ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ದಕ್ಷಿಣ ಭಾರತದ ಪ್ರಸಿದ್ದ ಜಾತ್ರೆಯ ಶ್ರೀ ಮಾರಿಕಾಂಬಾ ದೇವಿಯ ಗದ್ದುಗೆಯ ಎದುರಿನ ಮಂಟಪ ವಾಲಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಜಾತ್ರೆಗಾಗಿ ಬಂದಿರವ ಪಟ್ಟಣದ ಕೊಟೇಕೇರಿಯಲ್ಲಿರುವ ಅಮ್ಯೂಸಮೆಂಟನ ಜೊಯಿಂಟ ವಿಲ್ ನ ಸುಮಾರು 10 -12 ಬುಟ್ಟಿಗಳು ಉದುರಿಬಿದ್ದಿರುತ್ತದೆ. ಮಳೆಯಿಂದಾಗಿ ಜನರು ಇರದ ಕಾರಣ ಯಾವುದೆ ಜೀವ ಹಾನಿ ಅಥವಾ ಅಪಾಯ ಸಂಭವಿಸಿಲ್ಲ
ಮಳೆಯಿಂದ ಜಾತ್ರೆಯ ಪೇಟೆಗಳು ಅಸ್ತವ್ಯಸ್ತವಾಗಿದ್ದು ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ವ್ಯಾಪಾರಿಗಳು ಪರದಾಡುವಂತಾಯಿತು.