ಆದ್ಯೋತ್:”ಆಪ್ತ ಸಮಾಲೋಚನೆ”

ಆದ್ಯೋತ್ ಸುದ್ದಿನಿಧಿ:
ಹಿಂದಿನ ಸಂಚಿಕೆಯಲ್ಲಿ ಮನಶಾಸ್ತ್ರ , ಅದರ ವ್ಯಾಖ್ಯಾನಗಳು ಹಾಗೂ ಮನೋಸಮಾಲೋಚನೆಯ ಬಗ್ಗೆ ತಿಳಿದುಕೊಂಡಿದ್ದೇವೆ. ಹಾಗಾದರೆ ಸಲಹೆಗಾರ ಅಥವಾ ಮಾಗ೯ದಶ೯ಕನ
ಕತ೯ವ್ಯದ ಬಗ್ಗೆ ಗಮನ ಹರಿಸೋಣ.

ಒಂದು ಖಾದ್ಯ ಸ್ವಾದಿಷ್ಟಕರವಾಗಬೇಕಾದರೆ ಅದಕ್ಕೆ ಸರಿಯಾಗಿ ಒಳ್ಳೆಯ ಮತ್ತು ಉತ್ತಮ ಗುಣಮಟ್ಟದ ಸಾಮಗ್ರಿಗಳು, ಅದನ್ನು ತಯಾರಿಸುವ ಮಾಗ೯ವನ್ನು ಅಚ್ಚುಕಟ್ಟಾಗಿ ಪಾಲಿಸಿ ಶ್ರದ್ಧೆಯಿಂದ ತಯಾರಿಸಿದರೆ ಅದು ಉತ್ತಮ ಖಾದ್ಯವಾಗುತ್ತದೆ. ಅಂತೆಯೆ ಸಲಹೆಗಾರ ಅಥವಾ ಸಮಾಲೋಚಕನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಪಿಯುಸಿಯಲ್ಲಿ ಮನಃಶಾಸ್ತ್ರ ಪಠ್ಯಕ್ರಮ ಲಭ್ಯವಿದ್ದು ಅದನ್ನು ಪಡೆದು ಉತ್ತೀಣ೯ರಾಗಿ ಮುಂದೆ ಪದವಿಯಲ್ಲಿ ಮನಃಶಾಸ್ತ್ರವನ್ನು ಮುಖ್ಯ ಪಠ್ಯವನ್ನಾಗಿಸಿ ಅಲ್ಲಿ ತಿಳಿಸಿಕೊಡುವ ತತ್ವಗಳು ಪ್ರಯೋಗಗಳು ಮನಃಶಾಸ್ರ್ತದ ಮೂಲ ಉಗಮ ಹಾಗು ಅದರ ಬೆಳವಣಿಗೆಗಳ ಬಗ್ಗೆ ಪಡೆದುಕೊಳ್ಳುವ ಜ್ಞಾನವೇ ಭದ್ರ ಬುನಾದಿಯಾಗುತ್ತದೆ. ತದನಂತರ ಸ್ನಾತಕೋತ್ತರ ಪದವಿಯಲ್ಲಿ ಪೂಣ೯ ಪ್ರಮಾಣದಲ್ಲಿ ಮನಃಶಾಸ್ರ್ತದ ಬಗ್ಗೆ ಮಾಹಿತಿಯನ್ನು ಪಡೆದು, ಅಧ್ಯಯನ ನಡೆಸಿ ಸ್ನಾತಕೋತ್ತರ ಪದವಿಯನ್ನು ಪಡೆಯಬೇಕು. ಆಗ ನೀವು ಮನಃಶಾಸ್ರಜ್ಞ ಎಂದು ಹೇಳಿಕೊಳ್ಳಬಹುದು.(ಉನ್ನತ ಸ್ಥಾನಗಳಿಗಾಗಿ ಪಿ.ಹೆಚ್.ಡಿ, ಎಂ.ಪಿಲ್‌, ಪಿ.ಎಸ್‌.ವೈ.ಡಿ ಮಾಡಿದ್ದಲ್ಲಿ ನಿವು ವಿಶ್ವವಿಧ್ಯಾನಿಲಯಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಬಹುದು) ಈ ಹಂತದ ವಿದ್ಯಾಭ್ಯಾಸ ಬಹುಮುಖ್ಯ. ಅಂತೆಯೆ ಮುಂದೆಯೂ ಕೂಡ ಹಲವಾರು ರೀತಿಯ ಪರೀಕ್ಷೆ, ಕಾಯ೯ಗಾರಗಳು ಹಾಗು ಹಲವಾರು ಮಾಗ೯ಗಳು ದೊರೆಯುತ್ತದೆ. ಈ ಎಲ್ಲಾ ಅಧ್ಯಯನಗಳ ಜೊತೆಗೆ ಕೆಲಸದಲ್ಲಿ ನಿಷ್ಠೆ, ಭಕ್ತಿ, ಶ್ರದ್ಧೆ, ಮನಸ್ಸು, ಸಮಾಜದ ಬಗ್ಗೆ ಕಳಕಳಿ, ಆತ್ಮವಿಶ್ವಾಸ, ಧೈಯ೯, ಸಹಾನುಭೂತಿಯೂ ಇರಬೇಕು. ಆಗ ಮಾತ್ರ ಒಬ್ಬ ಸಮಾಲೋಚಕನು ಪರಿಪೂಣ೯ನಾಗಲು ಸಾಧ್ಯ.

