ಆದ್ಯೋತ್ ಸುದ್ದಿನಿಧಿ:
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಶಿರಸಿ ಕಾಗೇರಿಯಲ್ಲಿರುವ ನಿವಾಸದಲ್ಲಿ ಜರುಗಿದ ವಿವಾಹ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಮಿಸಿದ್ದರು.


ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ,ಕಾಂಗ್ರೆಸ್ ನೇತೃತ್ವದ ರಾಜ್ಯಸರಕಾರವು ಗೊಂದಲಗಳಿಂದ ಕೂಡಿದ್ದು ಎಳು-ಎಂಟು ಜನರು ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಸರಕಾರದ ಈ ಗೊಂದಲದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ.ರೈತರ ಬಗ್ಗೆ ಅಸಡ್ಡೆ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ರೈತರಿಗಾಗಿ ತಂದಿದ್ದ
ಕಿಸಾನಸಮ್ಮಾನಯೋಜನೆ,ರೈತವಿದ್ಯಾ ಯೋಜನೆಯನ್ನು ನಿಲ್ಲಿಸಲಾಗಿದೆ.ರೈತರ ಸಮಸ್ಯೆಯನ್ನು ಕೇಳುವ ಸಚೀವರೇ ಇಲ್ಲವಾಗಿದ್ದಾರೆ.ರೈತರ ಹಿತವನ್ನು ಕಾಪಾಡದ ಬೇಜವಾಬ್ದಾರಿ
ಸರಕಾರ ಇದಾಗಿದೆ ಎಂದು ಕಿಡಿಕಾರಿದರು.


ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮೊದಲ ಮೂರು-ನಾಲ್ಕು ದಿನ ಉತ್ತರಕರ್ನಾಟಕ ಭಾಗದ ರೈತರ ಸಮಸ್ಯೆ,ನೀರಾವರಿ ಯೋಜನೆ ಸೇರಿದಂತೆ ಹಲವು
ಸಮಸ್ಯೆಯನ್ನು ಚರ್ಚೆ ಮಾಡಲು ನಮ್ಮ ಪಕ್ಷದ ನಾಯಕ ಅಶೋಕ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿಯವರ ಜೊತೆ ಚರ್ಚಿಸಲಾಗಿದೆ ಕೇಂದ್ರಸರಕಾರದ ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯಸರಕಾರದ ಷಡ್ಯಂತ್ರ ನಡೆಸುತ್ತಿದೆ.ಯಾವುದೇ ಯೋಜನೆಗಳ ಅನುಷ್ಠಾನ ಮಾಡುತ್ತಿಲ್ಲ
ಕೇವಲ ಕೇಂದ್ರಸರಕಾರವನ್ನು ದೂರುವುದರಲ್ಲೆ ಕಾಲಜಳೆಯುತ್ತಿದ್ದಾರೆ ಎಂದು ಹೇಳಿದರು.


ಬಸವರಾಜ ಪಾಟೀಲ ಯತ್ನಾಳ ಬಿಜೆಪಿಗೆ ಮರಳುವ ಯಾವುದೇ ಪ್ರಸ್ತಾಪ ನಮ್ಮ ಪಕ್ಷದಲ್ಲಿಲ್ಲ.ಅವರು ಸಭೆ ನಡೆಸುವುದಕ್ಕೆ ನಮ್ಮ ಆಕ್ಷೇಪವಿಲ್ಲ ಅವರು ಸ್ವತಂತ್ರರು,ಕಾಂಗ್ರೆಸ್ ನ ಒಂದುಗುಂಪಿನ ಜೊತೆಗೂಡಿ ಸರಕಾರ ರಚಿಸುವ ಯಾವುದೇ ಉದ್ದೇಶ ನಮಗಿಲ್ಲ ಜನತೆ ಕಾಂಗ್ರೆಸ್ ಗೆ ಆಡಳಿತ ನಡೆಸಲು ಸ್ಪಷ್ಟ ಬಹುಮತ ನೀಡಿದ್ದಾರೆ. ನಮಗೆ ವಿರೋಧಪಕ್ಷದಲ್ಲಿರಲು ಸೂಚಿಸಿದ್ದಾರೆ ಹೀಗಿರುವಾಗ ನಾವು ಸರಕಾರ ರಚಿಸುವ ಪ್ರಯತ್ನ ಮಾಡುವುದಿಲ್ಲ.ಸರಕಾರದ ವಿಫಲತೆಯನ್ನು ಎತ್ತಿ ತೋರಿಸಿ ಜನರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೆವೆ ಎಂದು ವಿಜಯೇಂದ್ರ ಹೇಳಿದರು.
