ಆದ್ಯೋತ್ ಸುದ್ದಿನಿಧಿ
ಪ್ರಾಥ೯ಮಿಕ ಶಿಕ್ಷಣ ಮೂಲ ಮನೆಯೆಂಬುದನ್ನು ಅರಿತಿದ್ದೆವೆ. ಹಾಗಾದರೆ ಮುಂದಿನ ಹಂತದ ಶಿಕ್ಷಣ ವೃತ್ತಿಯೇತರ ಶಿಕ್ಷಣ , ಪದವಿಗಳ ಬಗ್ಗೆ ಅರಿಯೋಣ.
ಸಮಾನ್ಯವಾಗಿ ಶಿಕ್ಷಣದ ಅಡಿಪಾಯ 1 ನೇ ತರಗತಿಯಿಂದ 1೦ನೇ ತರಗತಿಯವರೆಗೆ ಎಂಬುದು ಸವೆ೯ ಸಾಮಾನ್ಯ ಎಂದು ತೀಳಿದಿರುತ್ತದೆ. ಅಡಿಪಾಯಕ್ಕೆ ಎಷ್ಟು ಶಕ್ತಿ ಇರುತ್ತದೆ , ಎಷ್ಟು ಪ್ರಾಮುಖ್ಯತೆ ಹೊಂದುತ್ತದೆ ಎಂದು ಗಮನ ಹರಿಸೋಣ .
ಮೊದಲೆಲ್ಲಾ ಜಾತಿ, ಮತ , ಧಮ೯ , ಹಾಗು ವಗ೯ ಪದ್ಧತಿಗಳ ಆಧಾರದ ಮೇಲೆ ಶಿಕ್ಷಣವನ್ನು ಪಡೆಯುತ್ತಿದ್ದರು , ಗುರುಕುಲ ಪದ್ಧತಿ ಸಂಸ್ಕೃತ , ವೇದಾಧ್ಯಯನಗಳ ಮೂಲಕ ಜ್ಞಾನಜ೯ನೆಯನ್ನು ಸಿದ್ದಿಸುತ್ತಿದ್ದರು . ಈಗಿನ ಮಕ್ಕಳು ನಮ್ಮ ಅಜ್ಜ ಅಜ್ಜಿ ಅನಕ್ಷರಸ್ತರು ತಂದೆ ತಾಯಿಗಳಿಗೆ ಓದಲು ಬರೆಯಲು ಬರುವುದಿಲ್ಲ ತಿಳುವಳಿಕೆ ಇಲ್ಲ ಎಂಬ ಅಸಡ್ಡೆ ಭಾವವನ್ನು ತೋರುತ್ತಾರೆ. ಅದರೆ ಈ ಮಾತನ್ನು ನಾನು ಒಪ್ಪುವುದಿಲ್ಲ.ಮಾತು,ಭಾಷೆಗಳನ್ನು ಅರಿಯುವ ಮೊದಲೆ ಸಂಜ್ಞೆಗಳ ಮೂಲಕ, ಚಿತ್ರಕಲೆಗಳ ಮೂಲಕ ಭಾವನೆಗಳನ್ನು
ಅಭಿವ್ಯಕ್ತ ಪಡಿಸುತ್ತಿದ್ದರು. ಜಾನಪದ ಕಲೆಗಳ ಮೂಲಕ ಪದ್ಯಗಳ ಮೂಲಕ ವಿಷಯಗಳನ್ನು,ಜ್ಞಾನಗಳನ್ನು ಪಿಳೀಗೆಗಳಿಂದ ಮುಂದಿನ ಹಂತಕ್ಕೆ ವಗಾ೯ಯಿಸುತ್ತಿದ್ದರು. ಇಂದಿನ ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಅದನ್ನು ವಿಭಜಿಸಿದ ಪರಿಯಲ್ಲಿ ಓದುತ್ತಿದ್ದಾರೆ.ನಾಲ್ಕು ಅಕ್ಷರ ಕಲಿತು ದೊಡ್ಡ ಪಟ್ಟಣಗಳಲ್ಲಿ ಜಂಜಾಟದ ಜಿವನವನ್ನು ನಡೆಸಿದರೆ , ಪರಿಕ್ಷೆಯಲ್ಲಿ 1೦೦ ಕ್ಕೆ 1೦೦ ತೇಗೆದ ಮಾತ್ರಕ್ಕೆ ಬುದ್ದಿವಂತರಲ್ಲ ಎಂಬುದು ನನ್ನ ವಿಚಾರ.

