ರಾಜಕೀಯದ ಐಕಾನ್ ರಾಮಕೃಷ್ಣ ಹೆಗಡೆ

ಆದ್ಯೋತ್ ಸುದ್ದಿನಿಧಿ:
.೨೯ಕ್ಕೆ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ರಾಜ್ಯ ಕಂಡ ಮುತ್ಸದ್ದಿ,ಮೌಲ್ಯಾಧಾರಿತ ರಾಜಕಾರಣಿ ರಾಷ್ಟ್ರನಾಯಕ ರಾಮಕೃಷ್ಣ ಹೆಗಡೆಯವರು ಬದುಕಿದ್ದರೆ ಈ ವರ್ಷ ನೂರನೇ ವರ್ಷ ಆರಂಭವಾಗುತ್ತಿತ್ತು. ಅವರ ಮುತ್ಸದ್ದಿತನ, ಚಾಣಾಕ್ಷ ಆಡಳಿತ ಎಲ್ಲರಿಗೂ ನೆನಪಾಗುತ್ತದೆ. ವಿದ್ವಜ್ಜನರ ಮಧ್ಯೆ ಶ್ರೇಷ್ಠ ರಾಜನೀತಿಜ್ಞ ಸಾಹಿತಿಗಳ ಮಧ್ಯೆ ಸಹೃದಯಿ ವಿಮರ್ಶಕ, ಸಂಗೀತ ಗೋಷ್ಠಿಗಳಲ್ಲಿ ಆಸಕ್ತ ಶೋತೃ, ಕಲಾವಿದರ ಮಧ್ಯೆ ನುರಿತ ನಟನಾಗಿ ಕಾಣಿಸಿಕೊಂಡವರು ರಾಮಕೃಷ್ಣ ಹೆಗಡೆಯವರು. ದೇಶದ ಜನ ಸದಾ ಹೆಮ್ಮೆಪಡುವ ರಾಜಕಾರಣಿ.

ಪಂಚಾಯತ ರಾಜ ವ್ಯವಸ್ಥೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ರಾಮಕೃಷ್ಣ ಹೆಗಡೆಯವರನ್ನು ಅನುಕರಿಸಿ
ಅಂದಿನ ಪ್ರಧಾನಿ ರಾಜೀವ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿ ಇಡೀ ರಾಷ್ಟ್ರಕ್ಕೆ ಪಂಚಾಯತ ರಾಜ್ ವ್ಯವಸ್ಥೆಯನ್ನು ತಂದರು. ರಾಜ್ಯದಲ್ಲಿ ೧೮ ವರ್ಷದವರಿಗೆ ಮತಾಧಿಕಾರವನ್ನು ನೀಡಿದ್ದನ್ನು ಅನುಕರಿಸಿ ರಾಜೀವ ಗಾಂಧಿ ಇಡೀ ರಾಷ್ಟ್ರಕ್ಕೆ ಅದನ್ನು ಜಾರಿಗೊಳಿಸಿದರು. ಹೆಗಡೆ ಅರವತ್ತರ ದಶಕದಲ್ಲಿ ರಾಜ್ಯದ ಅರ್ಥ ಮಂತ್ರಿಯಾಗಿದ್ದಾಗ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯನ್ನು ಆರಂಭಿಸಿ ಬಜೆಟ್‌ನಲ್ಲಿ ಹಣವನ್ನು ನಿಗದಿಪಡಿಸಿದರು. ಅದನ್ನು ಅನುಕರಿಸಿ ಎಲ್ಲ ರಾಜ್ಯಗಳಲ್ಲೂ ಹಾಗೂ ಕೇಂದ್ರದಲ್ಲೂ ಕ್ರೀಡಾ ಇಲಾಖೆ ಬಂದಿರುವದನ್ನು ಗಮನಿಸಬೇಕು. ಇದರಿಂದಾಗಿ ಓಲಂಪಿಕ್ ನಲ್ಲಿ ಬೆರಳೆಣಿಕೆಯ ಪದಕಗಳಾದರೂ ದೇಶಕ್ಕೆ ದೊರೆಯುತ್ತಿವೆ.

