ಆದ್ಯೋತ್ ಸುದ್ದಿನಿಧಿ
ಅಘನಾಶಿನಿ ನದಿ ನೀರು ಎತ್ತುವಿಕೆ ಅಸಮತೋಲನದಿಂದ, ಜೀವ ವೈವಿಧ್ಯಮಯಕ್ಕೆ ಮಾರಕವಾಗಿರುವ ಅಘನಾಶಿನಿ ನದಿ ನೀರು ಎತ್ತುವಿಕೆಯು ಜನ ಸಾಮಾನ್ಯರಲ್ಲಿ ಸಾಮಾಜಿಕ ಆರ್ಥಿಕ ಪರಿಣಾಮ ಉಂಟಾಗುವುದರಿಂದ ಅವೈಜ್ಙಾನಿಕ ಯೋಜನೆಯನ್ನು ಸರ್ಕಾರ ಕೈ ಬಿಡಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಅಘನಾಶಿನಿ ನದಿ ನೀರು ಎತ್ತುವಿಕೆ ಯೋಜನೆಯಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಗಿಡ ನಾಶಗೊಳ್ಳುವುದಲ್ಲದೇ ಸುಮಾರು ಆರು ನೂರು ಎಕರೆ ಅಘನಾಶಿನಿ ಕಣಿವೆಯ ಮೌಲ್ಯಯುತ ಜೀವ ವೈವಿಧ್ಯಕ್ಕೆ ಹಾನಿ ಉಂಟಾಗುವುದು, ಅಲ್ಲದೇ ಪಶ್ಚಿಮ ಘಟ್ಟ ಪ್ರದೇಶದ ಜನ ಜೀವನ, ಪ್ರಾಣಿ, ಪಕ್ಷಿಗಳ ಹಾಗೂ ಅತ್ಯಮೂಲ್ಯ ಗಿಡ ಸಸ್ಯಗಳ ಮೇಲೆ ಪರಿಣಾಮ ಬೀಳುವುದರಿಂದ ನೈಸರ್ಗಿಕ ಅಸಮತೋಲನಕ್ಕೆ ಯೋಜನೆಯು ಕಾರಣವಾಗುವುದೆಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಸುಮಾರು ಇಪ್ತೂö್ಮರು ಸಾವಿರ ಕೋಟಿ ವೆಚ್ಚದಲ್ಲಿ ಮೂವತ್ತೆöÊದು ಟಿ,ಎಂ,ಸಿ ನೀರನ್ನು ಅಘನಾಶಿನಿಯಿಂದ ವಾಣಿವಿಲಾಸ ಜಲಾಶಯಕ್ಕೆ ಸುಮಾರು ನೂರಾ ತೊಂಭತ್ನಾಲ್ಕು ಕಿಲೋಮೀಟರ್ ಪೈಪ್ ಲೈನ್ ಮೂಲಕ ಸಿದ್ದಾಪುರ ಮತ್ತು ಸಾಗರ ಮೂಲಕ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಮುಂತಾದ ಜಿಲ್ಲೆಗಳಿಗೆ ಪೈಪ್ ಲೈನ್ ಕಾಲುವೆ ಮೂಲಕ ನೀರು ಒಯ್ಯುವ ಯೋಜನೆಯಿಂದ ಅಘನಾಶಿನಿಯ ಪರಿಸರದಲ್ಲಿ ನೀರಿನ ಸಂಕಟಕ್ಕೆ ಕಾರಣವಾಗುವುದಲ್ಲದೇ, ಸಮುದ್ರದಲ್ಲಿನ ಉಪ್ಪು ನೀರು ಕರಾವಳಿ ಭಾಗದ ಕೃಷಿ ಚಟುವಟಿಕೆ ಮತ್ತು ಸಾಗುವಳಿ ಕ್ಷೇತ್ರಕ್ಕೆ ಆತಂಕ ಉಂಟಾಗುವುದೆAಬ ಆತಂಕವನ್ನು ರವೀಂದ್ರ ನಾಯ್ಕ ವ್ಯಕ್ತಪಡಿಸಿದರು.


ಕಾರ್ಯ ಸಾಧ್ಯತೆಯ ಯೋಜನೆಯಲ್ಲ:
ಮಳೆಗಾಲದಲ್ಲಿ ಅಘನಾಶಿನಿಯ ಪರಿಸರದಲ್ಲಿ ಸುಮಾರು ಆರು ನೂರು ಚದರ ಕಿ,ಮೀ ವಿಸ್ತೀರ್ಣದಲ್ಲಿ ಎರಡು ಸಾವಿರದ ಎಂಟು ನೂರಾ ಅರವತೈದು ಮಿ,ಮೀ ಸರಾಸರಿ ಮಳೆ ಆಗುತ್ತದೆ. ಅದರಂತೆ ಶಿರಸಿಯ ಅಘನಾಶಿನಿ ಉಗಮ ಸ್ಥಾನದಲ್ಲಿ ಎರಡು ಸಾವಿರದ ಐದುನೂರು ಮಿ,ಮೀ ಮಳೆ ಆಗುವುದು, ಒಟ್ಟಾರೆಯಾಗಿ ಎಂಬತ್ತೊಂದು ಟಿಎಂಸಿ ನೀರು ಸಮುದ್ರಕ್ಕೆ ಸೇರಿದರೆ ಉಂಚಳ್ಳಿ ಜಲಪಾತದ ಬಳಿ ಹರಿಯುವ ನೀರಿನ ಪ್ರಮಾಣ ಕೇವಲ ನಲವತ್ತೆಂಟು ಟಿಎಂಸಿ ನೀರು ಇದರಲ್ಲಿ ಮೂವತ್ತೆಂಟು ಟಿಎಂಸಿ ನೀರು ಎತ್ತುವಿಕೆಗೆ ಕಾರ್ಯ ಸಾಧುವಲ್ಲ ಎಂದು ಅವರು ಪ್ರತಿಪಾದಿಸುತ್ತಾ, ಅಘನಾಶಿನಿ ಪ್ರದೇಶದಿಂದ ನೀರು ಎತ್ತುವಿಕೆಗೆ ಅರವತ್ತೊಂದು ಮೆಗಾ ವ್ಯಾಟ್ ವಿದ್ಯುತ್‌ದಿಂದ, ಇಪ್ಪತ್ಮೂರು ಸಾವಿರ ಕೋಟಿ ವೆಚ್ಚದ ಯೋಜನೆಯು ಕಾರ್ಯ ಸಾಧ್ಯತೆಯ ಯೋಜನೆ ಅಲ್ಲವೆಂದು ರವೀಂದ್ರ ನಾಯ್ಕ ತಿಳಿಸಿದರು.
