾಲಿ ಸಂಸದ. ಬಿ.ವೈ.ರಾಘವೇಂದ್ರ,ಮಾಜಿ ಸಚೀವ ಹರತಾಳು ಹಾಲಪ್ಪ ಸೇರಿದಂತೆ ಹಲವು ನಾಯಕರ ಸತತ ಪ್ರಯತ್ನ ಹಾಗೂ ಈ ಭಾಗದ ಜನರ ನಿರಂತರ ಹೋರಾಟ ದಿಂದಾಗಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಸಿಗಂದೂರು ಶ್ರೀ ದೇವಿಯ ಭಕ್ತರು ಹಾಗೂ ಸುತ್ತಲಿನ ಗ್ರಾಮಗಳ ಜನರೆಲ್ಲರ ಬಹುದಿನಗಳ ಕನಸು ನನಸಾದಂತಾಗಿದೆ.


ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ,ಮಾಜಿ ಸಭಾಪತಿ ಕಾಗೂಡು ತಿಮ್ಮಪ್ಪ,ಮಾಜಿ ಸಚೀವ ಹರತಾಳು ಹಾಲಪ್ಪ,ಶಾಸಕ ಅರಗ ಜ್ಞಾನೇಂದ್ರ,ಶಾಸಕ ಸಿಮೆಂಟ್ ಮಂಜು,
ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಧನಂಜಯ ಸರ್ಜಿ,
ಹೆಮಲತಾ ನಾಯಕ್, ಮಾಜಿ ಶಾಸಕ ಅಶೋಕ್ ನಾಯಕ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ,ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮುಂತಾದವರು
ಉಪಸ್ಥಿತರಿದ್ದರು.


About the author

Adyot

Leave a Comment