ಆದ್ಯೋತ್ ಸುದ್ದಿನಿಧಿ;
ಸಿದ್ದಾಪುರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಟಗಿ ಗ್ರಾಮ ಪಂಚಾಯತ್ ಹಾಗೂ ಆಲಳ್ಳಿ ನಾಗರಿಕರ ಸಹಕಾರದೊಂದಿಗೆ ಶನಿವಾರ ಆಲಳ್ಳಿ ಸಭಾಂಗಣದಲ್ಲಿ ಪೋಷಣಾ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಎಎಸ್ಐ ರಮೇಶ್ ಗೌಡ ಮಾತನಾಡಿ, ತಿಳುವಳಿಕೆ ಇರುವವರೇ ಇಂದು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿರುವದನ್ನ ನಾವು ಕಾಣುತ್ತಿದ್ದೆವೆ, ಮಕ್ಕಳು ಅತ್ಯಾಚಾರಕ್ಕೆ ಒಳಗಾಗುವ ಸನ್ನಿವೇಶ ಕಂಡುಬರುತ್ತಿವೆ, ಪೋಷಕರು ಜಾಗೃತಿವಹಿಸಿ ಮಕ್ಕಳಲ್ಲಿ ಅರಿವು ಮೂಡಿಸಬೇಕು, ತಿಳುವಳಿಕೆ ನೀಡಿ ಆಗುವ ಅನಾಹುತ ತಡೆಗಟ್ಟಬೇಕು ಇಲಾಖೆಗಳ ಸಹಕಾರ ಯಾವತ್ತು ನಿಮ್ಮೊಂದಿಗೆ ಇರುತ್ತದೆ ಎಂದ ಅವರು ಕಡ್ಡಾಯ ಶಿಕ್ಷಣ, ಬಾಲ ಕಾರ್ಮಿಕ, ದುಶ್ಚಟಗಳ ಕುರಿತು ಮಾಹಿತಿ ನೀಡಿದರು.
ಸಿ ಡಿ ಪಿ ಒ ಇಲಾಖೆ ಮೇಲ್ವಿಚಾರಕಿ ಕವಿತಾ ಪ್ರಾಸ್ತಾವಿಕ ಮಾತನಾಡಿ ಇಲಾಖೆ ಸೌಲಭ್ಯ ಮಾಹಿತಿ ನೀಡಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣ ತಡೆಯುವಂತೆ ಅರಿವು ಮೂಡಿಸಿದರು
ಕ್ಯಾದಗಿ ಪ್ರಾ ಅರೋಗ್ಯ ಕೇಂದ್ರ ವೈಧಾಧಿಕಾರಿ ವೀರೇಂದ್ರ ಕಲಾಲ್ ಮಾತನಾಡಿ ಒಂದು ತಿಂಗಳಿನಿAದ ೯ ತಿಂಗಳ ಗರ್ಭಿಣಿಯರು ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಪ್ರತಿ ತಿಂಗಳು ೯ನೇ ತಾರೀಕು ನಮ್ಮ ಆಸ್ಪತ್ರೆಯಲ್ಲಿ ಶಿಬಿರ ಇರುತ್ತದೆ ನಿರ್ಲಕ್ಷ ಮಾಡಬಾರದು ಬಾಣಂತಿಯರು ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಆರೋಗ್ಯದ ಖಾಳಜಿಯನ್ನುವಹಿಸಬೇಕು ಎಂದು ಹೇಳಿದರು.

ಗ್ರಾಪಂ ಸದಸ್ಯ ಸುರೇಂದ್ರ ಗೌಡ.ವೆಂಕಟರಮಣ ನಾಯ್ಕ್,ಪಾರ್ವತಿ ನಾಯ್ಕ್ ಮಾತನಾಡಿದರು.
ವರ್ತೆಕೊಡ್ಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶೋಭಾ ನಾಯ್ಕ್ ಸ್ವಾಗತಿಸಿದರು. ಹರಕನಹಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸೌಮ್ಯ ಶ್ರೀ ವಂದಿಸಿದರು.ವಾಟಗಾರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಶಿಕಲಾ ನಾಯ್ಕ್ ನಿರೂಪಿಸಿದರು.
ಅನ್ನಪ್ರಾಷಣ, ಹುಟ್ಟುಹಬ್ಬ ಆಚರಣೆ, ನವ ದಂಪತಿಗಳಿಗೆ ಸ್ವಾಗತ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮ ಆಯೋಜನೆಗೆ ಕ್ರಿಯಾಶೀಲರಾಗಿ ಎಲ್ಲರನ್ನ ಒಗ್ಗೂಡಿಸಿ ಯಶಸ್ವಿಯಾಗಿ ನಡೆಸಿಕೊಟ್ಟು ಮಾದರಿಯಾದ ವಾರ್ಡ್ ಸದಸ್ಯೆ ಪಾರ್ವತಿ ನಾಯ್ಕ್ರವರನ್ನು ಓಂನಮಃಶಿವಾಯ ಧರ್ಮಸ್ಥಳ ಸಂಘ, ಮೈಲಮ್ಮ ಸ್ತ್ರೀಶಕ್ತಿ ಸಂಘ,ಅನುಬAಧ ಸಂಜೀವಿನಿಸAಘ ಹಾಗೂ ಸ್ಥಳೀಯರು ಸೇರಿ ಸನ್ಮಾನಿಸಿದರು.




