ಆದ್ಯೋತ್ ಸುದ್ದಿನಿದಿ;
ಸಿದ್ದಾಪುರದ ಬಾಲಭವನದಲ್ಲಿ ಸ್ಥಳೀಯ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಆರ್.ನಾಯ್ಕ ಮಾತನಾಡಿ,ಹಿಂದೆಯಲ್ಲ ಅವಿಭಕ್ತ ಕುಟುಂಬ ಇರುತ್ತಿತ್ತು ಅಲ್ಲಿ ಹಿರಿಯರಿಗೆ ಗೌರವ ಮಾನ,ಸಮ್ಮಾನ ಇರುತ್ತಿತ್ತು. ತಂದೆ-ತಾಯAದಿರು ದೇವರಿಗಿಂತ ಹೆಚ್ಚು ಎಂಬ ಭಾವನೆಯಿತ್ತು. ಆದರೆ ನಾಗರಿಕ ಸಮಾಜ ಮುಂದುವರಿದAತೆ ನಾಗರಿಕತೆಯನ್ನು ಮರೆತು ಸಂಕುಚಿತ ಹಾಗೂ ಸ್ವಾರ್ಥ ಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದೆವೆ. ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಹೆಚ್ಚಾಗುತ್ತಿದೆ ಇಂದು ಹಿರಿಯರ ಮೇಲೆ ಹಿಂಸೆ,ದೌರ್ಜನ್ಯ, ಅಸಮಾನತೆ ಹೆಚ್ಚಾಗುತ್ತಿದೆ ಇದನ್ನು ಮನಗಂಡು ವಿಶ್ವಸಂಸ್ಥೆ ೧೯೯೦ರಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಲಾಯಿತು. ಹಿರಿಯ ನಾಗರಿಕರಿಗೆ ಸರಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ವೃದ್ಧಾಪ್ಯ ವೇತನ,ಸಹಾಯವಾಣಿ ಸೇವೆ,ಬಸ್,ರೇಲ್ವೆಯಲ್ಲಿ ರಿಯಾಯತಿ,ಆರೋಗ್ಯ ಸಂಬAಧಿತ ಸೇವೆಗಳು ಇತ್ಯಾದಿ ನೀಡುತ್ತಿದೆ ಇಂತಹ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಆಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಘ ಪ್ರಾರಂಭವಾಗಿ ೧೫ ವರ್ಷವಾಗಿದೆ ಇಲ್ಲಿಯವರೆಗೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಾವು ನಡೆಸಿಕೊಂಡು ಬಂದಿದ್ದೆವೆ ಗ್ರಾಪಂಗಳಲ್ಲಿ ಗ್ರಾಮೀಣ ಶಾಲೆಗಳಲ್ಲಿ ಮಳೆಕೊಯ್ಲು ವಿಧಾನ ಅಳವಡಿಕೆ,ಶೌಚಾಲಯ ನಿರ್ಮಾಣ ಹಾಗೂ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವನಮಹೋತ್ಸವ,ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸುತ್ತಿದ್ದೆವೆ ಎಲ್ಲಾ ರಾಷ್ಟಿçÃಯ ಹಬ್ಬಗಳಲ್ಲೂ ನಮ್ಮ ಸಂಘದ ಸದಸ್ಯರು ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ. ಹಲವು ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. ಕಳೆದ ನಾಲ್ಕು ವರ್ಷದಿಂದ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಯ ಮಾಹಿತಿ ಕಾರ್ಯಾಲಯವನ್ನು ನಡೆಸಲಾಗುತ್ತಿದೆ. ಇದರಿಮದ ಕೇವಲ ಹಿರಿಯ ನಾಗರಿಕರಿಗಷ್ಟೆ ಅಲ್ಲ ಎಲ್ಲಾ ಸಾರ್ವಜನಿಕರಿಗೂ ಅನುಕೂಲವಾಗಿದೆ. ಪ್ರತಿವರ್ಷ ಹಿರಿಯ ನಾಗರಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಸರಕಾರ ಈ ಹಿರಿಯ ನಾಗರಿಕರ ದಿನಾಚರಣೆಯನ್ನು ನಡೆಸುವಂತೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಸಂಘಟನೆಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ವೀಣಾಜಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಹೆಗಡೆ ಕೊಳಗಿ,ಲಯನ್ಸ್ ಅಧ್ಯಕ್ಷ ರಾಘವೇಂದ್ರ ಭಟ್ಟ,ಉಪಾಧ್ಯಕ್ಷ ಎನ್.ವಿ.ಹೆಗಡೆ,ಕಾರ್ಯದರ್ಶಿ ವಾಸುದೇವ ಶೇಟ್, ಉಪಸ್ಥಿತರಿದ್ದರು.
ಜಿ.ಜಿ.ಹೆಗಡೆ ಬಾಳಗೋಡ ನಿರೂಪಣೆ ಮಾಡಿದರು. ಅನ್ನಪೂರ್ಣ ಭಟ್ಟ ಪ್ರಾರ್ಥನೆ ಹಾಡಿದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
