ಆದ್ಯೊತ್ ಸುದ್ದಿನಿಧಿ:
ರಾಷ್ಟೀಯ ಯೋಜನೆಗಳನ್ನ ಜಾರಿಗೆ ಬರುವ ಪೂರ್ವದಲ್ಲಿ ಸ್ಥಳೀಕರ ಜನಾಭಿಪ್ರಾಯ ಸಂಗ್ರಹ ಅವಶ್ಯ. ಯೋಜನೆ ಜಾರಿಗೆ ಪೂರ್ವದಲ್ಲಿ ಜನ ಅಭೀಪ್ರಾಯಕ್ಕೆ ಮಾನ್ಯತೆ ಮಾಡದೇ ಜನವಿರೋಧಿ ಯೋಜನೆ ಜಾರಿಗೆ ತರುತ್ತಿರುವುದು ಖೇದಕರವೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.



ಅಘನಾಶಿನಿ ನದಿ ಜೋಡಣೆ ಯೋಜನೆಗೆ ಜನಜಾಗೃತೆ ಮೂಡಿಸುವ ಅಂಗವಾಗಿ ಉ.ಕ.ಜಿಲ್ಲೆ ಸಿದ್ದಾಪುರ ತಾಲೂಕಿನ
ಅಣಲೇಬೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಮಕ್ಕಿಯಲ್ಲಿ ಫ-2 ರಂದು ಜರುಗಲಿರುವ ಸಾರ್ವಜನಿಕ ಸಭೆ ಮತ್ತು ಪಾದಯಾತ್ರೆ ಅಂಗವಾಗಿ ನಿಲ್ಕುಂದ ಗ್ರಾಮ ಪಂಚಾಯತ್ ವ್ಯಾಪಿಯ ಮಣಿಗಾರ ಮತ್ತು ಮುಳಗುಂದ, ಹೆಗ್ಗರಣೆ ಗ್ರಾಮ ಪಂಚಾಯತಿಯ ಹುಳ್ಳುಂಡೆ ಗ್ರಾಮ ಮತ್ತು ತಂಡಾಗುAಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂದ್ಯಾನೆ ಮಠ, ಶಿವಳಮನೆ, ಹುತ್ಗಾರ, ಹುಕ್ಕಳ್ಳಿ ಗ್ರಾಮಗಳಲ್ಲಿ ಜರುಗಿದ ಜನಸಂಪರ್ಕದ ಸಭೆಗಳಲ್ಲಿ ಮಾತನಾಡಿದರು.


ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯನಂತರದ 80 ವರ್ಷಗಳ ನಂತರ ವಾಸ್ತವ್ಯದ ಮನೆ ಅವಲಂಭಿತ ಪ್ರದೇಶ ತ್ಯಜಿಸಿ ಯೋಜನೆಗಳಿಗೆ ಹಸ್ತಾಂತರಿಸುವ ಪ್ರಸಂಗ ಬರುತ್ತೀರುವುದು ಗ್ರಾಮೀಣ ಭಾಗದ ಜನಜೀವನದ ಮೇಲೆ ಮಾರಕ ಪರಿಣಾಮ ಬಿಳುವುದರಲ್ಲಿ ಸಂಶಯವಿಲ್ಲ. ಮುಂದಿನ ದಿನಗಳನ್ನ ಎದುರಿಸುವ ಯೋಜನೆ ಸ್ಥಗಿತಗೊಳಿಸುವಲ್ಲಿ ಸದೃಡವಾಗಬೇಕು ಎಂದು ಹೇಳಿದರು.

