
ಆದ್ಯೋತ್ ಸುದ್ದಿನಿಧಿ:
ಧಾರವಾಡದ ಕರ್ನಾಟಕ ಅಂಗನವಾಡಿ ಸ್ತ್ರೀಶಕ್ತಿ ಸಹಕಾರಿ ಸಂಘದ (ನಿ) ಧಾರವಾಡ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಮಹಾಸಭೆಯು ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆವಹಿಸಿದ್ದ ಅಖಿಲ ಭಾರತ ಶಿಕ್ಷಕರ ಪೆಡರೇಷ್ ನ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಶಿಕ್ಷಕ ಕ್ಷೇತ್ರದಲ್ಲಿ ಶ್ರಮಿಕ ವರ್ಗ ಎಂದೆ ಕರೆಯಿಸಿಕೊಡಿರುವ ಅಂಗನವಾಡಿ ಶಿಕ್ಷಕಿಯರ ಮತ್ತು ಸಹಾಯಕಿಯರ ಆರ್ಥಿಕ ಅಭಿವೃದ್ಧಿಗಾಗಿ ಸಹಕಾರಿ ಸಂಘ ಸ್ಥಾಪಿಸಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಸಹಕಾರಿ ಸಂಘದ ಅಭಿವೃದ್ದಿಗೆ ಶ್ರಮಿಸಬೇಕು.ಕಡಿಮೆ ವೇತನ ಪಡೆಯುತಿದ್ದರು ಸಹ ಸಮಾಜಮುಖಿಯಾಗಿ ಕ್ರೀಯಾಶೀಲವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರ ಸೇವೆ ಶ್ಲಾಘನೀಯ ಸರಕಾರದ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಕೆಳಹಂತದಲ್ಲಿ ಜನರಿಗೆ ತಲುಪಿಸುವ ಅನುಷ್ಠಾನಗೊಳಿಸುವ ಗುರುತರ ಜವಾಬ್ದಾರಿ ಕಾರ್ಯವನ್ನು ನಿಷ್ಟೆಯಿಂದ ಮಾಡುತ್ತಾರೆ ದಿನವಿಡಿ ದುಡಿಯುವ ವರ್ಗ ಇವರದಾಗಿದೆ ಅಂಗನವಾಡಿ ಶಿಕ್ಷಕಿಯರಿಗೆ ಸಹಾಯಕಿಯರಿಗೆ ಇನ್ನೂ ಹೆಚ್ಚಿನ ಪುರಸ್ಕಾರ ಸರಕಾರ ಸಮಾಜದಿಂದ ದೊರಕಬೇಕಾಗಿದೆ. ಸಹಕಾರಿ ಸಂಘದಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಗುರಿಕಾರ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಮಾಣ ಇಲಾಖೆಯ ದಾರವಾಡ ಜಿಲ್ಲಾ ಉಪನಿರ್ದೇಶಕಿ ಡಾ ಹುಲಿಗೆಮ್ಮ ಕುಕನೂರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಷ್ಟೆ ಕೆಲಸದ ಒತ್ತಡ ಇದ್ದರು ಸಹ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಅಭಿವೃದ್ಧಿಗಾಗಿ ಶ್ರಮಿಸುತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ಸಹಾಯಕಿಯರಿಗೆ ಅವರ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು, ಉಚಿತ ಆರೋಗ್ಯ ಶಿಬಿರವನ್ನು ದಾರವಾಡ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರು ನೆರವೆರಿಸಿದರು.
ಕಾರ್ಯದರ್ಶಿ ರತ್ನಾ ಶಿರೂರ ಸ್ವಾಗತಿಸಿದರು. ಅದ್ಯಕ್ಷೆ ಶಿಲ್ಪಾ ಮಂಜುನಾಥ ಕಂಬಳಿ ಪ್ರಾಸ್ತವಿಕವಾಗಿ ಮಾತನಾಡಿದರು ಸವಿತಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆ ಮೇಲೆ ಚೆನ್ನಕ್ಕ ಅಂಗಡಿ ಭಾರತಿ ಹಳೇಮನಿ ಕಸ್ತೂರಿ ಬೇಂದ್ರೆ ವಿಜಯಲಕ್ಷ್ಮೀ ಹಿರೇಮಠ ಮಂಜುಳಾ ಯಡ್ರಾವಿ ಶಿವಲೀಲಾ ನಡೂರ ಮಠ ನಾಗಮ್ಮ ಒಣ ರೋಟ್ಟ ನಿರ್ಮಲಾ ಕುಲಕರ್ಣ ಲತಾ ಗೊಡಕೆ ಇತರರು ಉಪಸ್ಥಿತರಿದ್ದರು.
