ಶಿರಸಿಯ ಶರ್ವಾಣಿ ಎಂ.ಟೆಕ್ ನಲ್ಲಿ ಸಾಧನೆ

ಆದ್ಯೋತ್ ಸುದ್ದಿನಿಧಿ
ಶಿರಸಿಯ ಸಾಮಾಜಿಕ ಕಾರ್ಯಕರ್ತ ಸತೀಶ ನಾಯ್ಕ್ ಮಧುರವಳ್ಳಿ ಮತ್ತು ಮಾರಿಕಾಂಬಾ ಪಿ ಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ರತ್ನಮ್ಮ ಡಿ ಸಿ ಇವರ ಪುತ್ರಿ ಶರ್ವಾಣಿ ಎಸ್ ಇವಳು ಬೆಂಗಳೂರಿನ ದಯಾನಂದ ಸಾಗರ ವಿಶ್ವವಿದ್ಯಾಲಯಲ್ಲಿ ಎಂ ಟೆಕ್ ನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಎರಡನೇ ರಾಂಕ್ ಗಳಿಸಿ ವಿಶ್ವವಿದ್ಯಾಲಯಕ್ಕೆ ಮತ್ತು ಶಿರಸಿಗೆ ಗೌರವ ತಂದಿದ್ದಾಳೆ.

ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಮಾನ್ಯ ವೈಸ್ ಛಾನ್ಸಲರ್ ರಿಂದ ರ‌್ಯಾಂಕ್ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣಪತ್ರವನ್ನು ಪಡೆದಿರುತ್ತಾಳೆ.

ಶರ್ವಾಣಿ ನಗರದ ಎಂ ಇ ಎಸ್ ಚೈತನ್ಯ ಪಿ ಯು ಕಾಲೇಜಿನ ವಿದ್ಯಾರ್ಥಿನಿ. ಬಿ ಇ ಪದವಿಯನ್ನು ಶಿವಮೊಗ್ಗದ ಜವಾಹರಲಾಲ್ ನೆಹರು ನ್ಯಾಷನಲ್ ಇಂಜಿನಿಯರಿಂಗ್ ಕಾಲೇಜಿನಿಂದ ಪಡೆದಿರುತ್ತಾಳೆ.ಪ್ರತಿಭಾವಂತ ವಿದ್ಯಾರ್ಥಿನಿಯಾದ ಶರ್ವಾಣಿ ಎಸ್ ಇವಳ ಸಾಧನೆಗೆ ಹರ್ಷ ವ್ಯಕ್ತ ಪಡಿಸಿ ಅಭಿನಂದನೆ ಸಲ್ಲಿಸಿರುತ್ತಾರೆ..

About the author

Adyot

Leave a Comment