ಜನವಿರೋಧಿ ಅಘನಾಶಿನಿ ಎತ ನೀರಾವರಿ ಯೋಜನೆಗೆ ವ್ಯಾಪಕವಾದ ಹೋರಾಟಕ್ಕೆ ಸಜ್ಜಾಗಿದ್ದೇವೆ. ಜನರ ಜೀವನವನ್ನು ಸಂಪೂರ್ಣವಾಗಿ ತ್ಯಾಗ ಮಾಡಿ ಅವೈಜ್ಞಾನಿಕ ಯೋಜನೆ ಜಾರಿಗೆ ಬರಲು ಅವಕಾಶ ಮಾಡಿ ಕೊಡುವುದಿಲ್ಲ. ಈ ಹಿನ್ನಲೆಯಲ್ಲಿ ವ್ಯಾಪಕ ಹೋರಾಟ ಹಮ್ಮೀಕೊಳ್ಳಲಾಗುವುದು ಎಂದು ಹಿರಿಯ ಹೋರಾಟಗಾರ ನಾಗಪತಿ ಗೌಡ ಹುಕ್ಕಳಿ ಅವರು ಹೇಳಿದರು.

ಜನ ಸಂಪರ್ಕದ ನೇತೃತ್ವವನ್ನ ಸಂಚಾಲಕ ಹರಿಹರ ನಾಯ್ಕ ಓಂಕಾರ, ಇಬ್ರಾಹೀಂ ಗೌಡಳ್ಳಿ, ನಾಗಪತಿ ಗೌಡ ಹುಕ್ಕಳ್ಳಿ, ಸೀತಾರಾಮ ಗೌಡ ಹುಕ್ಕಳ್ಳಿ, ಮಂಜುನಾಥ ನಾಯ್ಕ ಹೊಂಡಗದ್ದೆ, ಈರ ಗೌಡ ನೀರಗಾನ್, ಸುಬ್ರಾಯ ನಾಯ್ಕ ಹೊಂಡಗದ್ದೆ, ರಾಜು ಮಡಿವಾಳ ಮಣಿಗಾರ, ಶ್ರೀಧರ ಮಡಿವಾಳ ಮಣಿಗಾರ, ಮಧುಕರ್ ಹೆಗಡೆ ಶಿರಗುಣಿ, ಮಂಜುನಾಥ ನಾರಾಯಣ ನಾಯ್ಕ, ಮಂಜುನಾಥ ನೆಟಗಾರ, ಶಿವಾನಂದ ನೆಟಗಾರ, ಅಜಿತ್ ಮಡಿವಾಳ, ಪ್ರಸನ್ನ ಹೆಗಡೆ ನರಸಗಲ್, ವೆಂಕಟರಮಣ ಚೆನ್ನಯ್ಯ ಹುಲ್ಲುಂಡೆ, ಗಣಪ ಗೌಡ ತಾರೀಮನೆ, ಶ್ರೀಧರ ಹೆಗಡೆ ನೀರಗಾನ, ಚಂದನ್ ನಾಯ್ಕ, ರಾಮಚಂದ್ರ ಮಡಿವಾಳ ಕೆಪ್ಪನ ಹಾಸಗದ್ದೆ, ಗನಿ ಸಾಬ ನಿಲ್ಕುಂದ, ವೆಂಕಟರಮಣ ನಾಯ್ಕ, ಕೃಷ್ಣ ಗೌಡ, ಸತೀಶ್ ಮರಾಠಿ ದನಳ್ಳಿ, ನಾರಾಯಣ ನಾಯ್ಕ ದ್ಯಾವಕಾರ, ಸೀತಾರಾಮ ಗೌಡ ಹುತ್ಗಾರ ಹುಲಿಯಾ ಗೌಡ ದನ್ನಳ್ಳಿ, ರಾಮ ನಾಯ್ಕ, ನರಸಿಂಹ ಪೂಜಾರಿ ದ್ಯಾವಕಾರ, ಜಗನ್ನಾಠ ಪೂಜಾರಿ ದ್ಯಾವಕಾರ, ಲಿಂಗ ಗೌಡ ನೀರಗಾನ, ಬಿ ಟಿ ನಾಯ್ಕ ಮುಂತಾದವರು ವಹಿಸಿದ್ದರು.
