ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ಹೆಗ್ಗರಣಿಯ ಶ್ರೀ ಅನ್ನಪೂರ್ಣ ಸಭಾಭವನದಲ್ಲಿ ಶನಿವಾರ ಸ್ಥಳೀಯ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಅಘನಾಶಿನಿ ಉಳಿಸಿ ಜಾಗೃತಿ ಸಮಾವೇಶ ನಡೆಯಿತು.


ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು
ಮಾತನಾಡಿ,ಒಂದು ಯೋಜನೆಗಳನ್ನು ಕಾಯ೯ರೂಪಕ್ಕೆ ತರುವಾಗ ಅದರ ಸಾಧಕ-ಬಾಧಕಗಳನ್ನು, ಒಳಿತು- ಅವನತಿಯ ಸಾಧ್ಯತೆಗಳನ್ನು ನೋಡಬೇಕು.ಒಂದು ಯೋಜನೆಗಳನ್ನು ಕಾಯ೯ರೂಪಕ್ಕೆ ತರುವಾಗ ಅದರ ಸಾಧಕ-ಬಾಧಕಗಳನ್ನು, ಒಳಿತು- ಅವನತಿಯ ಸಾಧ್ಯತೆಗಳನ್ನು ನೋಡಬೇಕು ನದಿ ದಿಕ್ಕನ್ನು ತಿರುಚುವ ಯೋಜನೆಯು ಸಂಪೂಣ೯ ಅವೈಜ್ಞಾನಿಕವಾಗಿದ್ದು. ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಇದರಿಂದ ಯಾರಿಗು ಯಾವುದೆ ಪ್ರಯೋಜನವಿಲ್ಲ ಎಂಬ ಮಾತನ್ನಾಡುತ್ತಾ ಯೋಜನೆ ಸಿದ್ಧಪಡಿಸಿದ್ದಾರೆ ಆದರೆ ನದಿಯ ನೀರು ಹರಿಯುವ ಪ್ರದೇಶಗಳು ಜೀವವೈವಿದ್ಯವನ್ನು ಉಳಿಸಿಕೊಂಡಿರುತ್ತದೆ ಇದರ ಬಗ್ಗೆ ಯೋಜನೆ ಮಾಡುವವರು ಯೋಚಿಸುವುದಿಲ್ಲ ಇಂತಹ ಯೋಜನೆಗಳನ್ನು ವಿರೋಧಿಸುವುದು ಎಲ್ಲರ ಕರ್ತವ್ಯವಾಗಿದೆ. ಇದು ಯಾರ ವಿರುದ್ಧದ ಹೋರಾಟವಲ್ಲ ಇದು ಯೋಜನೆಯ ವಿರುದ್ಧದ ಹೋರಾಟ ಹಿಂದಿನ ಹೋರಾಟಗಳಲ್ಲಿ ಯಾರೂ ವಿರೋಧಿಸುತ್ತಿರಲಿಲ್ಲ ಆದರೆ ಈಗಿನ ಹೋರಾಟವನ್ನು ವಿರೋಧಿಸುವ ಸಂಭವವಿದೆ ಇದರಿಂದ ನಮ್ಮ ಧ್ವನಿ ಇನ್ನಷ್ಟು ಹೆಚ್ಚಬೇಕಾಗಿದೆ. ಜನರ ಜೊತೆಗೆ ಜನಪ್ರತಿನಿಧಿಗಳು ಕೈಜೋಡಿಸಬೇಕಾಗಿದೆ. ಯೋಜನೆ ನಿಲ್ಲುವವರೆಗೂ ಹೋರಾಟ ನಿರಂತರವಾಗಿರಬೇಕಾಗಿದೆ ಎಂದು ಹೇಳಿದರು.


