ಆದ್ಯೋತ್ “ಆಪ್ತಸಮಾಲೋಚನೆ”


ಆದ್ಯೋತ್ ಸುದ್ದಿನಿಧಿ:
ನಾನು ವಿದ್ಯಾಭ್ಯಾಸ ಮುಗಿಸಿ ಮನೆಗೆ ಬಂದಾಗ ಬಹಳಷ್ಟು ಜನರು ಕೇಳಿದ್ದರು, ಏನು ಓದಿರೊದು ಅಂತ? ಮಾಮೂಲಾಗಿ ನಾನು ಮನಃಶಾಸ್ತ್ರ ಓದಿ ಇವಾಗ ಸಮಾಲೋಚನೆ ಅಥವಾ ಮಾಗ೯ದಶ೯ನ ಮಾಡ್ತೀನಿ ಎನ್ನುತ್ತಿದ್ದೆ. ಇದಕ್ಕೆ ಹಲವಾರು ಉತ್ತರಗಳು ಬಂದವು. ಈ ಉತ್ತರಗಳಲ್ಲಿ ಕೆಲವು ನಗೆ ಬರುವಂತಹದ್ದು ಕೆಲವೊಂದು ಆಶ್ಚರ್ಯ ಮೂಡುವಂತಹದ್ದು, ಕೆಲವೊಂದು ಮೂಖ೯ತನದಿಂದ ಕೂಡಿತ್ತು. ಅದರಲ್ಲೇನಿದೆ ನಾವು ಕೂಡ ನಮ್ಮ ಜೀವಿತಾವದಿಯಲ್ಲಿ ಹಲವರಿಗೆ ಮಾಗ೯ದಶ೯ನ, ಕಷ್ಟದಲ್ಲಿರುವವರಿಗೆ, ನೋವಿನಲ್ಲಿರುವವರಿಗೆ ಸಾಂತ್ವಾನ ಹೇಳಿದ್ದೇವೆ. ಹಾಗೆ ನೋಡಿದರೆ ನಾವು ಕೂಡ ಮಾಗ೯ದಶ೯ಕರೇ ಅಲ್ಲವೇ ಎಂಬ ಮರುಪ್ರಶ್ನೆಯು ಬರಲಾರಂಭಿಸಿದಾಗ ಒಂದು ಹಂತಕ್ಕೆ ತಲೆಯಲ್ಲಿ ಗೊಂದಲ ಸೃಷ್ಟಿಸಿತು. ಆಮೇಲೆ ನಾನು ಕಲಿತ ಹಾಗೂ ಮನಃಶಾಸ್ತ್ರದ ಮೂಲ ನಿಯಮಗಳು, ತತ್ವಗಳು, ಪ್ರಯೋಗಿಸಬೇಕಾದ ರೀತಿ ಕಟ್ಟುಪಾಡುಗಳನ್ನು ನೆನಪಿಸಿಕೊಂಡ ಮೇಲೆ ಒಂದು ರೀತಿಯ ನಿರಾಳತೆ. ಹಾಗಿದ್ದರೆ ನಾವು ಮಾಗ೯ದಶ೯ನ ಮಾಡಿದ್ದು ತಪ್ಪಾ ಅಥವಾ ನಮ್ಮ ಅನುಭವದ ಮಾತುಗಳು, ನೀತಿ ಮಾತುಗಳು ಪ್ರಯೋಜನಕ್ಕೆ ಬರುವುದಿಲ್ಲವೇ ಎಂದು ಪ್ರಶ್ನೆ ಬರುವುದು ಸಹಜ.

ಆದರೆ ಅದಕ್ಕೆ ನಾನು ಹೇಳುವುದೇನೆಂದರೆ ಉದಾಹರಣೆಗೆ ಒಬ್ಬ ವ್ಯಕ್ತಿ “ನನಗೆ ಜಿವನದಲ್ಲಿ ತುಂಬಾ ನೋವಿದೆ ಜೀವನವೇ ಸಾಕಾಗಿದೆ” ಎಂದು ಹೇಳಿದಾಗ ಕಷ್ಟಗಳು ಮನುಷ್ಯರಿಗೆ ಬರದೇ ಮರಕ್ಕೆ ಬಂದೀತೆ? ಎಂದು ಎಲ್ಲರ ಜೀವನದಲ್ಲೂ ಕಷ್ಟಗಳು ಸಹಜ ಅದನ್ನು ಹಿಮ್ಮೆಟ್ಟಿಸಿ ಮುನ್ನುಗ್ಗಬೇಕು, ಸಮಯ ಹೀಗೆ ಇರುವುದಿಲ್ಲ ಸ್ವಲ್ಪ ಸಹನೆಯಿಂದ ಇರು ಎನ್ನುವ ನಿಮ್ಮ ಸ್ಪೂತಿ೯ದಾಯಕ ಮಾತು, ನೀವು ನೀಡಿದ ಧೈರ್ಯ ಆ ಕ್ಷಣದಲ್ಲಿ ನೊಂದಿರುವ ವ್ಯಕ್ತಿಗೆ ಮನೋಬಲ ನೀಡಬಹುದು, ಜೀವಿಸಲು ಉತ್ತೇಜನ ನೀಡಬಲ್ಲದೇ ವಿನಹ ಶಾಶ್ವತ ಪರಿಹಾರ ನೀಡಲು ಸಾಧ್ಯವಿಲ್ಲ. ಮತ್ತೊಮ್ಮೆ ಆ ವ್ಯಕ್ತಿಯು ಅದೇ ಪರಿಸ್ಥಿತಿಯಲ್ಲಿ ಸಿಲುಕಿದಾಗ ಮತ್ತೆ ಬೇರೆಯವರ ಸಹಾಯ ಬೇಕಾಗುತ್ತದೆಯೇ ವಿನಃ ತಾನೆ ಹೋರಾಡುವ ಸಾಮರ್ಥ್ಯ ತನ್ನೊಳಗೆ ಇದ್ದರೂ ಅದನ್ನು ಗುರುತಿಸಲಾಗದೇ ಮತ್ತಷ್ಟು ಸಂಕಷ್ಟಕ್ಕೆ ಈಡಾಗುತ್ತಾನೆ. ಆದ್ದರಿಂದ ಮನಃಶಾಸ್ತ್ರದಲ್ಲಿ ಅಧ್ಯಯನ ನಡೆಸಿದವರಿಗೆ ಇದನ್ನು ಪರಿಹರಿಸುವ ರೀತಿ ಹಾಗೂ ಪರಿಹಾರ ಒದಗಿಸುವ ಮಾಗ೯ ತಿಳಿದಿರುತ್ತದೆ. ಅದು ಯಾವ ರೀತಿ? ಹೇಗೆ? ಅದರಿಂದ ಆಗುವ ಅನುಕೂಲ, ಪರಿಣಾಮ, ಸಹಾಯದ ಬಗ್ಗೆ ಮುಂದೆ ನೋಡೋಣ.
ಧನುಷ ಭಟ್
(ರವಿವಾರ ಮುಂದಿನ ಸಂಚಿಕೆ)

About the author

Adyot

Leave a Comment