In details –
in Puc take psychology as a subject
BA, Bsc choose psychology as a one of the main subject in combination ( in new syllabus you have to choose main ̄ subject so better to select psychology and sociology as a main subject )
Msc in psychology ( specially clinical psychology )
further you can do Phḑ Mphiļ PsyD or Also take National counseller exam (NCE)̧ National clinical mental health counselling examination (NCMHCE) for Licence.

ಒಂದು ನಾಣ್ಯಕ್ಕಿರುವ ಎರಡು ಮುಖಗಳಂತೆ ಅನುಕೂಲದ ಜೊತೆ ಅನಾನುಕೂಲವು ಇರುತ್ತದೆ. ಮೇಲೆ ಉಲ್ಲೇಖಿಸಿದ ಪದವಿಗಳು ಸುಲಭವೆನಿಸಿದರೂ ಪಡೆಯಲು ಹರಸಾಹಸ ಪಡಬೇಕು. ಮೂಲವಾಗಿ ಗ್ರಾಮಾಂತರ ಭಾಗಗಳಲ್ಲಿ ಈ ರೀತಿಯ ವಿಷಯಗಳು ಹಾಗೂ ಪಠ್ಯಕ್ರಮದ ಬಗ್ಗೆ ಅರಿವಿಲ್ಲದೆ ವಿದ್ಯಾಥಿ೯ಗಳು ಅವಕಾಶ ವಂಚಿತರಾಗುತಿದ್ದಾರೆ. ಅರಿವಿಗೆ ಬರುವ ಹೊತ್ತಿಗೆ ಜವಾಬ್ಧಾರಿಯನ್ನರಿತು ಕೆಲಸದ ಬಗ್ಗೆ ಗಮನಹರಿಸುತ್ತಾರೆ. ಇನ್ನು ಕೆಲವು ವಿಧ್ಯಾಥಿ೯ಗಳು ಕುದುರೆಗೆ ಕಣ್ಣುಪಟ್ಟಿ ಕಟ್ಟಿದಂತೆ ಒಂದೆ ತರಹದ ಪದವಿಯನ್ನು ಪಡೆದು ಹತ್ತರಲ್ಲಿ ಹನ್ನೊಂದನೆಯವರಾಗಿ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಾರೆ. ಶಿಕ್ಷಣವು ಸಮುದ್ರದಂತೆ ವಿಶಾಲವಾಗಿದ್ದು ನಾವು ಹೊಸ ರೀತಿಯ ಅನ್ವೇಷಣೆ ಮಾಡಿದಾಗ ಉತ್ತಮ ಫಲಿತಾಂಶ ದೊರೆಯುತ್ತದೆ. ಹಾಗಾದರೆ ಯಾವ ವಿಷಯವನ್ನು ಆರಿಸಿಕೊಳ್ಳಬೇಕು, ಯಾವ ಯಾವ ಬಗೆಗಳ ಹೊಸ ರೀತಿಯ ಪಠ್ಯಕ್ರಮದ ಬಗ್ಗೆ ಶಿಕ್ಷಣ ಸಮಾಲೋಚನೆ ಹಾಗೂ ವೃತ್ತಿ ಸಮಾಲೋಚನೆ ವಿಭಾಗದಲ್ಲಿ ತಿಳಿಯೋಣ.
ಧನುಷ್‌ ಭಟ್

About the author

Adyot

Leave a Comment