ಶ್ರೀ ಮನ್ನೆಲೆಮಾವುಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಮಾತನಾಡಿ,ಐದು ದಶಕಗಳಿಂದ ಅಘನಾಶಿನಿ ಭೂತ ನಮ್ಮನ್ನು ಕಾಡುತ್ತಿದೆ.ಪ್ರತಿ ಹಂತದಲ್ಲೂ ಈ ಯೋಜನೆಯನ್ನು ವಿರೋಧಿಸಲಾಗಿದೆ ಈಗ ಪುನಃ ಈ ಯೋಜನೆ ಮುನ್ನೆಲೆಗೆ ಬಂದಿದೆ ಇದರಿಂದ ಈ ಭಾಗದ ವನ್ಯಜೀವಿಗಳಿಗೆ,ಮನುಷ್ಯ ರಿಗೆ ತೊಂದರೆಯಾಗುತ್ತದೆ ಇಂತಹ ಜನವಿರೋಧಿ ಯೋಜನೆಗಳನ್ನು ನಾವೆಲ್ಲರೂ ವಿರೋಧಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಾವು ಇಂದು ಹೋರಾಟದ ಸಭೆಯಲ್ಲಿ ಸೇರಿದ್ದೆವೆ. ಹೊರಾಟ ಮನಸ್ಥಿತಿ ರೂಪಗೊಳ್ಳಬೇಕು. ಈ ಪ್ರಮಾಣದಲ್ಲಿ ಜನಜಾಗೃತರಾದರೆ ಕೇಂದ್ರ ಸರ್ಕಾರ ಇರಲಿ ರಾಜ್ಯ ಸರ್ಕಾರ ಇರಲಿ ಸಾರ್ವಜನಿಕರ ಮಾತನ್ನು ಕೇಳಲೇ ಬೇಕಾಗುತ್ತದೆ . ನಮ್ಮ ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರ ಕೊಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಸ್ವಾಮೀಜಿಗಳ ನೇತೃತ್ವ ಮತ್ತು ಆಶೀರ್ವಾದದಿಂದ ನಾವೆಲ್ಲರೂ ಸಂಘಟಿತರಾಗಿ,ಜಾಗೃತರಾಗಿ ಅನ್ಯಾಯದ ವಿರುದ್ಧ ಹೆಜ್ಜೆಯಿಡಬೇಕು. ನಮ್ಮ ಜಿಲ್ಲೆಗೆ ಮಾರಕವಾಗಿ ಬಂದಿರುವ ಬೇಡ್ತಿ, ಶರಾವತಿ, ಅಘನಾಶಿನಿ ಮೂರು ಪ್ರಮುಖ ಯೋಜನೆಗಳನ್ನು ವಿರೋಧಿಸಲು ನಾವು ಇಲ್ಲಿ ಸೇರಿದ್ದೇವೆ . ಅಘನಾಶಿನಿಯನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ ನಮ್ಮ ಮಲೆನಾಡ ಭಾಗವನ್ನು ಮರಳು ಭೂಮಿಯನ್ನಾಗಿ ಮಾಡಬಾರದು ಎಂಬ ಉದ್ದೇಶ ಹಾಗು ದೃಡ ಸಂಕಲ್ಪದಿಂದ ನಾವು ಇಲ್ಲಿ ಸೇರಿದ್ದೇವೆ . ಮೂರು ಯೋಜನೆಗಳು ಏಕಕಾಲಕ್ಕೆ ನಮ್ಮ ಜಿಲ್ಲೆಗೆ ಅಪ್ಪಳಿಸಿದು ನುಂಗಲಾರದ ತುತ್ತಾಗಿದೆ. ನಮ್ಮ ಜಿಲ್ಲೆ ಹಲವಾರು ವೈಶಿಷ್ಟತೆಯಿಂದ ಕೂಡಿದ್ದು. ಯೋಜನೆಗಳ ಹೆಸರಿನಲ್ಲಿ ನಮ್ಮ ಜಿಲ್ಲೆಯ ಜನ ನಿರಾಶ್ರಿತರನ್ನಾಗಿ ಮಾಡುವ ಕಾಯ೯ ನಡೇಯುತ್ತಿದೆ. ಇದನ್ನು ತಡೆಯುವ ಹೋರಾಟಕ್ಕೆ ನಾವು ಎಂದು ಹಿಂಜರಿಯುವುದಿಲ್ಲ ಎನ್ನುವುದನ್ನು ಸಾಭಿತು ಮಾಡಿಕೊಡಬೇಕಾಗಿದೆ. ನಮ್ಮ ಜಿಲ್ಲೆಯ ಭೂಮಿಯ ಸಾಮರ್ಥ್ಯದ ಬಗ್ಗೆ ಅಧ್ಯಯನ ಆಗೋವರೆಗೂ ನಮ್ಮ ಜಿಲ್ಲೆಗೆ ಯಾವುದೇ ಯೋಜನೆಗಳು ರೂಪುಗೊಳ್ಳಲುವುದು ಬೇಡ. ಇದರ ಬಗ್ಗೆ ಸ್ಥಳೀಯ ಸಂಸ್ಥೆಗಳು ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೇವಲ ಆವೇಶದಿಂದ ಮಾತ್ರವಲ್ಲದೆ ವೈಜ್ಞಾನಿಕವಾಗಿ, ಪುರಾವೆಗಳ ಮೂಲಕ ಆಧಾರಗಳ ಮೂಲಕ ವಿರೋಧಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿ, ನಾನು ಹಾಗೂ ಸಂಸದರು ಈಗಾಗಲೇ ಯೋಜನೆ ಕೈ ಬಿಡುವಂತೆ ಹಾಗು ಇದರಿಂದಾಗುವ ವಿನಾಶದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಯೋಜನೆಯನ್ನು ಕೈ ಬೀಡುವಂತೆ ಮನವಿಯನ್ನು ಸಲ್ಲಿಸಿದ್ದೆವೆ. ಇದು ಒಂದು ಅಸಾಧ್ಯವಾದ ಯೋಜನೆಯಾಗಿದ್ದು ಇದರಿಂದ ಆಗುವ ಪರಿಸರ ಹಾಗು ಜೀವ ಸಂಕುಲಗಳ ಅವನತಿಯು ಊಹೆಗೂ ನಿಲುಕದ್ದು . ಇದರೊಂದಿಗೆ ನಮ್ಮ ಜಿಲ್ಲೆಯ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯಾದ ಅರಣ್ಯ ಅತಿಕ್ರಮಣ ಸಮಸ್ಯೆಯ ಕುರಿತು ಸಂಸದರು ಕೂಡ ಲೋಕಸಭೆಯಲ್ಲಿ ಧ್ವನಿ ಎತ್ತಬೇಕು. ಈ ಯೋಜನೆಯ ತಡೆಗಟ್ಟುವಲ್ಲಿ ನಾವೆಲ್ಲರೂ ಪಕ್ಷರಹಿತವಾಗಿ ಸೇರಿ ಹೋರಾಟ ಮಾಡಲೇಬೇಕು ನಾನು ಸಹ ಹೋರಾಟದಲ್ಲಿ ನಿಮ್ಮ ಧ್ವನಿಯಾಗಿ ನಿಮ್ಮ ಜೊತೆ ಇರುತ್ತೇನೆ ಎಂದರು

ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿ ,ಈಗಾಗಲೇ ಬೇಡ್ತಿ ಹಾಗೂ ಅಘನಾಶಿನಿ ಕಣಿವೆಗಳನ್ನ ಸಂರಕ್ಷಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದೆ. ಆದರೆ ಇದು ಅಘನಾಶಿನಿ-ವೇದಾವತಿ ನದಿ ಜೋಡಣೆಯ ಯೋಜನೆಯಲ್ಲದೆ ಕುತಂತ್ರದಿಂದ ಅಘನಾಶಿಯನ್ನು ಬೆಂಗಳೂರಿಗೆ ತೆಗೆದುಕೊಂಡ ಹೋಗುವ ಯೋಜನೆಯಾಗಿದೆ. ಇದೊಂದು ಪರಿಸರ ವಿನಾಶದ ಮುನ್ನುಡಿಯಾಗುವ ಯೋಜನೆಯಾಗಿದ್ದು ಇದರ ವಿರುದ್ಧ ಅಹಿಂಸಾತ್ಮಕ ಉಗ್ರ ಹೋರಾಟ ಮಾಡಬೇಕು.

ಈ ಯೋಜನೆಯನ್ನು ತಡೆಯಬೇಕಾದ ಕರ್ತವ್ಯ ನಮ್ಮದು ಹಾಗೂ ನಮ್ಮ ಜನಪ್ರತಿನಿಧಿಗಳದ್ದಾಗಿದೆ. ಇದು ಎತ್ತಿನ ಹೊಳೆ ಯೋಜನೆಗಿಂತಲೂ ದೊಡ್ಡದಾದ ಯೋಜನೆಯಾಗಿದ್ದು ಈ ಯೋಜನೆಯನ್ನು ತಡೆಗಟ್ಟುವಂತೆ ನಾವು ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ,ಸಂಸದ ಕಾಗೇರಿ ಅವರೊಂದಿಗೆ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ನೀಡಿದ್ದೇವೆ. ಅಘನಾಶಿನಿ ಬೇಡ್ತಿ ಕಣಿವೆ ಉಳಿಸಿ ಚಳುವಳಿಯ ಜೊತೆಗೆ ಹೊನ್ನಾವರದಲ್ಲಿಯೂ ಚಳುವಳಿಯು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಹೋರಾಟದಲ್ಲಿ ಬೇರೆ ಯಾವುದೇ ರೀತಿಯ ಒಡಕು ಧ್ವನಿಗಳು ಬರದೆ ಉತ್ತರ ಕನ್ನಡ ಜಿಲ್ಲೆಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ . ಜನೇವರಿ 11 ರಂದು ಶಿರಸಿಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಯಲಿದ್ದು ಅಲ್ಲಿ ಸಹ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಹೀತಾಸಕ್ತರು ಹಾಗು ಜಿಲ್ಲಾವಾಸಿಗಳು ಸೇರಬೇಕು ಎಂದರು.


ಹೆಗ್ಗರಣೆ ಗ್ರಾ.ಪಂ ಅಧ್ಯಕ್ಷ ನಾಗಪತಿ ಗೌಡ ಉಪಸ್ಥಿತರಿದ್ದರು.
ಎಂ.ಎಲ್ ಭಟ್ ಉಂಚಳ್ಳಿ ಸ್ವಾಗತಿಸಿದರು . ಪೂಣ೯ ಮತ್ತು ಪ್ರಜ್ಞಾ ಪ್ರಾಥ೯ನೆ ಹಾಡಿದರು . ಜಿ.ಎಂ ಭಟ್ ಕೊಡಖಂಡ ನಿರೂಪಣೆ ಮಾಡಿದರು.
