ಸಿದ್ದಾಪುರದಲ್ಲಿ ರೈತರ ದಿನಾಚರಣೆ,

ಆದ್ಯೋತ್ ಸುದ್ದಿನಿಧಿ:
ರೈತರ ಹಿತೈಷಿ ಎಂದು ಕರೆಯಲ್ಪಡುವ ಭಾರತದ ೫ನೇ ಪ್ರಧಾನಿ ಚರಣ್ ಸಿಂಗ್ ಚೌಧರಿಯವರ ಜನ್ಮದಿನದ ಅಂಗವಾಗಿ ಸಿದ್ದಾಪುರದಲ್ಲಿ ಸ್ಥಳೀಯ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಯವರು ಕೃಷಿ ಇಲಾಖೆಯ ಸಭಾಂಗಣದಲ್ಲಿರೈತದಿನಾಚರಣೆ ಕರ್ಯಕ್ರಮವನ್ನು ಆಯೋಜಿಸಿದ್ದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ರೈತನ ಬದುಕು ಇಂದಿನ ಪರಿಸ್ಥಿತಿಯಲ್ಲಿ ಕಷ್ಟಕರವಾಗಿದೆ. ದೇಶದ ಜನರಿಗೆ ಸ್ವಾತಂತ್ರö್ಯ ಪೂರ್ವದಲ್ಲಿ ಆಹಾರಧಾನ್ಯದ ಕೊರತೆ ಇತ್ತು. ಹೊರ ದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ನಂತರದ ದಿನಗಳಲ್ಲಿ ಸರಕಾರದ ಯೋಜನೆಗಳಿಂದ ರೈತರ ಶ್ರಮದ ಫಲವಾಗಿ ಇಂದಿನ ದಿನಗಳಲ್ಲಿ ನಾವು ನೆಮ್ಮದಿಯ ಊಟವನ್ನು ಮಾಡುತ್ತಿದ್ದೇವೆ. ನಾವು ಆಹಾರ ಸೇವಿಸುವಾಗಲೆಲ್ಲ ರೈತರನ್ನು ನೆನೆಯಬೇಕು. ಅಂದು ಆಹಾರವನ್ನು ಆಮದು ಮಾಡಿಕೊಳ್ಳುತ್ತಿದ್ದ ನಾವು ಇಂದು ಬೇರೆ ದೇಶಗಳಿಗೆ ರಪ್ತು ಮಾಡುತ್ತಿರುವದು ರೈತರ ಶಕ್ತಿ ಹಾಗೂ ಹೆಮ್ಮೆಯ ವಿಚಾರ ಎಂದು ಹೇಳಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ರೈತರ ಕಷ್ಟಗಳನ್ನು ಮನವರಿಕೆ ಮಾಡಿಕೊಂಡು ನಷ್ಟವಾದ ಬೇಳೆಗೆ ಪರಿಹಾರವನ್ನು ನೀಡಬೇಕು . ಅಧಿಕಾರದ ದೃಷ್ಟಿಯನ್ನು ಹೊರತುಪಡಿಸಿ ಮಾನವೀಯ ದೃಷ್ಟಿಯಿಂದಲೂ ನೋಡಬೇಕು . ಇಂದಿನ ಜನತೆ ಸಮಗ್ರ ಕೃಷಿ ಪದ್ಧತಿಗೆ ಒತ್ತು ನೀಡಿ ರೈತರನ್ನು ಪ್ರೋತ್ಸಾಹಿ
ಸೋಣ ಮುಂದಿನ ದಿನಗಳಲ್ಲಿಈ ರೀತಿಯ ಕಾರ್ಯಕ್ರಮವು ರೈತರಿಗೆ ಗೌರವ ಕೊಡುವ ಕಾರ್ಯಕ್ರಮಗಳಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿಬರಬೇಕು ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಭತ್ತ ಹಾಗೂ ಅಡಿಕೆ ಬೆಳೆಗಳಿಗೆ ಹಾನಿಯಾಗಿದೆ ಇಂತಹ ಸಮಯದಲ್ಲಿ ನಾವು ರೈತರ ಪರವಾಗಿ ನಿಲ್ಲಬೇಕು ಇದು ಕೇವಲ ಶಾಸಕರ ಜವಾಬ್ದಾರಿ ಮಾತ್ರವಲ್ಲ ಉಸ್ತುವಾರಿ ಸಚೀವರು,ಅಧಿಕಾರಿಗಳು ಎಲ್ಲರ ಜವಾಬ್ದಾರಿ ಇರುತ್ತದೆ.ಎಂದು ಹೇಳಿದರು.

ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ , ರೈತರು ನಮ್ಮ ದೇಶದ ಬೆನ್ನೆಲುಬಾಗಿದ್ದಾರೆ. ಇಂದಿನ ಯುವ ಸಮಾಜದವರು ಕೃಷಿ ಕಡೆಗೆ ಮುಖ ಮಾಡಿದ್ದು ಸಂತಸದ ವಿಷಯವಾಗಿದೆ . ಸಾವಯುವ ಕೃಷಿಗೆ ಒತ್ತು ನೀಡಿ ಸ್ವಾಸ್ಥ್ಯ ಜೀವನ ಪದ್ಧತಿಯನ್ನು ಇಂದಿನ ಸಮಾಜ ಮಾಡಬೇಕಾಗಿದೆ. ತಾಲೂಕಿನಲ್ಲಿ ಬಹುಪಾಲು ಅಡಿಕೆ ಬೆಳೆಗಾರರಿದ್ದು ಮಾರಕವಾದ ಎಲೆಚುಕ್ಕಿ ರೋಗದ ಪರಿಣಾಮವಾಗಿ ಬೆಳೆಗಳು ಕುಂಠಿತವಾಗಿದೆ. ರೈತರು ಪರ್ಯಾಯ ಬೆಳೆಯಾಗಿ ರೇಷ್ಮೆ ಕೃಷಿಯನ್ನು ಮಾಡಬೇಕು , ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಬೆಳೆಯುವ ರೇಷ್ಮೆಗೆ ಉತ್ತಮ ಗುಣಮಟ್ಟವಿದ್ದು ಸರ್ಕಾರವು ಸಕಲ ಸೌಲಭ್ಯವನ್ನು ನೀಡಿ ರೇಷ್ಮೆ ಬೆಳೆಗಳನ್ನು ಬೆಳೆಯಲು ರೈತರಿಗೆ ಸಹಾಯ ಹಸ್ತವನ್ನು ಜೊತೆಗೆ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಹಾಗೂ ಕಚೇರಿಯನ್ನು ಸ್ಥಾಪಿಸಬೇಕೆಂದು ಹೇಳಿದರು.


ವೇದಿಕೆಯಲ್ಲಿ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ,ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ,ಕೃಷಿಕ ಸಮಾಜದ ಉಪಾಧ್ಯಕಕ್ಷ ಪಿ.ವಿ.ಹೆಗಡೆ ಹೊಸಗದ್ದೆ,ಪ್ರದಾನ ಕಾರ್ಯದರ್ಶಿ ಪರಮೇಶ್ವರ ನಾಯ್ಕ, ಮುಖಂಡರಾದ ವಿ.ಎನ್.ನಾಯ್ಕ,ಕೆ.ಎಂಎಪ್ ನಿರ್ದೇಶಕ ಪಿ.ವಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ವಿತರಿಸಲಾಯಿತು.ಕೃಷಿ ಅಧಿಕಾರಿ ಪ್ರಶಾಂತ ನಾಯ್ಕ ಸ್ವಾಗತಿಸಿದರು.

About the author

Adyot

Leave a Comment