ಇತ್ತಿಚಿನ ಪಠ್ಯ ಪುಸ್ತಕದ ಬಗ್ಗೆ ಅರಿಯೋಣ .
1ರಿಂದ 1೦ನೇ ತರಗತಿಯ ತನಕ ಶಿಕ್ಷಣ ಬಹುಮುಖ್ಯ. ಈ ಹಂತಗಳಲ್ಲಿ ಒಂದು ಶಿಸ್ತಿನ ಸಿಪಾಯಿಯಾಗಿ,ಕಟ್ಟು ನಿಟ್ಟಿನ ಪರಿಶ್ರಮ,ವ್ಯವಸ್ಥಿತ ಪದ್ಧತಿಯಲ್ಲಿ ಓದಲು ಬರೆಯಲು ಕಲಿಯುವ ಹಂತ. ಈ ಹಂತದಲ್ಲಿ ಉತ್ತೀ೯ಣವಾದರೆ ಮುಂದಿನ ಶಿಕ್ಷಣಕ್ಕೆ ದಾರಿ ಮಾಡಿಕೊಡುತ್ತದೆ. ಪಿ.ಯು.ಸಿಯಲ್ಲಿ ಕಲಾ , ವಾಣಿಜ್ಯ,ವಿಜ್ಞಾನ,ಐ.ಟಿ.ಐ.ಡಿಪ್ಲೋಮಾದ ಪದವಿಯ ದಾರಿಯು ತೆರೆಯುತ್ತದೆ.
-ಕಲಾ ವಿಭಾಗದಲ್ಲಿ *ಇತಿಹಾಸ (History) *ರಾಜ್ಯಶಾಸ್ತ್ರ (Political Science) * ಸಮಾಜಶಾಸ್ತ್ರ (Sociology) *ಅರ್ಥಶಾಸ್ತ್ರ (Economics) *ಮನಃಶಾಸ್ತ್ರ (Psychology) *ಇಂಗ್ಲಿಷ್ ಸಾಹಿತ್ಯ (English Literature) *ತತ್ವಶಾಸ್ತ್ರ (Philosophy) ಗಳು ಪ್ರಮುಖ ವಿಷಯಗಳು
– ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ (Economics) *ಲೆಕ್ಕಶಾಸ್ತ್ರ (Accountancy) *ವ್ಯವಹಾರ ಅಧ್ಯಯನ (Business Studies) *ಗಣಿತಶಾಸ್ತ್ರ (Mathematics) *ಸಂಖ್ಯಾಶಾಸ್ತ್ರ (Statistics) * ಕಂಪ್ಯೂಟರ್ ಅಪ್ಲಿಕೇಶನ್ಸ್ (Computer Applications)
ಭಾಷಾ ವಿಷಯಗಳು (Language Subjects): ಕನ್ನಡ, ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳನ್ನು ಕಲಿಯಲಾಗುತ್ತದೆ.
