ಫೆ.17- 2026 ರಿಂದ ಫೆ.24-2026ರವರೆಗೆ ಸಿದ್ದಾಪುರ ಶ್ರೀಕೊಂಡ್ಲಿಮಾರಿಕಾಂಬಾ ದೇವಿಯ ಜಾತ್ರೆ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಶ್ರೀಕೊಂಡ್ಲಿಮಾರಿಕಾAಬಾ ದೇವಿಯ ಜಾತ್ರೆಯನ್ನು ಫೆ.17-2026 ರಿಂದ ಫೆ.24-2026ರವರೆಗೆ ಎಂಟು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿ ಶ್ರಿಕೊಂಡ್ಲಿಮಾರಿಕಾಂಬಾದೇವಿಯ ಆಡಳಿತ ಮಂಡಳಿ ಅಧ್ಯಕ್ಷ. ಕೆ.ಜಿ.ನಾಯ್ಕಹಣಜೀಬೈಲ್,ಉತ್ತರಕನ್ನಡ ಜಿಲ್ಲೆಯ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಶ್ರೀಕೊಂಡ್ಲಿ ಮಾರಿಕಾಂಬಾದೇವಿಯ ಜಾತ್ರೆಯನ್ನು 2026 ನೇ ಇಸ್ವಿಯ ಫೆ.17 ರಿಂದ ಪೆ‌ 24
11 ಗ್ರಾಮದ ಗ್ರಾಮಸ್ಥರು ನಿರ್ಧರಿಸಿದ್ದಾರೆ

ಪ್ರತಿ ಐದುವರ್ಷಕ್ಕೊಮ್ಮೆ ಶ್ರೀದೇವಿಯ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು 11 ಗ್ರಾಮಗಳು ಇದರ ವ್ಯಾಪ್ತಿಯಲ್ಲಿ ಬರುತ್ತದೆ ಫೆ.10 ರಿಂದ ಅಂಕೆಯನ್ನು ಹಾಕಲಾಗುವುದು ನಂತರ ಮಾರಿಕಾಂಬೆಯ ಪಟ್ಟದ ಕೋಣದ ಮೆರವಣಿಗೆಯನ್ನು 11 ಗ್ರಾಮದಲ್ಲಿ ನಡೆಸಲಾಗುವುದು ಈ ಸಂದರ್ಭದಲ್ಲಿ ಪಟ್ಟದ ಕೋಣಕ್ಕೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಜಾತ್ರಯನ್ನು ವ್ಯವಸ್ಥಿತವಾಗಿ ನಡೆಸಲು 19 ಉಪಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ತಮ್ಮ ತಮ್ಮ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುತ್ತಾರೆ. ಜಾತ್ರಗೆ ತಾಲೂಕು,ಜಿಲ್ಲಾ,ರಾಜ್ಯಮಟ್ಟದ ಗಣ್ಯರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ.ಇದಕ್ಕಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.ಸ್ಥಳೀಯ ಪಪಂ,ಆರೋಗ್ಯ ಇಲಾಖೆ,ತಾಲೂಕು ಆಡಳಿತದ ಸಹಕಾರವನ್ನು ಬಯಸಲಾಗುವುದು ಈಗಾಗಲೇ ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಸೂಚನೆಯನ್ನು ನಿಡಿದ್ದು ಸಭೆಯನ್ನು ನಡೆಸಿ ಮಾರ್ಗದಶ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.


ಮಾರಿಕಾಂಬೆಗೆ ನೂತನ ದೇವಾಲಯ ನಿರ್ಮಾಣ ಮಾಡಲಾಗುತ್ತಿದ್ದು ಕಟ್ಟಡ ಸಂಪೂರ್ಣಗೊಳಿಸಲು ಇನ್ನಷ್ಟು ಹಣಕಾಸಿನ ಅವಶ್ಯಕತೆ ಇದೆ. ಜಾತ್ರೆಯ ಸಂದರ್ಭದಲ್ಲಿ ಬರುವ ಗಣ್ಯರಿಂದ ದೇಣಿಗೆ ಸಂಗ್ರಹಿಸಲು ತೀಮಾನಿಸಲಾಗಿದೆ. ಅಲ್ಲದೆ ಜಾತ್ರೆಯಲ್ಲಿ ಖರ್ಚನ್ನು ಕಡಿಮೆಗೊಳಿಸಿ ಉಳಿತಾಯ ಮಾಡಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಈ ಬಾರಿ ಕುಸ್ತಿ ಪಂದ್ಯಾವಳಿಯನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ. ಸಾಮಸ್ಕೃತಿಕ ಕಾರ್ಯಕ್ರಮವನ್ನು ಉಚಿತವಾಗಿ ನಡೆಸುವವರಿಗೆ ಅವಕಾಶ ನೀಡಲಾಗುವುದು ದೇವಿಯನ್ನು ಮೆರವಣಿಗೆಯಲ್ಲಿ ಗದ್ದುಗೆಗೆ ತರುವ ರಥವು ಹಳೆಯದಾಗಿದ್ದು ಹೊಸ ರಥತಯಾರಿಸಲಾಗುತ್ತಿದೆ. ಇದಕ್ಕೂ ದಾನಿಗಳಿಂದಲೇ ಹಣವನ್ನು ಒಟ್ಟು ಮಾಡಲಾಗುತ್ತಿದೆ ಒಟ್ಟಾರೆ ಜಾತ್ರೆಯಿಂದ ಹಣವನ್ನು ಉಳಿತಾಯ ಮಾಡಿ ಇನ್ನು ಒಂದು ವರ್ಷದಲ್ಲಿ ಮಾರಿಕಾಂಬಾ ದೇವಿಯ ನೂತನ ದೇವಾಲಯವನ್ನು ಲೋಕಾರ್ಪಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕೆ.ಜಿ.ನಾಯ್ಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಸಮಿತಿಯ ಮೊಕ್ತೇಸರ ರಮೇಶ ರಾಯ್ಕರ,ರವಿಕುಮಾರ ನಾಯ್ಕ,ಮಾರುತಿ ಕಿಮದ್ರಿ,ಚಂದ್ರಹಾಸ ನಾಯ್ಕ,ಸುದರ್ಶನ ಪಿಳ್ಳೆ,ಶಿವಾನಂದ ಹೊನ್ನೆಗುಮಡಿ, ಶ್ರೀರಾಮ ನಾಯ್ಕ,ಆರ್.ಎಂ.ಪಾಟೀಲ,ಜಿ.ಕೆ.ನಾಯ್ಕ,ರಾಜೇAದ್ರ ಕಿಂದ್ರಿ,ನಾರಾಯಣ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.


ಶ್ರೀಕೊಂಡ್ಲಿಮಾರಿಕಾAಬಾ ದೇವಿಯ ವ್ಯಾಪ್ತಿಗೆ ಸೇರುವ ಗ್ರಾಮಗಳು-;ಕೊಂಡ್ಲಿ,ಹಾಳದಕಟ್ಟಾ,ಕೊಪ್ಪ,ಬಾಲಿಕೊಪ್ಪ,ಹಣಜೀಬೈಲ್,ಹೊನ್ನೆಗುAಡಿ,ರವೀAದ್ರ ನಗರ,ಹೆಗ್ಗಾರಳ್ಳಿ,ಸಿದ್ದಾಪುರಪಟ್ಟಣ,ಕನ್ನಳ್ಳಿ,ಮಳವತ್ತಿ.

About the author

Adyot

Leave a Comment