ದುರ್ಬಲರಿಗೆ ಪ್ರಭುತ್ವದ ನೆರವು ಹೇಗಿರಬೇಕೆಂಬುದನ್ನು ತಮ್ಮ ಕಾರ್ಯಕ್ರಮಗಳ ಮೂಲಕ ತೋರಿಸಿದವರು ರಾಮಕೃಷ್ಣ ಹೆಗಡೆ.ಹೀಗೆ ನಾಡಿನ ಪ್ರೀತಿಯ ನಾಯಕ ರಾಮಕೃಷ್ಣ ಹೆಗಡೆಯವರ ಬದುಕು, ಸಾಧನೆಗಳನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ.

ರಾಮಕೃಷ್ಣ ಹೆಗಡೆಯವರ ಬದುಕು-ಸಾಧನೆ ಕುರಿತು ಅಗಸ್ಟ್೨೯-೨೦೨೫ ರಿಂದ ಅಗಸ್ಟ್೨೯-೨೦೨೬ರವರೆಗೆ ವರ್ಷವಿಡಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಮಕೃಷ್ಣ ಹೆಗಡೆ ಚಿರಂತನ ಸಂಸ್ಥೆ ನಿಶ್ಚಯಿಸಿದೆ.
ಈ ಕುರಿತು ಮಾಹಿತಿ ನೀಡಿದ ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ,ಅ.೨೯ರಂದು ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿಯ ಆವಾರದಲ್ಲಿ ದೇಶಕಂಡ ಧೀಮಂತ ನಾಯಕ ದಿ.ರಾಮಕೃಷ್ಣ ಹೆಗಡೆಯವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಹಾಗೂ ನೂತನ ಆರ್ಥಿಕ ಸಂಸ್ಥೆ ಚೇತನಾ ಕ್ರೆಡಿಟ್ ಕೋ-ಅಪರೇಟಿವ ಸೌಹಾರ್ದ ಸೋಸ್ಯಟಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ.ಒಂದು ವರ್ಷದವರೆಗೆ ನಮ್ಮ ವ್ಯಾಪ್ತಿಯಲ್ಲಿ ಹೆಗಡೆಯವರ ಜನ್ಮಶತಮಾನೋತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಈ ಕಾರ್ಯಕ್ರಗಳು ಕೇವಲ ಹೆಗಡೆಯವರ ಗುಣಗಾನ ಮಾಡಲು ಸೀಮಿತವಾಗಿರದೆ, ಅವರ ಆಡಳಿತ ವೈಖರಿ, ಹೆಜ್ಜೆ ಗುರುತುಗಳು, ಅವರ ತತ್ವ ಸಿದ್ಧಾಂತಗಳನ್ನು ಜೀವಂತವಾಗಿರಿಸುವ ಪ್ರಯತ್ನ ಮಾಡಲಿದ್ದೇವೆ.ರಾಮಕೃಷ್ಣ ಹೆಗಡೆಯವರು ಕೇವಲ ನಮ್ಮ ತಾಲೂಕಿಗೆ,ಜಿಲ್ಲೆಗೆ ಸೀಮಿತವಾದ ವ್ಯಕ್ತಿತ್ವದವರಲ್ಲ ಅವರು ರಾಜಕಾರಣದ ಐಕಾನ್ ಆಗಿದ್ದರು. ಮೌಲ್ಯಯುತ ಆಡಳಿತ,ಆರೋಪ ಮುಕ್ತ ಆಡಳಿತವನ್ನು ನೀಡಿದವರು. ರಾಜಕೀಯ ನೈತಿಕತೆಯ ಆರೋಪ ಬಂದಾಗ ರಾಜಿನಾಮೆ ನೀಡುವ ಮೂಲಕ ಎತ್ತಿಹಿಡಿದಿದ್ದರು ಇಂತಹವರ ಜನ್ಮಶತಮಾನೋತ್ಸವವನ್ನು ದೇಶಾದ್ಯಂತ ಆಚರಿಸುವುದು ಒಳ್ಳೆಯದು ಎಂದು ಹೇಳಿದರು.

ಸಮಾರಂಭವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಉದ್ಘಾಟಿಸಲಿದ್ದಾರೆ. ಮುಖ್ಯಅಭ್ಯಾತಗರಾಗಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಸ್ಥಳೀಯ ಮುಖಂಡ ಕೆ ಜಿ ನಾಯ್ಕ ಹಣಜೀಬೈಲ್ ಉಪಸ್ಥಿತರಿರುತ್ತಾರೆ.ಕಾರ್ಯಕ್ರಮದಲ್ಲಿ ಹೆಗಡೆಯವರ ಒಡನಾಡಿಗಳಾದ ಪಿ ಎಸ್ ಭಟ್‌ಉಪ್ಪೋಣಿ, ಜಿ ಎಂ ಹೆಗಡೆ ಮುಳಖಂಡ, ಗೋಪಾಲಕೃಷ್ಣ ಹೆಗಡೆ ಮುರೇಗಾರ, ಸಿ ಕೆ ಅಶೋಕ ಮೈನಳ್ಳಿ ಇವರುಗಳಿಗೆ ಗೌರವಿಸಲಾಗುವುದು. ಪ್ರಮೋದ ಹೆಗಡೆ ಯಲ್ಲಾಪುರ ಅಭಿನಂದನಾ ನುಡಿಗಳನ್ನಾಡುವರು. ಸಭೆಯಲ್ಲಿ ನಮ್ಮೊಂದಿಗೆ ಶಿರಸಿ ಟಿಎಸ್‌ಎಸ್‌ಅಧ್ಯಕ್ಷಗೋಪಾಲಕೃಷ್ಣ ವೈದ್ಯ, ಶಿರಸಿ ಟಿಎಂಎಸ್‌ಅಧ್ಯಕ್ಷ ಜಿ ಟಿ ಹೆಗಡೆತಟ್ಟೀಸರ, ಸ್ಥಳೀಯ ಟಿಎಂಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳೇಸರ, ಉತ್ತರಕನ್ನಡ ಸಹಕಾರಿಯೂನಿಯನ್ ಅಧ್ಯಕ್ಷ ವಿ ಎನ್ ಭಟ್ ಅಳ್ಳಂಕಿ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ಇದೇ ವೇದಿಕೆಯಲ್ಲಿ ನೂತನಆರ್ಥಿಕ ಸಂಸ್ಥೆಯಾದಚೇತನಾಕ್ರೆಡಿಟ್‌ಕೋ-ಆಪರೇಟಿವ್ ಸೌಹಾರ್ದ ಸೊಸೈಟಿ ಉದ್ಘಾಟನೆಗೊಳ್ಳಲಿದೆ.ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದವರು ಜಿಲ್ಲೆಯಲ್ಲಿ ಬಹಳಷ್ಟು ಜನರಿದ್ದಾರೆ. ಆದರೆ ಶಿಕ್ಷಣ,ಪ್ರಿಂಟಿAಗ್,ಆರ್ಥಿಕ ಕ್ಷೇತ್ರದಲ್ಲಿ ಸಹಕಾರಿ ತತ್ವವನ್ನು ಅಳವಡಿಸಿಕೊಂಡು ಯಶಸ್ವಿಯಾದವರು ದಿ.ಗಣೇಶ ಹೆಗಡೆಯವರು. ಅವರ ತತ್ವ,ಆದರ್ಶಗಳನ್ನು ಇಟ್ಟುಕೊಂಡು ನಾವು ಸೊಸೈಟಿ ಆರಂಭಿಸುತ್ತಿದ್ದೆವೆ.ಬಸವರಾಜ ಹೊರಟ್ಟಿಉದ್ಘಾಟಿಸಲಿದ್ದು, ಶಿವರಾಮ ಹೆಬ್ಬಾರ್ ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ನೀಡುವರು.ಕರ್ನಾಟಕರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ ನಂಜನಗೌಡ, ಕಾರವಾರ ಸಹಕಾರಿಇಲಾಖೆಯ ಉಪನಿಬಂಧಕ ಮಂಜುನಾಥ ಉಪಸ್ಥಿತರಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಚೇತನಾಕ್ರೆಡಿಟ್‌ಕೋ-ಆಪರೇಟಿವ್ ಸೌಹಾರ್ದ ಸೊಸೈಟಿಯಉಪಾಧ್ಯಕ್ಷ ಶ್ರೀಪಾದ ನಾರಾಯಣ ರಾಯ್ಸದ್, ನಿರ್ದೇಶಕರುಗಳಾದ ರಾಮಕೃಷ್ಣ ಹೆಗಡೆ ಐನಕೈ, ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ, ಚಂದ್ರಶೇಖರ ಭಟ್ಟ ಬಳಗುಳಿ, ದೇವರಾಯ ನಾಯ್ಕ ಕಂವಚೂರು, ರಾಘವೇಂದ್ರ ಭಟ್ಟ ಹೊಸೂರು ಉಪಸ್ಥಿತರಿದ್ದರು.

About the author

Adyot

Leave a Comment