– ವಿಜ್ಞಾನದಲ್ಲಿ ಗಣಿತ (Mathematics) *ಭೌತಶಾಸ್ತ್ರ (Physics) *ರಸಾಯನಶಾಸ್ತ್ರ (Chemistry) * ಜೀವಶಾಸ್ತ್ರ (Biology) *ಎಲೆಕ್ಟ್ರಾನಿಕ್ಸ್ (Electronics) *ಕಂಪ್ಯೂಟರ್ ವಿಜ್ಞಾನ (Computer Science) *ಗೃಹ ವಿಜ್ಞಾನ (Home Science) ವಿಷಯಗಳು
ಇನ್ನು ಪದವಿಯಲ್ಲಿ ಬಿ.ಎ , ಬಿ.ಎ.ಸ್ಸಿ . ಬಿ.ಕಾಂ, ಬಿ.ಎ ಎಲ್.ಎಲ್.ಬಿ ( ಕಾನುನು ಅಧ್ಯಯನ)ಗಳು ಬರುತ್ತದೆ.
ಬಿ.ಎಸ್.ಸಿ ವಿಜ್ಞಾನದಲ್ಲಿ – ಗಣಿತ (Mathematics): ಭೌತಶಾಸ್ತ್ರ (Physics): ರಸಾಯನಶಾಸ್ತ್ರ (Chemistry): ಸಸ್ಯಶಾಸ್ತ್ರ (Botany): ಪ್ರಾಣಿಶಾಸ್ತ್ರ (Zoology): ಅಂಕಿಅಂಶಗಳು (Statistics): ಮನೋವಿಜ್ಞಾನ (Psychology): ಪೋಷಣೆ (Nutrition): ಅರಣ್ಯಶಾಸ್ತ್ರ (Forestry): ಕಂಪ್ಯೂಟರ್ ವಿಜ್ಞಾನ (Computer Science): ಗೃಹ ವಿಜ್ಞಾನ (Home Science): ಸೂಕ್ಷ್ಮಜೀವಶಾಸ್ತ್ರ (Microbiology): ತಳಿಶಾಸ್ತ್ರ (Genetics): ಕೃಷಿ (Agriculture):
ಬಿ.ಕಾಂ ಪದವಿಯಲ್ಲಿ ಹಣಕಾಸು ಲೆಕ್ಕಪತ್ರ ನಿರ್ವಹಣೆ (Financial Accounting): ವ್ಯಾಪಾರ ಕಾನೂನುಗಳು (Business Laws): ಪರೋಕ್ಷ ತೆರಿಗೆ ಕಾನೂನುಗಳು (Indirect Tax Laws): ಸ್ಥೂಲ ಅರ್ಥಶಾಸ್ತ್ರ (Macroeconomics): ಹಣಕಾಸು ನಿರ್ವಹಣೆ (Financial Management): ಗಣಕೀಕೃತ ಲೆಕ್ಕಪತ್ರ ವ್ಯವಸ್ಥೆಗಳು (Computerized Accounting Systems): ಉದ್ಯಮಶೀಲತೆ (Entrepreneurship):
ಬಿ.ಎಯಲ್ಲಿ ಪಾರಂಪರಿಕ ಬಿಎ ವಿಷಯಗಳು: ಮಾನವಶಾಸ್ತ್ರ (Humanities): ಸಮಾಜಶಾಸ್ತ್ರಗಳು (Social Sciences): ಪತ್ರಿಕಾರಚನೆ ಮತ್ತು ಸಾಮೂಹಿಕ ಸಂವಹನ (Journalism and Mass Communication): ಮನೋವಿಜ್ಞಾನ (Psychology):ಪರಿಸರ ಅಧ್ಯಯನ (Environmental Studies): ಸೂಕ್ಷ್ಮಕಲೆಗಳು (Fine Arts): ಸಾಮಾಜಿಕ ಕೆಲಸ (Social Work): ಸಾರ್ವಜನಿಕ ಆಡಳಿತ (Public Administration): ಪುರಾತತ್ವ (Archaeology): ಕಾನೂನು (Law): ಬಿಎ ಎಲ್ಎಲ್ಬಿ (BA LLB)
ಬಿಎ ವಿಷಯ ಸಂಯೋಜನೆಗಳು (BA Subject Combinations):
ಸಿವಿಲ್ ಸರ್ವಿಸ್ ಆಕಾಂಕ್ಷಿಗಳು:-ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಇತಿಹಾಸ.
