ಸಿದ್ದಾಪುರ ಹಾಗೂ ಹಾರ್ಸಿಕಟ್ಟಾದಲ್ಲಿ ಉಚಿತ ಆರೋಗ್ಯ ಶಿಬಿರ

ಆದ್ಯೋತ್‌ಸುದ್ದಿನಿಧಿ;
ಮಂಗಳೂರಿನ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಇವರಿಂದ ಸಿದ್ದಾಪುರ ಶಂಕರಮಠ ಹಾಗೂ ಹಾರ್ಸಿಕಟ್ಟಾ ವ್ಯವಸಾಯಸೇವಾ ಸಹಕಾರಿ ಸಂಘದಲ್ಲಿ ನ.೧ ಹಾಗೂನ.೨ ರಂದು ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಂಕರಮಠದಧರ್ಮಾಧಿಕಾರಿ ವಿಜಯ ಹೆಗಡೆದೊಡ್ಮನೆ,ನ.೧ರಂದು ಬೆಳಗ್ಗೆ ೯ರಿಂದ ಮಧ್ಯಾಹ್ನ ೧ರವರೆಗೆ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘ, ಗಜಾನನೋತ್ಸವ ಸಮಿತಿ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಹಾರ್ಸಿಕಟ್ಟಾ ಇವರಸಹಕಾರದಲ್ಲಿ ಮತ್ತು ನ.೨ರಂದು ಸಿದ್ದಾಪುರದ ಶೃಂಗೇರಿ ಶಂಕರಮಠ, ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಲಯನ್ಸ್ಕ್ಲಬ್ ಸಿದ್ದಾಪುರ ಇವುಗಳ ಸಹಕಾರದಲ್ಲಿ ಶಂಕರಮಠದಲಿ ್ಲಉಚಿತಆರೋಗ್ಯ ಶಿಬಿರ ಬೆಳಗ್ಗೆ ೧೦ರಿಂದ ೧ರವರೆಗೆ ನಡೆಯಲಿದೆ.ಶಿಬಿರದಲ್ಲಿ ಕಿವಿ, ಮೂಗು, ಗಂಟಲುತಜ್ಞೆ ಡಾ.ಮೀರಾ ಎಂ.ನಂದಕುಮಾರ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಷ
ಡಾ.ರಂಜಿತಾ ಮಡಮಕ್ಕಿ, ವ್ಯೆದ್ಯಕೀಯತಜ್ಞ ಡಾ.ಸಾಯಿ ಮಣಿಚರಣ್, ಎಲುಬು ಮತ್ತು ಕೀಲು ತಜ್ಞ ಡಾ.ಪ್ರಥ್ವಿ ಕೆ.ಪಿ, ಶಸ್ತ್ರಚಿಕಿತ್ಸಾತಜ್ಞ ಡಾ.ರಾಹೂಲ್‌ಕುಮಾರ್ ವರ್ವಾಟ್ಟಿ ಪಾಲ್ಗೊಳ್ಳಲಿದ್ದಾರೆ.ವೈದ್ಯರು ಸೂಚಿಸಿದವರಿಗೆ ರಕ್ತದಒತ್ತಡ, ಮಧುಮೇಹ ಪರೀಕ್ಷೆ ಹಾಗೂ ಈಸಿಜಿ ಪರೀಕ್ಷೆ ನಡೆಸಲಾಗುತ್ತದೆ.ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ. ಶಿಬಿರಕ್ಕೆ ಆಗಮಿಸುವಾಗ ಫಲಾನುಭವಿಗಳು ತಮ್ಮಆಧಾರಕಾರ್ಡ ತರಬೇಕು.ಶಿಬಿರದಲ್ಲಿ ಕ್ಷೇಮ ಹೆಲ್ತ್ ಕಾಡ್೯ ನೋಂದಾವಣೆ ಮಾಡಲಾಗುತ್ತದೆ.ಶಿಬಿರಕ್ಕೆ ತಾಲೂಕು ಸರ್ಕಾರಿಆಸ್ಪತ್ರೆ, ಅಂಗನವಾಡಿಕಾರ್ಯಕರ್ತೆಯರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಸಹಕಾರ ನೀಡಲಿದ್ದಾರೆಎಂದು ಹೇಳಿದರು.

ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಮಾತನಾಡಿಗ್ರಾಮೀಣ ಪ್ರದೇಶದಲ್ಲಿ ನಡೆಯಲಿರುವಉಚಿತಆರೋಗ್ಯ ಶಿಬಿದ ಪ್ರಯೋಜನವನ್ನುಎಲ್ಲರುಪಡೆದುಕೊಳ್ಳಬೇಕು.ಈಗಾಗಲೇ ಸಂಘದಲ್ಲಿ ಸಹಕಾರಿ ಆರೋಗ್ಯ ಸೇವೆಯನ್ನು ನಡೆಸಲಾಗುತ್ತಿದ್ದು ಅವಶ್ಯಕತೆ ಇದ್ದವರಿಗೆ ವ್ಹಿಲ್‌ಚೇರ್ ವಾಕರ್,ಏರ್‌ಬೆಡ್,ವಾಟರ್ ಬೆಡ್,ನೆಬೊಲಯ್ಸರ್‌ನ್ನು ಉಚಿತವಾಗಿ ನೀಡಲಾಗುವುದು ಅವಶ್ಯಕತೆ ಮುಗಿದÀ ನಂತರ ಪುನಃ ಹಿಂದಿರುಗಿಸಬೇಕು ಇದರ ಪ್ರಯೋಜನವನ್ನು ಸಂಘದ ಸದಸ್ಯರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದಅಧ್ಯಕ್ಷ ಸಿ.ಎಸ್.ಗೌಡರ್, ಲಯನ್ಸ್ ಅಧ್ಯಕ್ಷರಾಘವೇಂದ್ರ ಭಟ್ಟ ಸ್ವಸ್ತಿಕ್ ಕಲ್ಲಾಳ ಉಪಸ್ಥಿತರಿದ್ದರು.

About the author

Adyot

Leave a Comment