ಸಿದ್ದಾಪುರ “ಸರ್ವಂ ಸಂಸ್ಥೆ”ಗೆ ಶ್ರೇಷ್ಠ ರಪ್ತು ಪ್ರಶಸ್ತಿ

ಆದ್ಯೋತ್ ಸುದ್ದಿನಿಧಿ
ಸಿದ್ದಾಪುರದ “ಸರ್ವಂ ಆರ್ಗೈನಿಕ್
ಪ್ರೈವೆಟ್ ಲಿ.” ಕಂಪನಿಗೆ 2025ನೇ ಸಾಲಿನ ರಪ್ತು ಶ್ರೇಷ್ಠತಾ ಪ್ರಶಸ್ತಿ ದೊರಕಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಂಟಿಯಾಗಿ ನೀಡುವ ಈ ಪ್ರಶಸ್ತಿಯನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮೂಲಕ ಪ್ರತಿವರ್ಷ ನೀಡಲಾಗುತ್ತಿದೆ.

ಸರ್ವಂ ಸಂಸ್ಥೆ ಕಳೆದ ಹದಿನೈದು ವರ್ಷದಿಂದ ಕಾಫಿ ಮತ್ತು ಸಾಂಬಾರ ಪದಾರ್ಥವನ್ನು ಮಂಗಳೂರು ಬಂದರು ಮೂಲಕ ರಪ್ತು ಮಾಡುತ್ತಿದೆ ಈ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾದ ರಾಘವೇಂದ್ರ ಶಾಸ್ತ್ರಿ ಹಾಗೂ ಸಿದ್ದಾರ್ಥ ಹೆಗಡೆ ತಿಳಿಸಿದ್ದಾರೆ.

ಸೆ.2ಮಂಗಳವಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರುವ ಎಂ.ವಿ.ಅಡಿಟೋರಿಯಂನಲ್ಲಿ ನಡೆಯಲಿದೆ. ಕೈಗಾರಿಕಾ ಸಚೀವ ಎಂ.ಬಿ.ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಅಧ್ಯಕ್ಷತೆವಹಿಸಲಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ.

About the author

Adyot

Leave a Comment