ಮೀಡಿಯಾ ವೃತ್ತಿಗಳು: -ಇಂಗ್ಲಿಷ್, ಪತ್ರಿಕಾರಚನೆ, ಮನೋವಿಜ್ಞಾನ.
ಬ್ಯಾಂಕಿಂಗ್ ಮತ್ತು ಹಣಕಾಸು:- ಅರ್ಥಶಾಸ್ತ್ರ, ಗಣಿತ, ಸಂಖ್ಯಾಶಾಸ್ತ್ರ.
ನೀತಿ ರೂಪಣೆ:-ಸಾರ್ವಜನಿಕ ಆಡಳಿತ, ತತ್ತ್ವಶಾಸ್ತ್ರ, ಇತಿಹಾಸ.
ಬಿಎ (ಹಾನರ್ಸ್) ಮತ್ತು ಬಿಎ ಜನರಲ್ (BA (Hons) vs. BA General):
ಬಿಎ ಪದವಿಯಲ್ಲಿ ಅಭಿವೃದ್ಧಿಯಾಗುವ ಕೌಶಲ್ಯಗಳು (Skills Developed in a BA Program):
ಸಮಾಲೋಚನಾ ಚಿಂತನೆ: ಮಾಹಿತಿಯನ್ನು ವಿಶ್ಲೇಷಿಸಿ, ತಾರ್ಕಿಕ ನಿರ್ಣಯ ಕೈಗೊಳ್ಳುವುದು.
ಸಂವಹನ ಕೌಶಲ್ಯಗಳು: ಪರಿಣಾಮಕಾರಿ ವಾಚಿಕ ಮತ್ತು ಲಿಖಿತ ಸಂವಹನ.
ಸಂಶೋಧನಾ ಕೌಶಲ್ಯಗಳು: ಸಂಶೋಧನೆ ನಡೆಸುವುದು, ಮಾಹಿತಿ ಸಂಗ್ರಹಿಸುವುದು ಮತ್ತು ವಿಶ್ಲೇಷಣೆ.
ಸಮಸ್ಯೆ ಪರಿಹಾರ ಸಾಮರ್ಥ್ಯಗಳು: ಸಮಸ್ಯೆಗಳನ್ನು ಗುರುತಿಸಿ ಪರಿಣಾಮಕಾರಿಯಾಗಿ ಪರಿಹರಿಸುವುದು.
ಇಷ್ಷೆಲ್ಲಾ ಪದವಿಗಳು , ವಿಷಯಗಳು ಕಲಿಯಲು ಅನೂಕುಲವಿದ್ದು ಆದರೂ ಕೆಲವೆ ಕೆಲವು ವೃತ್ತಿಯನ್ನು ಆಯ್ದುಕೊಂಡು ನಿರುದ್ಯೊಗಿಗಳಾಗಿ ಇರುವುದಕ್ಕಿಂತ ಹೊಸ ಹೊಸ ವಿಷಯಗಳನ್ನು ಅಧ್ಯಯನ ಮಾಡುವುದು ಸೂಕ್ತ ( ಎಂ .ಬಿ.ಬಿ ಎಸ್ ಮತ್ತು ಇಂಜಿನಿಯರಿಂಗ ನ ಬಗ್ಗೆ ಚಿಕ್ಕ ಹುಡುಗರಿಗು ಮಾಹಿತಿ ಈಗಿನ ಕಾಲದಲ್ಲಿದೆ ಆದರು ಮಾಹಿತಿ ಬೇಕಾದಲ್ಲಿ ಒದಗಿಸುತ್ತೇನೆ )
ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ವಿಷಯದ ಬಗ್ಗೆ ತೀಳಿಯೋಣ
ಧನುಷ ಭಟ್
